For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ ಬಾಲಿವುಡ್ ಚಾಕೋಲೇಟ್ ಬೆಡಗಿ ತನುಶ್ರೀ

  By Rajendra
  |

  ಬಾಲಿವುಡ್ ಚಿತ್ರರಂಗದ 'ರಿಸ್ಕ್', 'ಚಾಕೋಲೇಟ್' ಬೆಡಗಿ ತನುಶ್ರೀ ದತ್ತಾ ಕನ್ನಡಕ್ಕೆ ಅಡಿಯಿಟ್ಟಿದ್ದಾರೆ. ತನುಶ್ರೀ ಜೊತೆಗೆ ಆಕೆಯ ತಂಗಿ ಇಷಿತಾ ದತ್ತಾ ಕೂಡಾ ಒಟ್ಟಿಗೆ ಗಾಂಧಿನಗರಕ್ಕೆ ಕಾಲಿಟ್ಟಿದ್ದಾರೆ. ವಿಜಯ್ ರಾಘವೇಂದ್ರ ಮುಖ್ಯಭೂಮಿಕೆಯಲ್ಲಿರುವ ಚಿತ್ರಕ್ಕೆ 'ಏನಿದು ಮನಸಿನಲಿ' ಎಂದು ಹೆಸರಿಡಲಾಗಿದೆ.

  ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಹೆಚ್ ಆರ್ ಶ್ರೀಕಾಂತ್. ಈ ಹಿಂದೆ ಅವರು 'ಟೀನೇಜ್, ಈ ವಯಸ್ಸೇ ಒಂಥರಾ' ಚಿತ್ರವನ್ನು ನಿರ್ದೇಶಿಸಿದ್ದರು. 'ಏನಿದು ಮನಸಿನಲ್ಲಿ' ಚಿತ್ರ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ.

  ಬೆಂಗಳೂರು ಮೂಲದ ಮುಂಬೈ ನಿವಾಸಿ ನಿಯಾಜ್ ಅಹ್ಮದ್ ಚಿತ್ರದ ನಿರ್ಮಾಪಕರು. ಚಿತ್ರದ ಪಾತ್ರವರ್ಗದಲ್ಲಿ ಭುವನ್, ಮಿತ್ರಾ ಮತ್ತಿತರು ಇದ್ದಾರೆ. ಚಿತ್ರಕ್ಕೆ ಛಾಯಾಗ್ರಹಣ ಮಹೇಶ್ ಕೆ ದೇವ್, ಸಂಗೀತ ಮನೋಜ್ ಹಾಗೂ ಸಂಕಲನ ಕಿಶನ್.

  ಈಗಾಗಲೆ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಬೆಂಗಳೂರು ಸುತ್ತಮುತ್ತ ಸಕಲೇಶಪುರದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಎರಡನೇ ಹಂತದ ಚಿತ್ರೀಕರಣ ಆಗಸ್ಟ್ ಮೊದಲ ವಾರದಿಂದ ಆರಂಭವಾಗಲಿದೆ ಎಂದು ಚಿತ್ರದ ನಿರ್ಮಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಇನ್ನು ತನುಶ್ರೀ ದತ್ತಾ ಬಗ್ಗೆ ಹೇಳಬೇಕಾದರೆ, ಈಕೆ ಮಾಜಿ ಫೆಮೀನಾ ಮಿಸ್ ಇಂಡಿಯಾ ಯೂನಿವರ್ಸ್ 2004ರ ವಿಜೇತೆ. ಜಾರ್ಕಂಡ್ ರಾಜ್ಯದ ಜೆಮ್ ಶೆಡ್ ಪುರ ಈಕೆಯ ಸ್ವಸ್ಥಳ. ಪುಣೆ ವಿಶ್ವವಿದ್ಯಾಲಯದ ಪದವೀಧರೆ. ಬಾಲಿವುಡ್ ನಷ್ಟೇ ಅಲ್ಲದೆ ತೆಲುಗು, ತಮಿಳು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

  ವಿಜಯ್ ರಾಘವೇಂದ್ರ ಅಭಿನಯದ ಚಿತ್ರಗಳು ಬಾಕ್ಸಾಫೀಸಲ್ಲಿ ಸತತವಾಗಿ ಸೋಲುಣ್ಣುತ್ತಿವೆ. ವಿನಾಯಕ ಗೆಳೆಯರ ಬಳಗ, ಕಳ್ಳ ಮಳ್ಳ ಸುಳ್ಳ ಚಿತ್ರಗಳಿಗೆ ಸಾಧಾರಣ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಬ್ರೇಕ್ ನೀಡಲೇಬೇಕಾದಂತಹ ಅನಿವಾರ್ಯತೆ ವಿಜಯ್ ಗೆ ಎದುರಾಗಿದೆ. 'ಏನಿದು ಮನಸಲಿ' ಚಿತ್ರ ಅವರ ಕೈಹಿಡಿಯಲಿ ಎಂದು ಆಶಿಸೋಣ. (ಒನ್ ಇಂಡಿಯಾ ಕನ್ನಡ)

  English summary
  Sensational bollywood heroine Tanushree Dutta and her sister Ishita Dutta to star in the Kannada film “Yenidu Manasali” directed by Shrikanth HR (his second film after about to be released multi crore movie TEENAGE – ee vayasse vonthara), produced by Niyaaz Ahmed. starring Vijay Raghavendra, Tanushree Dutta, Ishita Dutta, Bhuvan, Mitra and others.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X