»   » ಡಿಜಿಟಲ್ ರೂಪದಲ್ಲಿ ಶ್ರೇಷ್ಠ ಚಿತ್ರ 'ಶಂಕರಾಭರಣಂ'

ಡಿಜಿಟಲ್ ರೂಪದಲ್ಲಿ ಶ್ರೇಷ್ಠ ಚಿತ್ರ 'ಶಂಕರಾಭರಣಂ'

Posted By:
Subscribe to Filmibeat Kannada

ಭಾರತದ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲೊಂದಾದ 'ಶಂಕರಾಭರಣಂ" (1979) ಚಿತ್ರ ಡಿಜಿಟಲ್ ಆವೃತ್ತಿಯಲ್ಲಿ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಕೆ.ವಿಶ್ವನಾಥ್ ನಿರ್ದೇಶನದ ಈ ಚಿತ್ರ 35 ಎಂಎಂನಿಂದ ಸಿನಿಮಾಸ್ಕೋಪ್ ಗೆ ಬದಲಾಗಿತ್ತು. ಈಗ ಡಿಜಿಟಲ್ ರೂಪ ಪಡೆಯುತ್ತಿದೆ.

ಬದಲಾಗುತ್ತಿರುವ ತಾಂತ್ರಿಕತೆಗೆ ತಕ್ಕಂತೆ ಈ ಸಿನಿಮಾ ಕೂಡ ಹೊಸ ಹೊಸ ತಂತ್ರಜ್ಞಾನದೊಂದಿಗೆ ಆಯಾ ತಲೆಮಾರಿನ ಪ್ರೇಕ್ಷಕರನ್ನು ರಂಜಿಸುತ್ತಲೇ ಇದೆ. ಈಗ ಡಿಟಿಎಸ್ ಧ್ವನಿಯೊಂದಿಗೆ ಡಿಜಿಟಲೈಜೇಷನ್ ರೂಪ ಪಡೆಯುತ್ತಿದೆ. ಇಂದಿನ ಕಾಲದ ಪ್ರೇಕ್ಷಕರ ಮನರಂಜಿಸಲು ಬರುತ್ತಿದೆ.

J. V. Somayajulu in Śankarabharanam

ಶ್ರೀಶಬರಿಗಿರಿ ವಾಸನ್ ಮೂವೀಸ್ ಲಾಂಛನದಲ್ಲಿ ಪಿಎಸ್ ಹರಿಹರನ್ ಈ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ. 'ಶಂಕರಾಭರಣಂ' ಚಿತ್ರ ತೆಲುಗು ಭಾಷೆಯದ್ದಾದರೂ ಭಾರತದೆಲ್ಲೆಡೆ ವಿಶೇಷ ಮನ್ನಣೆ ಪಡೆದ ಚಿತ್ರ. ತೆಲುಗು ಚಿತ್ರರಂಗದಲ್ಲಿ ಬಂದಂತಹ ಅತ್ಯುತ್ತಮ ಚಿತ್ರ ಎಂಬ ಕೀರ್ತಿಗೂ ಪಾತ್ರವಾಗಿದೆ.

ಅಧ್ಯಾತ್ಮಿಕ ಸಂಗೀತ, ಸಾಹಿತ್ಯ ಮೌಲ್ಯಗಳಿಂದ ಕೂಡಿದ 'ಶಂಕರಾಭರಣಂ' ಚಿತ್ರದಲ್ಲಿ ಖ್ಯಾತ ಸಂಗೀತ ನಿರ್ದೇಶಕ ದಿವಂಗತ ಕೆ.ವಿ.ಮಹದೇವನ್ ಅವರ ರಾಗಸಂಯೋಜನೆಯ ಪ್ರತಿ ಹಾಡು ಇಂದಿಗೂ ಜುಳುಜುಳು ಹರಿಯುವ ನದಿಯಂತೆ.

ಈ ಚಿತ್ರದಲ್ಲಿ ಶಂಕರಶಾಸ್ತ್ರಿಯಾಗಿ ಜೆ.ವಿ.ಸೋಮಯಾಜಿಲು ಅಮೋಘ ಅಭಿನಯ ನೀಡಿದ್ದರು. ತುಳಸಿಯಾಗಿ ಮಂಜು ಭಾರ್ಗವಿ, ಚಂದ್ರಮೋಹನ್, ಶಂಕರಶಾಸ್ತ್ರಿ ಪುತ್ರಿಯಾಗಿ ರಾಜ್ಯಲಕ್ಷ್ಮಿ, ಅಲ್ಲು ರಾಮಲಿಂಗಯ್ಯ ಪಾತ್ರಗಳನ್ನು ಪೋಷಿಸಿದ್ದಾರೆ. ಡಿಜಿಟಲ್ ಆವೃತ್ತಿಯನ್ನು ತಮಿಳು ಭಾಷೆಯಲ್ಲೂ ಬಿಡುಗಡೆ ಮಾಡಲಾಗುತ್ತಿದೆ.

ಒಂದೇ ಒಂದು ಚಿತ್ರಮಂದಿರದಲ್ಲಿ ತೆರೆಕಂಡ 'ಶಂಕರಾಭರಣಂ' ಚಿತ್ರಕ್ಕೆ ಆರಂಭದಲ್ಲಿ ಪ್ರೇಕ್ಷಕರೇ ಬರಲಿಲ್ಲ. ಬಳಿಕ 1980ರಲ್ಲಿ ಚಿತ್ರಕ್ಕೆ ಅಮೋಘ ಪ್ರತಿಕ್ರಿಯೆ ವ್ಯಕ್ತವಾಗಿ ಹೈದರಾಬಾದಿನ ರಾಯಲ್ ಚಿತ್ರಮಂದಿರದಲ್ಲಿ 216 ದಿನಗಳ ಪ್ರದರ್ಶನ ಕಂಡಿತ್ತು. ಚಿತ್ರದ ಹತ್ತು ಹಾಡುಗಳು ಇಂದಿಗೂ ನಾದೋಪಾಸಕರ ಮನತಣಿಸುತ್ತಿವೆ. (ಏಜೆನ್ಸೀಸ್)

English summary
Śankarabharanam is a 1979 blockbuster, Telugu film, directed by K. Viswanath and produced by Poornodaya Movie Creations releasing in digital format. The soundtrack, composed by KV Mahadevan, led to an increase in usage of Indian classical music in Indian cinema. The film is listed among CNN-IBN's list of hundred greatest Indian films of all time.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X