twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾ 100: ವೇದಿಕೆಯಲ್ಲೇ ಆಯೋಜಕರನ್ನು ಬೆಂಡೆತ್ತಿದ ನಿರ್ದೇಶಕ

    |

    ಭಾರತೀಯು ಸಿನಿಮಾ 100 ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಚೆನ್ನೈನಲ್ಲಿ ತಮಿಳುನಾಡಿನ ಸೆಲ್ವಿ ಜಯಲಲಿತಾ ಸರಕಾರ ಆಯೋಜಿಸಿದ್ದ ಕಾರ್ಯಕ್ರಮದ ಬಗ್ಗೆ ಟೀಕೆ ಟಿಪ್ಪಣಿಗಳು ಹರಿದು ಬರುತ್ತಲೇ ಇದೆ.

    ಕಾರ್ಯಕ್ರಮದ ಎರಡನೇ ದಿನ ಆಯೋಜಕರು ತೀವ್ರ ಮುಜುಗರಕ್ಕೆ ಈಡಾಗುವ ಘಟನೆಗೆ ವೇದಿಕೆ ಸಾಕ್ಷಿಯಾಯಿತು. ತೆಲುಗಿನಲ್ಲಿ ವಿಭಿನ್ನ ಚಿತ್ರಗಳನ್ನು ನೀಡಿ ಜನಮನ್ನಣೆ ಗಳಿಸಿರುವ ನಿರ್ದೇಶಕ ಆರ್ ನಾರಾಯಣ ಮೂರ್ತಿ ಆಯೋಜಕರನ್ನು ವೇದಿಕೆಯ ಮೇಲೆ ಸರಿಯಾಗಿ ತರಾಟೆಗೆ ತೆಗೆದು ಕೊಂಡಿದ್ದಾರೆ.

    ಕನ್ನಡದ ಕಲಾವಿದರಿಗೂ ಸರಿಯಾದ ಮನ್ನಣೆ ಸಿಗಲಿಲ್ಲ ಎನ್ನುವ ಸುದ್ದಿಗಳೂ ಬರುತ್ತಿವೆ. ಶೃತಿ ಕೂಡಾ ಕಾರ್ಯಕ್ರಮದ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದರು. ಕನ್ನಡದ ಪ್ರಮುಖ ನಟರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು.

    ಕರ್ನಾಟಕ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿಗಳಿಗೂ ಆಹ್ವಾನವಿರಲಿಲ್ಲ. ಒಟ್ಟಿನಲ್ಲಿ ಕಲಾವಿದರನ್ನು ಗೌರವಿಸುವ ಈ ಕಾರ್ಯಕ್ರಮ ತಮಿಳುನಾಡು ಸರಕಾರದ ಕಾರ್ಯಕ್ರಮದಂತೆ ನಡೆದಿದ್ದು ಬಹುತೇಕ ಎಲ್ಲಾ ಕಲಾವಿದರಿಗೆ ಬೇಸರ ತಂದಿದೆ.

    ತೆಲುಗು ನಿರ್ದೇಶಕ ನಾರಾಯಣ ಮೂರ್ತಿ ಸಿಟ್ಟಿಗೆ ಕಾರಣವೇನು? ಸ್ಲೈಡಿನಲ್ಲಿ..

    ನಾರಾಯಣ ಮೂರ್ತಿ

    ನಾರಾಯಣ ಮೂರ್ತಿ

    ಕಾರ್ಯಕ್ರಮದ ಎರಡನೇ ದಿನ ಟಾಲಿವುಡ್ ಚಿತ್ರ ಜಗತ್ತಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ಐಟಂ ಸಾಂಗಿನ ಹಾಡೊಂದಕ್ಕೆ ನೃತ್ಯ ನಡೆಯುತ್ತಿತ್ತು. ಕಾರ್ಯಕ್ರಮದ ನಡುವೆಯೇ ವೇದಿಕೆ ಏರಿದ ನಾರಾಯಣ ಮೂರ್ತಿ ಆಯೋಜಕರಿಂದ ಮೈಕ್ ಕಿತ್ತುಕೊಂಡು ಇದೇನು ನೂರು ವರ್ಷದ ಕಾರ್ಯಕ್ರಮವೇ ಅಥವಾ ಆಡಿಯೋ ಬಿಡುಗಡೆ ಸಮಾರಂಭವೇ ಎಂದು ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿದರು.

    ಭಾರತೀಯ ಸಿನಿಮಾ 100

    ಭಾರತೀಯ ಸಿನಿಮಾ 100

    ಭಾರತೀಯ ಸಿನಿಮಾ 100 ಇದರ ಸಂಭ್ರಮವನ್ನು ಕಲಾತ್ಮಕವಾಗಿ ಆಯೋಜಿಸುವುದನ್ನು ಬಿಟ್ಟು ಇದೇನು ಐಟಂ ಸಾಂಗುಗಳು. ತೆಲುಗು ಚಿತ್ರರಂಗವೆಂದರೆ ಬರೀ ಐಟಂ ಸಾಂಗುಗಳುವಿರುವ ಚಿತ್ರೋದ್ಯಮ ಅಂದು ಕೊಂಡಿದ್ದೀರಾ?

    ರಘುಪತಿ ವೆಂಕಯ್ಯ ನಾಯ್ಡು

    ರಘುಪತಿ ವೆಂಕಯ್ಯ ನಾಯ್ಡು

    ತೆಲುಗು ಕಾರ್ಯಕ್ರಮ ನಡೆಯುವ ಈ ವೇದಿಕೆಗೆ ರಘುಪತಿ ವೆಂಕಯ್ಯ ನಾಯ್ಡು ಅವರ ಹೆಸರನ್ನು ಇಟ್ಟಿದ್ದೀರಾ. ದಕ್ಷಿಣ ಭಾರತದ ಸಿನಿಮಾ ಜಗತ್ತಿಗೆ ರಘುಪತಿ ವೆಂಕಯ್ಯ ನಾಯ್ಡು ಅವರ ಸೇವೆ ಏನೆಂದು ನಿಮಗೆ ತಿಳಿದಿದೆಯೇ? ಇಡೀ ಭಾರತೀಯ ಚಿತ್ರೋದ್ಯಮ ಹೆಮ್ಮೆ ಪಡುವಂತ ಕಲಾವಿದರು ಅವರು. ಅವರ ಹೆಸರಿಗೆ ಮತ್ತು ತೆಲುಗು ಚಿತ್ರೋದ್ಯಮಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದೀರಾ ಎಂದು ನಾರಾಯಣ ಮೂರ್ತಿ ಕೂಗಾಡಲಾರಂಭಿಸಿದರು.

    ಸನ್ಮಾನ ಸಮಾರಂಭ

    ಸನ್ಮಾನ ಸಮಾರಂಭ

    ತೆಲುಗು ಚಿತ್ರದ್ಯೋಮದ ಕಲಾವಿದರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ತಮಿಳು ನಿರ್ದೇಶಕರಿಗೆ ಸನ್ಮಾನ ಮಾಡುತ್ತೀರಾ. ಬಾಲಚಂದರ್ ಬಗ್ಗೆ ನಮಗೆ ಗೌರವವಿದೆ. ನಮ್ಮ ಉದ್ಯಮದ ದಾಸರಿ ನಾರಾಯಣ ರಾವ್, ವಿಶ್ವನಾಥ್, ರಾಘವೇಂದ್ರ ರಾವ್, ರಾಮ ನಾಯ್ಡು ಅವರಿಗೆ ಸನ್ಮಾನ ಮಾಡಲಿಲ್ಲ. ಟಾಲಿವುಡ್ ಉದ್ಯಮಕ್ಕೆ ಅಗೌರವ ತೋರಿಸುವುದು ನಿಮ್ಮ ಉದ್ದೇಶವೇ ಎಂದು ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು.

    ತೆಲುಗು ಚಿತ್ರೋದ್ಯಮ

    ತೆಲುಗು ಚಿತ್ರೋದ್ಯಮ

    ಕ್ರಾಂತಿಕಾರಿ ನಿರ್ದೇಶಕ ನಾರಾಯಣ ಮೂರ್ತಿ ಅವರ ಈ ಅನಿರೀಕ್ಷಿತ ವರ್ತನೆಯಿಂದ ಆಯೋಜಕರು ಅಕ್ಷರಸಃ ದಂಗಾದರು. ಕೊನೆಗೆ ತೆಲುಗು ನಟ ಡಾ. ರಾಜಶೇಖರ್ ಮತ್ತು ದಕ್ಷಿಣ ಭಾರತ ಚಲನ ಚಿತ್ರರಂಗದ ಅಧ್ಯಕ್ಷ ಕಲ್ಯಾಣ್ ಇಬ್ಬರೂ ಸೇರಿ ನಾರಾಯಣ ಮೂರ್ತಿ ಅವರಿಂದ ಮೈಕ್ ಕಿತ್ತುಕೊಂಡು ಭಲವಂತವಾಗಿ ವೇದಿಕೆಯಿಂದ ಕೆಳಗಿಳಿಸಿದರು.

    English summary
    R Narayana Murthy, Telugu industries revolutionary filmmaker, blasted organizers in the celebration of 100 years of Indian cinema programme dais in Chennai.
    Wednesday, September 25, 2013, 18:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X