For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಗೆ 1 ಕೆಜಿ ತೂಕದ ವಾಚ್ ಉಡುಗೊರೆ ನೀಡಿದ ಠಾಕೂರ್ ಅನೂಪ್

  |
  ದರ್ಶನ್ ಗೆ 1 ಕೆಜಿ ತೂಕದ ವಾಚ್ ಉಡುಗೊರೆ..! | FILMIBEAT KANNADA

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿನ್ನೆ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನ ಉದ್ಘರ್ಷ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ರು. ಯಜಮಾನ ಚಿತ್ರದಲ್ಲಿ ವಿಲನ್ ಆಗಿದ್ದ ಠಾಕೂರ್ ಅನೂಪ್ ಸಿಂಗ್ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.

  ಸ್ನೇಹಿತನ ಕರೆ ಹಾಗೂ ಸುನೀಲ್ ಕುಮಾರ್ ದೇಸಾಯಿ ಅಂತಹ ನಿರ್ದೇಶಕರ ಆಹ್ವಾನಕ್ಕಾಗಿ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಡಿ ಬಾಸ್ ಗೆ ಠಾಕೂರ್ ಕಡೆಯಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ.

  ಬರೊಬ್ಬರಿ 1 ಕೆಜಿ ತೂಕದ ವಾಚ್ ಅನ್ನ ಠಾಕೂರ್ ಅನೂಪ್, ನಟ ದರ್ಶನ್ ಗೆ ಉಡುಗೊರೆಯಾಗಿ ನೀಡಿದ್ದಾರೆ. ಇದು ಟ್ರೈಲರ್ ಬಿಡುಗಡೆ ಕಾರ್ಯಕ್ರಮದ ಆಕರ್ಷಣೆಗಳಲ್ಲಿ ಒಂದಾಗಿತ್ತು. ಅಷ್ಟಕ್ಕೂ ಅದರ ಬೆಲೆ ಎಷ್ಟು? ಮುಂದೆ ಓದಿ....

  ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ

  ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ

  ದರ್ಶನ್ ಯಜಮಾನ ಚಿತ್ರದಲ್ಲಿ ಠಾಕೂರ್ ಅನೂಪ್ ಸಿಂಗ್ ಖಳನಾಯಕನಾಗಿದ್ದರು. ಅಲ್ಲಿ ದಾಸನ ಮುಂದೆ ವಿಲನ್ ಆಗಿ ಅಬ್ಬರಿಸಿದ್ದ ಠಾಕೂರ್, ಜೊತೆಗೆ ದರ್ಶನ್ ಅವರ ಪ್ರೀತಿಯನ್ನೂ ಸಂಪಾದಿಸಿದ್ದರು. ಅದಕ್ಕಾಗಿಯೇ ಠಾಕೂರ್ ತನ್ನ ನೆಚ್ಚಿನ ನಟ ಹಾಗೂ ಗೆಳೆಯನಿಗೆ ಒಂದು ಕೆಜಿ ತೂಕದ ವಾಚ್ ನೀಡಿದ್ದಾರೆ. ಆದ್ರೆ, ಬೆಲೆಯನ್ನ ಬಹಿರಂಗಪಡಿಸಿಲ್ಲ.

  ಠಾಕೂರ್ ಕೆಲಸ ಮೆಚ್ಚಿದ ದಾಸ

  ಠಾಕೂರ್ ಕೆಲಸ ಮೆಚ್ಚಿದ ದಾಸ

  ಸಾಮಾನ್ಯವಾಗಿ ಹೊರಗಡೆಯಿಂದ ಬರುವ ಕೆಲವು ಕಲಾವಿದರು, ಕನ್ನಡ ಚಿತ್ರಗಳಲ್ಲಿ ಬಂದು ನಟಿಸಿ, ದುಡ್ಡಿ ತಗೊಂಡು ಹೋಗ್ತಾರೆ. ಈ ವಿಚಾರದಲ್ಲಿ ಠಾಕೂರ್ ನಡೆಯನ್ನ ದರ್ಶನ್ ಮೆಚ್ಚಿಕೊಂಡಿದ್ದಾರೆ. ಅನೂಪ್ ಅವರ ಕಮಿಟ್ ಮೆಂಟ್ ನನಗೆ ತುಂಬಾ ಖುಷಿ ಇದೆ. ''ನಟಿಸಿ, ಡೈಲಾಗ್ ಅಭ್ಯಾಸ ಮಾಡಿ, ಅವರೇ ಡಬ್ ಮಾಡಿದ್ದಾರೆ. ಇದು ನಿಜಕ್ಕೂ ಖುಷಿಯ ವಿಚಾರ'' ಎಂದು ದರ್ಶನ್ ಹೇಳಿದ್ರು.

  ನಾನು ಲೈಟ್ ಬಾಯ್ ಆಗಿದ್ದೆ

  ನಾನು ಲೈಟ್ ಬಾಯ್ ಆಗಿದ್ದೆ

  ಸುನೀಲ್ ಕುಮಾರ್ ದೇಸಾಯಿ ಅವರ ನಮ್ಮೂರ ಮಂದಾರ ಹೂವೆ ಸಿನಿಮಾ ಬಿಡುಗಡೆಯಾಗುವ 'ಜನುಮದ ಜೋಡಿ' ಚಿತ್ರದ ಸಂದರ್ಭದಲ್ಲಿ ನಾನು ಲೈಟ್ ಬಾಯ್ ಆಗಿ ಕೆಲಸ ಮಾಡ್ತಿದ್ದೆ. ಆಗ ನಮ್ಮೂರ ಮಂದಾರ ಹೂವೆ ಸಿನಿಮಾದ ಪ್ರಿವ್ಯೂ ಶೋ ನೋಡಿದ್ದೆ. ಆಗಲೇ ಪ್ರಿವ್ಯೂ ಶೋ ಹೀಗಿರುತ್ತೆ ಅಂತ ಗೊತ್ತಾಗಿದ್ದು.

  ನಾಲ್ಕು ಭಾಷೆಯಲ್ಲಿ ಉದ್ಘರ್ಷ

  ನಾಲ್ಕು ಭಾಷೆಯಲ್ಲಿ ಉದ್ಘರ್ಷ

  ಸುನೀಲ್ ಕುಮಾರ್ ದೇಸಾಯಿ ನಿರ್ದೇಶನ ಈ ಚಿತ್ರ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬರ್ತಿದೆ. ಕಿಚ್ಚ ಸುದೀಪ್ ಈ ಟ್ರೈಲರ್ ಗೆ ಹಿನ್ನೆಲೆ ಧ್ವನಿ ನೀಡಿದ್ದರು. ಸುದೀಪ್ ಧ್ವನಿ ಹೊಂದಿರುವ ಈ ಟ್ರೈಲರ್ ನ್ನ ನಟ ದರ್ಶನ್ ಬಿಡುಗಡೆ ಮಾಡಿದ್ದು, ತುಂಬಾ ವಿಶೇಷ.

  English summary
  Udgharsha movie hero Thakur anoop singh has give watch gift to challenging star darshan. he has released trailer of udgharsha, which is directed by sunil kumar desai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X