»   » ಸ್ಟೈಲಿಶ್ ಅವತಾರಗಳಲ್ಲಿ ಮಿಂಚುತ್ತಿರುವ 'ತಾರಕ್'

ಸ್ಟೈಲಿಶ್ ಅವತಾರಗಳಲ್ಲಿ ಮಿಂಚುತ್ತಿರುವ 'ತಾರಕ್'

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ನಿರೀಕ್ಷೆ ಹೆಚ್ಚಿಸುತ್ತಿದೆ. ಇದೀಗ, ದರ್ಶನ್ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿರುವ ಸ್ಟೈಲಿಶ್ ಪೋಸ್ಟರ್ ಗಳು ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ಆಗಸ್ಟ್ ನಲ್ಲಿ ದರ್ಶನ್ 'ತಾರಕ್' ಚಿತ್ರದ ಹಾಡುಗಳ ಹಬ್ಬ

ಮಿಲನ ಪ್ರಕಾಶ್ ನಿರ್ದೇಶನದ ಈ ಸಿನಿಮಾದ ಚಿತ್ರೀಕರಣ ಮುಗಿಸಿದ್ದು, ಈಗ ಡಬ್ಬಿಂಗ್ ಹಂತದಲ್ಲಿದೆ. 'ಜಗ್ಗುದಾದ' ಸಿನಿಮಾದ ನಂತರ ದರ್ಶನ್ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾದು ಕುಳಿತಿದ್ದಾರೆ. ಸಖತ್ ಸ್ಪೆಷಾಲಿಟಿಗಳನ್ನು ಹೊಂದಿರುವ 'ತಾರಕ್', ಚಿತ್ರದ ಪೊಸ್ಟರ್ ಗಳಲ್ಲಿಯೂ ಅಷ್ಟೇ ವಿಶೇಷತೆಗಳನ್ನು ತೋರಿಸಿದೆ. ಮುಂದೆ ಓದಿ...

ತಾಯಿ - ಮಗ

ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ 'ತಾರಕ್' ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ದರ್ಶನ್ ಮತ್ತು ಹಿರಿಯ ನಟಿ ಸುಮಿತ್ರಾ ತಾಯಿ ಮಗನಾಗಿ ಕಾಣಿಸಿಕೊಂಡಿದ್ದಾರೆ. ಮಾಸ್ ಜೊತೆ ಜೊತೆಗೆ ಸಾಕಷ್ಟು ಫ್ಯಾಮಿಲಿ ಓರಿಯೆಂಟೆಡ್ ಅಂಶಗಳು 'ತಾರಕ್' ಸಿನಿಮಾದಲ್ಲಿದೆ.

ಸ್ಟೈಲಿಶ್ 'ತಾರಕ್'

'ತಾರಕ್' ಇಡೀ ಸಿನಿಮಾದ ಮೇಕಿಂಗ್ ಸಖತ್ ಸ್ಟೈಲಿಶ್ ಆಗಿದೆಯಂತೆ. ಅದೇ ರೀತಿ ದರ್ಶನ್ ಅವರ ಲುಕ್ ಕೂಡ ತುಂಬ ಹೊಸದಾಗಿ ಕಾಣುತ್ತಿದೆ. ಅದರಲ್ಲಿಯೂ ಬೈಕ್ ಮೇಲೆ ಕುಳಿತು ಡಿ-ಬಾಸ್ ಪೋಸ್ ಕೊಟ್ಟಿರುವ ಪೋಸ್ಟರ್ ಸಖತ್ ಹೈಲೈಟ್ ಆಗಿದೆ.

ರಗ್ಬಿ ಪ್ಲೇಯರ್

'ತಾರಕ್' ಚಿತ್ರದಲ್ಲಿ ರಗ್ಬಿ ಪ್ಲೇಯರ್ (ಅಮೇರಿಕನ್ ಫುಟ್ ಬಾಲ್ ಪ್ಲೇಯರ್) ಆಗಿ ದರ್ಶನ್ ಅಬ್ಬರಿಸಲಿದ್ದಾರೆ. ರಗ್ಬಿ ಪ್ಲೇಯರ್ ಅವತಾರದಲ್ಲಿ ಅವರ ಲುಕ್ ಅಭಿಮಾನಿಗಳಿಗೆ ಸಖತ್ ಇಷ್ಟ ಆಗಿದೆ.

ಮೊದಲ ಪೋಸ್ಟರ್

ದೇವರಾಜ್ ಮತ್ತು ದರ್ಶನ್ ಅವರ ಈ ಪೋಸ್ಟರ್ ಹಿಂದೆಯೇ ರಿಲೀಸ್ ಆಗಿತ್ತು. ಇದು 'ತಾರಕ್' ಸಿನಿಮಾದ ಮೊದಲ ಪೋಸ್ಟರ್ ಆಗಿದ್ದು, ಇಲ್ಲಿ ನಟ ದೇವರಾಜ್ ಡಿಫ್ರೆಂಟ್ ಗೆಟಪ್ ನಲ್ಲಿ ಮಿಂಚಿದ್ದರು.

ಇದೇ ತಿಂಗಳು ಆಡಿಯೋ ರಿಲೀಸ್

'ತಾರಕ್' ಸಿನಿಮಾದಲ್ಲಿ ದರ್ಶನ್ ಗೆ ನಾಯಕಿಯರಾಗಿ ಶೃತಿ ಹರಿಹರನ್ ಮತ್ತು ಶಾನ್ವಿ ಶ್ರೀವತ್ಸವ್ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ನೀಡಿದ್ದು, ಚಿತ್ರದ ಆಡಿಯೋ ಬಿಡುಗಡೆ ಇದೇ ತಿಂಗಳಿನಲ್ಲಿ ಆಗಲಿದೆ.

English summary
Challenging Star Darshan's 'Tarak' movie new posters released. The movie is directed by Milana Prakash features Shanvi Srivastava, Sruthi Hariharan in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada