»   » ಪುನೀತ್ ತೆಕ್ಕೆಗೆ ತೆಲುಗಿನ ಯಶಸ್ವಿ ಚಿತ್ರ ದೂಕುಡು

ಪುನೀತ್ ತೆಕ್ಕೆಗೆ ತೆಲುಗಿನ ಯಶಸ್ವಿ ಚಿತ್ರ ದೂಕುಡು

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ತೆಲುಗು ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ 'ದೂಕುಡು' ಚಿತ್ರ ಕನ್ನಡಕ್ಕೆ ರೀಮೇಕ್ ಆಗಲಿದೆ. ತೆಲುಗಿನಲ್ಲಿ ಪ್ರಿನ್ಸ್ ಮಹೇಶ್ ಬಾಬು ಪೋಷಿಸಿದ್ದ ಪಾತ್ರವನ್ನು ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪೋಷಿಸಲಿದ್ದಾರೆ.

ಚಿತ್ರ ಯಾವಾಗ ಸೆಟ್ಟೇರಲಿದೆ, ನಾಯಕಿ ಯಾರು, ಪಾತ್ರವರ್ಗ, ತಾಂತ್ರಿಕ ಬಳಗದಲ್ಲಿ ದಲ್ಲಿ ಯಾರ್ಯಾರು ಇರುತ್ತಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಸದ್ಯಕ್ಕೆ ಮಾತುಕತೆ ಹಂತದಲ್ಲಿದ್ದು ಎಲ್ಲವೂ ಪಕ್ಕಾ ಆದ ಕೂಡಲೆ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಪುನೀತ್ ಸದ್ಯಕ್ಕೆ 'ನಿನ್ನಿಂದಲೇ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಇದಾದ ಬಳಿಕವಷ್ಟೇ ದೂಕುಡು ಸಮಾಚಾರ. ಪುನೀತ್ 38ನೇ ಹುಟ್ಟುಹಬ್ಬ ಸಂಭ್ರಮಕ್ಕೆ 'ದೂಕುಡು' ಚಿತ್ರದ ನಿರ್ಮಾಪಕ ಅನಿಲ್ ಸುಂಕರ್ ಬಂದು ಶುಭಕೋರಿದ್ದರು.

ಆ ಸಂದರ್ಭದಲ್ಲೇ ಚಿತ್ರದ ರೀಮೇಕ್ ಬಗ್ಗೆಯೂ ಮಾತುಕತೆ ನಡೆದಿದೆ. ಪುನೀತ್ ಸಹ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಎಲ್ಲವೂ ಓಕೆ ಆಗಿದ್ದು ಚಿತ್ರದ ಘೋಷಣೆಯೊಂದು ಮಾತ್ರ ಬಾಕಿ ಇದೆ ಎನ್ನುತ್ತವೆ ಮೂಲಗಳು.

ಶ್ರೀನು ವೈಟ್ಲ ನಿರ್ದೇಶನದ ದೂಕುಡು ಚಿತ್ರ ಬಾಕ್ಸ್ ಆಫೀಸಲ್ಲಿ ರು.100 ಕೋಟಿ ಗಳಿಸುವ ಮೂಲಕ ಟಾಲಿವುಡ್ ನಲ್ಲಿ ದಾಖಲೆ ನಿರ್ಮಿಸಿತ್ತು. ಹಳಿತಪ್ಪಿದ್ದ ಮಹೇಶ್ ಬಾಬು ಅವರ ವೃತ್ತಿಜೀವನದಲ್ಲಿ ಮಹತ್ತರ ತಿರುವು ನೀಡಿದ ಚಿತ್ರವಿದು. ನಂದಿ ಪ್ರಶಸ್ತಿ ಸೇರಿದಂತೆ ಫಿಲಂಫೇರ್ ಪ್ರಶಸ್ತಿಗಳಿಗೆ ಚಿತ್ರ ಪಾತ್ರವಾಗಿದೆ.

ಈ ಹಿಂದೆ ಮಹೇಶ್ ಬಾಬು ಅಭಿನಯದ 'ಒಕ್ಕಡು' ಚಿತ್ರ ಅಜಯ್ ಆಗಿ ರೀಮೇಕ್ ಆಗಿತ್ತು. ತೆಲುಗಿನ ಮತ್ತೊಂದು ಚಿತ್ರ ರೆಡಿ ಕನ್ನಡಕ್ಕೆ ರಾಮ್ ಆಗಿ ರೀಮೇಕ್ ಆಗಿತ್ತು. ಈಗ ದೂಕುಡು ಚಿತ್ರದ ಸರದಿ. ಅಂದಹಾಗೆ ಮೂಲ ಚಿತ್ರದಲ್ಲಿ ಸಮಂತಾ ನಾಯಕಿ.

English summary
Power Star Puneet Rajkumar gives a green signal to play a lead role in Telugu remade Dookudu, the action comedy film directed by Sreenu Vaitla. The film set a box office record for the Telugu film industry by collecting a gross of more than Rs. 1 billion.
Please Wait while comments are loading...