For Quick Alerts
  ALLOW NOTIFICATIONS  
  For Daily Alerts

  ಹೊಸಬರ 'ತನಿಖೆ'ಗೆ ಸಾಥ್ ನೀಡಿದ ಶಿವರಾಜ್ ಕುಮಾರ್

  By Pavithra
  |

  25 ಹಿಂದೆ 'ತನಿಖೆ' ಎನ್ನುವ ಹೆಸರಿನಲ್ಲಿ ಚಿತ್ರವೊಂದು ತೆರೆ ಕಂಡಿತ್ತು. ಮತ್ತದೇ ಟೈಟಲ್ ನಲ್ಲಿ ಹೊಸಬರ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಜಿ ಎಸ್ ಕಲಿಗೌಡ ಎನ್ನುವವರು ಸಿನಿಮಾವನ್ನು ನಿರ್ದೇಶನ ಮಾಡಿದ್ದು ಕೆ ಬಸವರಾಜ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

  'ತನಿಖೆ' ಚಿತ್ರದ ಫಸ್ಟ್ ಲುಕ್ ಅನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಿಡುಗಡೆ ಮಾಡಿದ್ದಾರೆ. ಕೆ ಎಮ್ ಚೇತನ್ ಬಾಬು ಸಂಗೀತವಿರುವ 'ತನಿಖೆ' ಸಿನಿಮಾಗೆ ಶ್ಯಾಮ್ ಸಿಂದನೂರು ಛಾಯಾಗ್ರಹಣ ಮಾಡಿದ್ದಾರೆ.

  ಸೋನಾಲಿ ಬೇಂದ್ರೆಯ ನೀಳ ಕೇಶಕ್ಕೆ ಕುತ್ತು ತಂದ ಕ್ಯಾನ್ಸರ್ ಸೋನಾಲಿ ಬೇಂದ್ರೆಯ ನೀಳ ಕೇಶಕ್ಕೆ ಕುತ್ತು ತಂದ ಕ್ಯಾನ್ಸರ್

  25 ವರ್ಷಗಳ ಹಿಂದೆ ಗುಲ್ಜಾರ್ ಖಾನ್ 'ತನಿಖೆ' ಎನ್ನುವ ಸಿನಿಮಾವನ್ನು ಮಾಡಿದ್ದರು ಈಗ ಹೊಸಬರೆಲ್ಲರೂ ಸೇರಿ ಕುತೂಹಲಕಾರಿ ಕಥೆಯನ್ನು ಮಾಡಿಕೊಂಡು ಸಿನಿಮಾ ತಯಾರಿ ಮಾಡಿದ್ದಾರೆ. ಚಿತ್ರದಲ್ಲಿ ಅಭಿನಯಿಸಿರುವ ಬಹುತೇಕ ಕಲಾವಿದರು ಹೊಸಬರೇ ಆಗಿದ್ದಾರೆ.

  ಸದ್ಯ ಫಸ್ಟ್ ಲುಕ್ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಕ್ಯೂರಿಯಾಸಿಟಿ ಮೂಡಿಸಿರುವ ಚಿತ್ರತಂಡ ಶೀಘ್ರದಲ್ಲೇ ಚಿತ್ರದ ಟ್ರೇಲರ್ ಅನ್ನು ರಿಲೀಸ್ ಮಾಡಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೊಸಬರ ಪ್ರಯೋಗಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದು 'ತನಿಖೆ' ಚಿತ್ರವೂ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿ ಆಗುತ್ತಾ ಕಾದು ನೋಡಬೇಕಿದೆ.

  English summary
  Kannada Tanikhe film First Look was released by actor Shivaraj Kumar and Dhruv Sarja. The Tanikhe cinema has been directed by GS Kaligouda.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X