twitter
    For Quick Alerts
    ALLOW NOTIFICATIONS  
    For Daily Alerts

    ರಜನಿಕಾಂತ್ ಬಗ್ಗೆ ನಿಮಗೆ ತಿಳಿಯದ 10 ಸಂಗತಿಗಳು

    By Prasad
    |

    ಅಪ್ಪಟ ಕನ್ನಡ ಮಣ್ಣಿನ ಮಗ ಆಲ್ ಇಂಡಿಯಾ ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಗ್ಗೆಯೇ ಎಲ್ಲೆಡೆ ಮಾತುಕತೆ. ಡಿಸೆಂಬರ್ 12 ಅವರ ಹುಟ್ಟುಹಬ್ಬವಾದ್ದರಿಂದ ಎಲ್ಲೆಡೆಯಿಂದ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಯಾವುದೇ ಹಮ್ಮುಬಿಮ್ಮು ಇಲ್ಲದ ಸೀದಾಸಾದಾ ಮನುಷ್ಯ ನೂರುಕಾಲ ಹೀಗೆಯೇ ಬಾಳಲಿ ಎಂದು ಆಶಿಸೋಣ.

    ರಜನಿಕಾಂತ್ ಅವರಿಗೆ ಸಿನೆಮಾದಲ್ಲಿ ಅಸಾಧ್ಯವೆಂಬುದೇ ಇಲ್ಲ. ಇಂಥದು ಅವರಿಗೆ ಅಸಾಧ್ಯ ಎಂಬುದನ್ನು ಅವರ ಅಭಿಮಾನಿಗಳಿಂದ ಸಹಿಸಲೂ ಸಾಧ್ಯವಿಲ್ಲ. ಆ ಮಟ್ಟಿನ ಜನಪ್ರಿಯತೆ, ಪ್ರೀತಿಯನ್ನು ಅವರು ಗಳಿಸಿದ್ದಾರೆ. ಅವರ ಸ್ಟೈಲಿನ ಬಗ್ಗೆ, ಅವರ ನಟನೆಯ ಬಗ್ಗೆ, ಅವರ ಒಳ್ಳೆಯ ನಡತೆಯ ಬಗ್ಗೆ, ಅವರ ಔದಾರ್ಯತೆಯ ಬಗ್ಗೆ ಮಾತನಾಡುವುದೆಂದರೆ ಜನರಿಗೆ ಎಲ್ಲಿಲ್ಲದ ಆಸಕ್ತಿ.

    ರಜನಿಕಾಂತ್ ಬಗ್ಗೆ ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಜೋಕುಗಳಿಗಂತೂ ಕೊರತೆಯೇ ಇಲ್ಲ. ಈ ತಮಾಷೆಯ ಸಂಗತಿಗಳು ಅವರ ಜನಪ್ರಿಯತೆಯನ್ನು ಇನ್ನು ಮೇಲಕ್ಕೆ ಕೊಂಡೊಯ್ದಿವೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಅಂತಹ ಕೆಲವನ್ನು ಹೆಕ್ಕಿ ಇಲ್ಲಿ ನೀಡಲಾಗಿದೆ. ತಮಾಷೆಗೆ ಓದಿಕೊಳ್ಳಿ.

    ರಜನಿ ಬಗ್ಗೆ ತಿಳಿಯದ ಸಂಗತಿ 1

    ರಜನಿ ಬಗ್ಗೆ ತಿಳಿಯದ ಸಂಗತಿ 1

    ಈರುಳ್ಳಿ ಹೆಚ್ಚುವಾಗ ಕಣ್ಣೀರು ಬರದಿರುವ ವ್ಯಕ್ತಿಯೇ ಈ ಭೂಮಿಯ ಮೇಲಿಲ್ಲ. ಆದರೆ, ದಕ್ಷಿಣ ಭಾರತದ ಸೂಪರ್ ಸ್ಟಾರ್, ಸ್ಟೈಲ್ ಕಿಂಗ್ ರಜನಿಕಾಂತ್ ಈರುಳ್ಳಿಯನ್ನೇ ಅಳಿಸಬಲ್ಲರು.

    ರಜನಿ ಬಗ್ಗೆ ತಿಳಿಯದ ಸಂಗತಿ 2

    ರಜನಿ ಬಗ್ಗೆ ತಿಳಿಯದ ಸಂಗತಿ 2

    ಕಂಪ್ಯೂಟರಲ್ಲಿ ಡಿಲೀಟ್ ಆಗಿದ್ದೆಲ್ಲ ರಿಸೈಕಲ್ ಬಿನ್‌ನಲ್ಲಿ ಸೇರಿದರೆ, ರಜನಿಕಾಂತ್ ರಿಸೈಕಲ್ ಬಿನ್ ಅನ್ನೇ ಡಿಲೀಟ್ ಮಾಡಬಲ್ಲಂಥವರು. ಅದು ಅವರ ತಾಕತ್ತು.

    ರಜನಿ ಬಗ್ಗೆ ತಿಳಿಯದ ಸಂಗತಿ 3

    ರಜನಿ ಬಗ್ಗೆ ತಿಳಿಯದ ಸಂಗತಿ 3

    ವ್ಯಕ್ತಿ ಸತ್ತ ಮೇಲೆ ಮುಕ್ತಿ ಸಿಗುವವರೆಗೆ ದೆವ್ವ ಆಗಿರ್ತಾನೆ ಅಂತ ನಂಬ್ತೀರಾ? ಆದರೆ, ಆ ವ್ಯಕ್ತಿ ಸಾಯುವ ಮುನ್ನವೇ ದೆವ್ವವಾಗಿಸುವ ಸಾಮರ್ಥ್ಯ ಇರುವುದು ರಜನಿಕಾಂತ್‌ರಲ್ಲಿ ಮಾತ್ರ.

    ರಜನಿ ಬಗ್ಗೆ ತಿಳಿಯದ ಸಂಗತಿ 4

    ರಜನಿ ಬಗ್ಗೆ ತಿಳಿಯದ ಸಂಗತಿ 4

    ಹಿಮಪಾತ ಆಗುವಲ್ಲಿ ಸ್ನೋಮ್ಯಾನ್ ನಿರ್ಮಿಸಿದ್ದನ್ನು ನೋಡಿದ್ದೀರಿ ತಾನೆ? ಅದನ್ನು ಯಾವುದರಿಂದ ತಯಾರಿಸಿರುತ್ತಾರೆ? ಸ್ನೋದಿಂದ ಅಲ್ವೆ. ಆದರೆ, ಸ್ನೋಮ್ಯಾನ್‌ನಲ್ಲಿ ನೀರಿನಿಂದ ನಿರ್ಮಿಸುವ ಕೆಪ್ಯಾಸಿಟಿ ಇರುವುದು ಒಬ್ಬರಲ್ಲೇ. ಅವರು ರಜನಿಕಾಂತ್.

    ರಜನಿ ಬಗ್ಗೆ ತಿಳಿಯದ ಸಂಗತಿ 5

    ರಜನಿ ಬಗ್ಗೆ ತಿಳಿಯದ ಸಂಗತಿ 5

    ಕಾರ್ಡ್‌ಲೆಸ್ ಫೋನ್ ನಿಂದ ಕತ್ತು ಹಿಸುಕಿ ಸಾಯಿಸುವ ತಾಕತ್ತು ಇರುವುದು ರಜನಿಕಾಂತ್ ಒಬ್ಬರಿಗೆ ಮಾತ್ರ.

    ರಜನಿ ಬಗ್ಗೆ ತಿಳಿಯದ ಸಂಗತಿ 6

    ರಜನಿ ಬಗ್ಗೆ ತಿಳಿಯದ ಸಂಗತಿ 6

    ಮೀನು ಈಜದಿರುವುದೆ, ದುಂಬಿ ಹೂವು ಮರೆವುದೇ ಹಾಡು ಕೇಳಿದ್ದೀರಾ? ನೆಲದ ಮೇಲೆ ಬಿದ್ದರೆ ಒದ್ದಾಡುವ ಮೀನು ನೀರಲ್ಲಿ ಮುಳುಗಲು ಸಾಧ್ಯವೆ? ವಾಟ್ ಎಂದು ಆಶ್ಚರ್ಯಪಡಬೇಡಿ. ಅದು ಒಬ್ಬರಿಂದ ಮಾತ್ರ ಸಾಧ್ಯ. ಯಾರೆಂದು ಹೇಳಿ?

    ರಜನಿ ಬಗ್ಗೆ ತಿಳಿಯದ ಸಂಗತಿ 7

    ರಜನಿ ಬಗ್ಗೆ ತಿಳಿಯದ ಸಂಗತಿ 7

    ರಜನಿಕಾಂತ್ ಒಂದು ಕತ್ತಲಾದ ಕೋಣೆಯನ್ನು ಪ್ರವೇಶಿಸಿದರೆ ಅವರು ಲೈಟನ್ನು ಆನ್ ಮಾಡುವುದಿಲ್ಲ, ಬದಲಾಗಿ ಕತ್ತಲನ್ನೇ ಆಫ್ ಮಾಡಿಬಿಡುತ್ತಾರೆ.

    ರಜನಿ ಬಗ್ಗೆ ತಿಳಿಯದ ಸಂಗತಿ 8

    ರಜನಿ ಬಗ್ಗೆ ತಿಳಿಯದ ಸಂಗತಿ 8

    ರಜನಿಕಾಂತ್ ಕನ್ನಡಿಯ ಮುಂದೆ ಹೆಚ್ಚು ಹೊತ್ತು ನಿಲ್ಲುವುದಿಲ್ಲ ಎಂಬ ಮಾತಿದೆ. ಯಾಕೆಂದರೆ, ಅವರು ನೋಡುತ್ತಿದ್ದಂತೆ ಕನ್ನಡಿಯೇ ಪುಡಿಪುಡಿಯಾಗಿಬಿಡುತ್ತದೆ. ರಜನಿಕಾಂತ್ ಮತ್ತು ರಜನಿಕಾಂತ್ ನಡುವೆ ಬರಲು ಕನ್ನಡಿಯಿಂದಲೂ ಸಾಧ್ಯವಿಲ್ಲ.

    ರಜನಿ ಬಗ್ಗೆ ತಿಳಿಯದ ಸಂಗತಿ 9

    ರಜನಿ ಬಗ್ಗೆ ತಿಳಿಯದ ಸಂಗತಿ 9

    ಅಮೆರಿಕನ್ ಫುಟ್ಬಾಲ್ ಆಟಗಾರ ಬ್ರೆಟ್ ಫರ್ವ್ ಫುಟ್ಬಾಲ್ ಎಸೆದರೆ 50 ಯಾರ್ಡ್‌ಗಿಂತ ದೂರ ಎಸೀತಾರಂತೆ. ಆದರೆ, ರಜನಿಕಾಂತ್ ಬ್ರೆಟ್ ಅವರನ್ನೇ 50 ಯಾರ್ಡ್‌ಗಿಂತ ದೂರ ಎಸೆಯಬಲ್ಲರು.

    ರಜನಿ ಬಗ್ಗೆ ತಿಳಿಯದ ಸಂಗತಿ 10

    ರಜನಿ ಬಗ್ಗೆ ತಿಳಿಯದ ಸಂಗತಿ 10

    ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದೆ ಎಂಬ ಗಾದೆ ಮಾತು ಕೇಳಿದ್ದೀರಾ? ಈ ಗಾದೆ ಮಾತನ್ನೂ ಕೇಳಿಬಿಡಿ. ರಜನಿಕಾಂತ್ ಒಂದೇ ಹಕ್ಕಿಯಲ್ಲಿ ಎರಡು ಕಲ್ಲನ್ನು ಹೊಡೆಯಬಲ್ಲರು.

    English summary
    All India super star Rajinikanth's birthday is being celebrated all over south India on 12th December, 2012. Rajini has fans not only in India but all over the world. On this occasion, let's know ten things you did not know about the style king.
    Sunday, January 20, 2013, 15:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X