»   » ಬಿಡುಗಡೆಯಾದ ಮೊದಲ ದಿನವೇ 'ತಾರಕ್'ಗೆ ಶಾಕ್ ಕೊಟ್ಟ ಕಿಡಿಗೇಡಿಗಳು.!

ಬಿಡುಗಡೆಯಾದ ಮೊದಲ ದಿನವೇ 'ತಾರಕ್'ಗೆ ಶಾಕ್ ಕೊಟ್ಟ ಕಿಡಿಗೇಡಿಗಳು.!

Posted By:
Subscribe to Filmibeat Kannada
tarak : Audience Makes Facebook Live Of Tarak Movie | Filmibeat Kannada

ಕಳೆದ ಎರಡು ವಾರಗಳ ಹಿಂದೆ ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಚಿತ್ರವನ್ನ ಯುವಕನೊಬ್ಬ ಫೇಸ್ ಬುಕ್ ಲೈವ್ ಮಾಡಿ ಸಿಕ್ಕಿ ಬಿದ್ದಿದ. ಈಗ 'ಭರ್ಜರಿ' ಚಿತ್ರದ ನಂತರ ದರ್ಶನ್ ಅಭಿನಯದ 'ತಾರಕ್' ಚಿತ್ರಕ್ಕೂ ಫೇಸ್ ಬುಕ್ ಲೈವ್ ಕಾಟ ಎದುರಾಗಿದೆ.

ನಿನ್ನೆ (ಸೆಪ್ಟೆಂಬರ್ 29) ರಾಜ್ಯಾದ್ಯಂತ 'ತಾರಕ್' ಸಿನಿಮಾ ಬಿಡುಗಡೆಯಾಗಿತ್ತು. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಅನಾಮಿಕ ವ್ಯಕ್ತಿಗಳು ಫೇಸ್ ಬುಕ್ ಲೈವ್ ನಲ್ಲಿ ತಾರಕ್ ಚಿತ್ರದ ಕೆಲವು ದೃಶ್ಯಗಳನ್ನ ಪ್ರಸಾರ ಮಾಡಿದ್ದಾರೆ.

ಹಾಗಿದ್ರೆ, 'ತಾರಕ್' ಚಿತ್ರದ ಯಾವ ದೃಶ್ಯ ಮತ್ತು ಯಾರು ಲೀಕ್ ಮಾಡಿದ್ದಾರೆ ಎಂಬುದನ್ನ ತಿಳಿಯಲು ಮುಂದೆ ಓದಿ....

'ತಾರಕ್' ದೃಶ್ಯ ಲೀಕ್

ದರ್ಶನ್ ಅವರ 'ತಾರಕ್' ಚಿತ್ರದ ಕೆಲವು ದೃಶ್ಯಗಳನ್ನ ಫೇಸ್ ಬುಕ್ ಲೈವ್ ಮೂಲಕ ಕಿಡಿಗೇಡಿಗಳು ಲೀಕ್ ಮಾಡಿದ್ದಾರೆ. ಈ ಬಗ್ಗೆ ದರ್ಶನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಮರ್ಶೆ: ದರ್ಶನ್ ಇಮೇಜ್ ಬದಲಿಸಿದ 'ತಾರಕ್'

ರಗ್ಬಿ ಆಡುವ ದೃಶ್ಯ ಲೀಕ್

ದರ್ಶನ್ ಎಂಟ್ರಿ ದೃಶ್ಯ ಸೇರಿ 40 ಸೆಕೆಂಡ್ ಗಳ ಸೀನ್ ಹರಿಬಿಡಲಾಗಿದೆ. ರಗ್ಬಿ ಆಡುವ ದರ್ಶನ್ ದೃಶ್ಯಗಳು ವಿಡಿಯೋದಲ್ಲಿದ್ದು, ಚಿತ್ರಮಂದಿರದಲ್ಲಿ ವಿಡಿಯೋ ಮಾಡಲಾಗಿದೆ.

ಅಭಿಮಾನಿಗಳಿಂದಲೇ ಲೀಕ್ ಆಗಿರಬಹುದು

ಸಿನಿಮಾ ನೋಡಲು ಬಂದಿದ್ದ ಅಭಿಮಾನಿಗಳಿಂದಲೇ ಈ ರೀತಿಯ ಕೃತ್ಯವಾಗಿದೆ ಎಂದು ಹೇಳಲಾಗುತ್ತಿದೆ. ಆದ್ರೆ, ಅದು ಯಾರು ಎಂದು ಇನ್ನು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದ್ರೆ, ರೆಕಾರ್ಡ್ ಮಾಡಿರುವ ವಿಡಿಯೋಗಳನ್ನ ಫೇಸ್ ಬುಕ್, ವಾಟ್ಸಪ್ ಮತ್ತು ಯ್ಯೂಟ್ಯೂಬ್ ಗಳಲ್ಲಿ ಹರಿದುಬಿಟ್ಟಿದ್ದಾರೆ.

ನಿರ್ದೇಶಕ ಪ್ರಕಾಶ್ ಏನಂದ್ರು?

ಇನ್ನು ಬಗ್ಗೆ ಮಾತನಾಡಿದ ಚಿತ್ರದ ನಿರ್ದೇಶಕ ಪ್ರಕಾಶ್, ''ತಾರಕ್' ಸಿನಿಮಾದ ಕೆಲ ಸೀನ್ ಗಳು ಫೇಸ್ ಬುಕ್ ನಲ್ಲಿ ಹರಿದಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಯಾರು, ಏಕೆ ಹೀಗೆ ಮಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ. ನಮ್ಮ ಪ್ರಯತ್ನಕ್ಕೆ ಬೆಲೆ ಕೊಡಬೇಕು. ಅದು ಬಿಟ್ಟು ಹೀಗೆ ಪೈರಸಿ ಮಾಡುವುದು ಸರಿಯಲ್ಲ'' ಎಂದಿದ್ದಾರೆ.

ಅಭಿಮಾನನಾ ಅಥವಾ ಉದ್ದೇಶಪೂರ್ವಕನಾ?

ತಮ್ಮ ನೆಚ್ಚಿನ ನಟ ಸಿನಿಮಾಗಳಲ್ಲಿ ಅವರ ಇಂಟ್ರೊ ಸಾಂಗ್, ಫೈಟ್ಸ್ ಹೀಗೆ ಕೆಲವು ದೃಶ್ಯಗಳನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಡಲಾಗುತ್ತಿದೆ. ಇದು ಅಭಿಮಾನನಾ ಅಥವಾ ಉದ್ದೇಶಪೂರ್ವಕನ ಗೊತ್ತಿಲ್ಲ.

ಎಷ್ಟೇ ಕ್ರಮ ತಗೊಂಡ್ರು, 'ಭರ್ಜರಿ' ಸಿನಿಮಾ ಆನ್ ಲೈನ್ ನಲ್ಲಿ ಲೀಕ್ ಆಗೋಯ್ತು.!

'ಭರ್ಜರಿ' ಚಿತ್ರಕ್ಕೂ ನಷ್ಟವಾಗಿತ್ತು

ಸೆಪ್ಟೆಂಬರ್ 15 ರಂದು ತೆರೆಕಂಡಿದ್ದ 'ಭರ್ಜರಿ' ಚಿತ್ರಕ್ಕೂ ಈ ಪೈರಸಿ ಕಾಟ ಎದುರಾಗಿತ್ತು. ಸುಮಾರು 20 ನಿಮಿಷಗಳ ಸಿನಿಮಾವನ್ನ ಫೇಸ್ ಬುಕ್ ನಲ್ಲಿ ಲೈವ್ ಪ್ರಸಾರ ಮಾಡಿದ್ದರು. ಇದರಿಂದ ಚಿತ್ರತಂಡಕ್ಕೆ ದೊಡ್ಡ ನಷ್ಟವಾಗಿತ್ತು.

ಫೇಸ್ ಬುಕ್ ಲೈವ್ ಮೂಲಕ 'ಭರ್ಜರಿ' ಸಿನಿಮಾ ಬಿಟ್ಟಿ ಪ್ರಸಾರ.!

English summary
After Kannada Movie Bharjari, Now Darshan's Tarak was streamed live on Facebook by Unknown Person.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada