»   » ಸ್ನೇಹಿತರು ಟೀಮ್ ತರುಣ್ ಚಂದ್ರ 'ಪದೇ ಪದೇ'ಗೆ ಶಿಫ್ಟ್

ಸ್ನೇಹಿತರು ಟೀಮ್ ತರುಣ್ ಚಂದ್ರ 'ಪದೇ ಪದೇ'ಗೆ ಶಿಫ್ಟ್

Posted By:
Subscribe to Filmibeat Kannada
ನಾಯಕನಟ ತರುಣ್ ಚಂದ್ರ 'ಪದೇ ಪದೇ'ಗೆ ಸಿದ್ಧತೆ ನಡೆಸುತ್ತಿದ್ದಾರೆ. ತರುಣ್ ನಾಯಕತ್ವದ ಬರಲಿರುವ ಚಿತ್ರದ ಹೆಸರೇ 'ಪದೇ ಪದೇ.' ನಿರ್ದೇಶಕ ನಾಗರಾಜ್ ಪೀಣ್ಯ ಅವರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ತುಂಬಾ ದಿನಗಳ ಮೊದಲೇ ಈ ಚಿತ್ರ ಘೋಷಣೆಯಾಗಿದ್ದರೂ ಮುಹೂರ್ತ ಆಗಿರಲಿಲ್ಲ. ಈಗ ಮುಹೂರ್ತಕ್ಕೆ ಮುಹೂರ್ತ ಕೂಡಿಬಂದಿದೆ.

ಇದೇ ತಿಂಗಳು 14 ರಂದು ಪದೇ ಪದೇ ಚಿತ್ರಕ್ಕೆ ಮುಹೂರ್ತಕ್ಕೆ ನಿಗದಿಯಾಗಿದೆ. ಚಿತ್ರಕ್ಕಾಗಿ ಪರಭಾಷೆಯ ಇಬ್ಬರು ನಾಯಕಿಯರನ್ನು ನಿರ್ದೇಶಕ ನಾಗರಾಜ್ ಕರೆ ತಂದಿದ್ದಾರೆ. ಮೃದುಲಾ ಹಾಗೂ ಅಖಿಲಾ ಎಂಬುದು ಅವರಿಬ್ಬರು ಹೆಸರುಗಳು. ಈ ಇಬ್ಬರೂ ನಾಯಕಿಯರು ನಾಯಕ ತರುಣ್ ಜತೆ ಪದೆ ಪದೇ ರೊಮ್ಯಾನ್ಸ್ ಮಾಡಲಿದ್ದಾರೆ.

ಈ ಪದೇ ಪದೇ ಚಿತ್ರದ ನಿರ್ಮಾಪಕರು ವಿಜಯ್ ಮತ್ತು ಆನಂದ್ ಕುಮಾರ್. ಜೂನ್ 14ರಂದೇ ಮುಹೂರ್ತ ನಡೆಸಿ ಚಿತ್ರೀಕರಣ ಪ್ರಾರಂಭಿಸಲಿ ರೆಡಿಯಾಗಿದೆ ಚಿತ್ರತಂಡ. ಈ 'ಪದೇ ಪದೇ' ಚಿತ್ರದ್ದು ತ್ರಿಕೋನ ಪ್ರೇಮಕಥೆ ಎನ್ನಲಾಗಿದೆ. ಚಿತ್ರ ನೋಡಿ ಹೊರಬಂದ ಪ್ರೇಕ್ಷಕರಿಗೆ ಹೊಸದೊಂದು ಭಾವನೆ ಹುಟ್ಟು ಹಾಕುವಂತಹ ಸಿನಿಮಾ ನೀಡಲಿದ್ದೇನೆ"ಎಂದಿದ್ದಾರೆ.

ಮಲ್ಟಿಸ್ಟಾರರ್ ಚಿತ್ರ ಸ್ನೇಹಿತರು ಚಿತ್ರೀಕರಣವನ್ನು ಇತ್ತೀಚಿಗಷ್ಟೇ ಮುಗಿಸಿರುವ ತರುಣ್ ಚಂದ್ರ, ಇದೀಗ ಪದೇ ಪದೇ ಜಪಿಸುತ್ತಿದ್ದಾರೆ. ಖುಷಿ ಚಿತ್ರದಲ್ಲೇ ತಮ್ಮ ನಟನಾ ಸಾಮರ್ಥ್ಯ ತೋರಿಸಿದ್ದ ತರುಣ್, ಪ್ರಜ್ವಲ್ ದೇವರಾಜ್ ಜೊತೆ 'ಗೆಳೆಯ' ಮಾಡಿ ಗೆದ್ದವರು.

ನಂತರವೂ ಅಷ್ಟೇ, ದಿನೇಶ್ ಬಾಬು ನಿರ್ದೇಶನದ 'ನಾನಲ್ಲ' ಚಿತ್ರದಲ್ಲಿ ಅಮೋಘ ಅಭಿನಯ ನೀಡುವ ಮೂಲಕ ಚಿತ್ರರಸಿಕರಲ್ಲದೇ ವಿಮರ್ಶಕರ ಗಮನವನ್ನೂ ಸೆಳೆದಿದ್ದಾರೆ. ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ತರುಣ್ ಚಂದ್ರರಿಗೆ ಸವಾಲೆನ್ನಿಸುವ ಪಾತ್ರ ಇದುವರೆಗೂ ದೊರೆತಿಲ್ಲ ಎನ್ನಬಹುದು.

ಈ ಪದೇ ಪದೇ ಚಿತ್ರದಲ್ಲಿ ಅಭಿನಯಕ್ಕೆ ಸಾಕಷ್ಟು ಅವಕಾಶವಿದೆ. ನಾನೊಬ್ಬನೇ ನಾಯಕನಾಗಿರುವುದರಿಂದ ಚಿತ್ರದ ಸಂಪೂರ್ಣ ಜವಾಬ್ಧಾರಿ ನನ್ನ ಮೇಲಿದೆ. ಅದನ್ನು ಸ್ಪಷ್ಷವಾಗಿ ಅರಿತಿರುವ ನಾನು, ಸಂಪೂರ್ಣವಾಗಿ ಚಿತ್ರವನ್ನು ನನ್ನ ಹೆಗಲಮೇಲೆ ಹೊತ್ತುಕೊಂಡು ಸಮರ್ಥವಾಗಿ ಪಾತ್ರವನ್ನು ನಿರ್ವಹಿಸಲಿದ್ದೇನೆ" ಎಂದಿದ್ದಾರೆ ತರುಣ್ ಚಂದ್ರ. (ಒನ್ ಇಂಡಿಯಾ ಕನ್ನಡ)

English summary
Actor Tarun Chandra's upcoming movie Pade Pade Launches on 14th June 2012. This movie director is Nagaraj Peenya. Vijay and Ananda Kumar are the Producers. Tarun Chandra is waiting for a big hit in his carier.
Please Wait while comments are loading...