»   » ಸೆಪ್ಟಂಬರ್ 21ಕ್ಕೆ 'ತಾರಕ್' ಕಡೆಯಿಂದ ಸಿಹಿ ಸುದ್ದಿ

ಸೆಪ್ಟಂಬರ್ 21ಕ್ಕೆ 'ತಾರಕ್' ಕಡೆಯಿಂದ ಸಿಹಿ ಸುದ್ದಿ

Posted By:
Subscribe to Filmibeat Kannada

'ತಾರಕ್' ಚಿತ್ರದ ಟೀಸರ್ ಮೂಲಕ ಸದ್ದು ಮಾಡುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಮತ್ತೊಂದು ಸಿಹಿ ಸುದ್ದಿ ಕೊಟ್ಟಿದ್ದಾರೆ. ಹೌದು, ಸೆಪ್ಟಂಬರ್ 21ಕ್ಕೆ ಡಿ-ಬಾಸ್ ಅಭಿಮಾನಿಗಳಿಗೆ ವಿಶೇಷ. ಯಾಕಂದ್ರೆ, ಆ ದಿನ 'ತಾರಕ್' ಚಿತ್ರದ ಟ್ರೈಲರ್ ಬಿಡುಗಡೆಯಾಗುತ್ತಿದೆ.

ಒಂದು ನಿಮಿಷದ ಟೀಸರ್ ನೋಡಿಯೇ ಥ್ರಿಲ್ ಆಗಿದ್ದ ಪ್ರೇಕ್ಷಕರು, ಈಗ ಟ್ರೈಲರ್ ನಲ್ಲಿ ಮತ್ತೇನ್ ಸರ್ಪ್ರೈಸ್ ಸಿಗಲಿದೆ ಎಂಬ ಕುತೂಹಲದಿಂದ ಕಾಯುತ್ತಿದ್ದಾರೆ. ಈ ನಿರೀಕ್ಷೆ ನಾಳೆ ಸಂಜೆ 6 ಗಂಟೆಗೆ ತೆರೆ ಬೀಳಲಿದೆ.

'ಕುರುಕ್ಷೇತ್ರ' ಸೆಟ್ ನಲ್ಲಿ 'ಪವಿತ್ರ' ದರ್ಶನ ಫೋಟೋ ಲೀಕ್: ಮುನಿರತ್ನ ಆಕ್ರೋಶ

Tarak Trailer will be Released on september 21st

ಟೀಸರ್ ನಲ್ಲಿ ದರ್ಶನ್ ಅವರ ಸ್ಟೈಲಿಶ್ ಲುಕ್, ಗೆಟಪ್ ರಿವಿಲ್ ಮಾಡಿದ್ದ ಚಿತ್ರತಂಡ ಉಳಿದ ಪಾತ್ರಗಳ ಪರಿಚಯ ಮಾಡಿರಲಿಲ್ಲ. ಇದೀಗ, ಟ್ರೈಲರ್ ನಲ್ಲಿ ಫ್ಯಾಮಿಲಿ ಪ್ಯಾಕೇಜ್ ನ ಎಲ್ಲ ಅಂಶಗಳನ್ನ ಅನಾವರಣ ಮಾಡಲಿದೆ.

ದರ್ಶನ್ 'ತಾರಕ್'ಗೆ ಟಾಲಿವುಡ್ ಪ್ರಿನ್ಸ್ ಚಾಲೆಂಜ್.!

ಮಿಲನ ಪ್ರಕಾಶ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಶ್ರುತಿ ಹರಿಹರನ್, ಶಾನ್ವಿ ಶ್ರೀವಾಸ್ತವ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಡೈನಾಮಿಕ್ ಹೀರೋ ದೇವರಾಜ್ ಪ್ರಮುಖ ಪಾತ್ರ ನಿರ್ವಹಿಸಿದ್ದು, ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿರುವ ಹಾಡುಗಳು ಸೂಪರ್ ಹಿಟ್ ಎನಿಸಿಕೊಂಡಿದೆ. ದಸರಾ ಹಬ್ಬದ ಪ್ರಯುಕ್ತ ಸೆಪ್ಟಂಬರ್ 29 ರಂದು 'ತಾರಕ್' ಸಿನಿಮಾ ತೆರೆಕಾಣುತ್ತಿದೆ.

English summary
Darshan's most awaited 'Tarak' Trailer will be released this Thursday (21st September 2017) at 6 pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada