»   » ಸೂಪರ್ ಸ್ಟಾರ್ ರಜನಿಗೆ ದೇವರು ಕೊಟ್ಟ ದೊಡ್ಡ ಶಾಪ!

ಸೂಪರ್ ಸ್ಟಾರ್ ರಜನಿಗೆ ದೇವರು ಕೊಟ್ಟ ದೊಡ್ಡ ಶಾಪ!

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಕೈಲಿ ಏನಾಗಲ್ಲ? ಸೈಕಲ್ ಹತ್ತಿ ಶರವೇಗದಲ್ಲಿ ಚಲಿಸುವುದರಿಂದ ಹಿಡಿದು ಬುಲ್ಲೆಟ್ ಟ್ರೇನ್ ನ ಕೈಬೆರಳಲ್ಲೇ ನಿಲ್ಲಿಸುವವರೆಗೂ ಎಲ್ಲದರಲ್ಲೂ ರಜನಿ ನಿಸ್ಸೀಮ. ಅದು ಅವರ ಸಿನಿಮಾಗಳಲ್ಲೇ ಪ್ರೂವ್ ಆಗಿದೆ ಅಲ್ವಾ. 'ರಜನಿಕಾಂತ್ ಗೆ ರಜನಿಕಾಂತ್ ಮಾತ್ರವೇ ಸರಿಸಾಟಿ' ಅನ್ನುವುದು ಚಿತ್ರರಂಗದ ಗಾದೆಮಾತು. ಅದಕ್ಕೆ ಉಪ್ಪು-ಖಾರ ಸೇರಿಸಿ ತಯಾರಾಗಿರುವ ಹಲವು ರಜನಿ ಜೋಕ್ ಗಳು ಹೇಳುವುದೂ ಇದನ್ನೇ!

ಸೂರ್ಯ-ಚಂದ್ರರಿಗೆ ಟಾರ್ಚ್ ಹಾಕೋ ಚಾಲಾಕಿ ರಜನಿಕಾಂತ್ ಕೈಲಿ ಒಂದೇ ಒಂದು ಕೆಲಸ ಮಾತ್ರ ಕಷ್ಟಸಾಧ್ಯ. ಯಾವುದೇ ಸ್ಟಂಟ್ ಆದರೂ ಅದನ್ನ ನೀರುಕುಡಿದಷ್ಟೇ ಸಲೀಸಾಗಿ ಮಾಡುವ ರಜನಿಕಾಂತ್ ಗೆ ದೇವರು ಒಂದು ಶಾಪಕೊಟ್ಟಿದ್ದಾನಂತೆ. ಆ ಶಾಪದ ಪ್ರತಿಫಲಕ್ಕೆ ಅವರಿನ್ನೂ ನಲುಗುತ್ತಿದ್ದಾರಂತೆ. [ಯೂಟ್ಯೂಬ್ ನಲ್ಲಿ ರಜನಿ 'ಲಿಂಗಾ' ಲಕಲಕ ಡಾನ್ಸ್]

Super Star Rajinikanth2

ಅಂತ ಶಾಪ ಯಾವುದು ಗೊತ್ತಾ? ಬೇರಾವುದು ಅಲ್ಲ...ಹೀರೋಯಿನ್ ಜೊತೆ ಹೀರೋಗಳಾದವರು ತೆರೆಮೇಲೆ ಕಂಪಲ್ಸರಿ ಮಾಡಲೇಬೇಕಾದ 'ರೋಮ್ಯಾನ್ಸ್'! ಹೌದು, ಪರದೆಮೇಲೆ ನಟೀಮಣಿ ಜೊತೆ ಡ್ಯುಯೆಟ್ ಹಾಡುವುದೆಂದರೆ ರಜನಿಕಾಂತ್ ಗೆ ಬಲುಕಷ್ಟವಂತೆ. ಹಾಗಂತ ಖುದ್ದು ರಜನಿಕಾಂತ್ ಬಾಯ್ಬಿಟ್ಟಿದ್ದಾರೆ. ['ಲಿಂಗಾ' ಪ್ರೆಸ್ ಮೀಟ್ ಚಿತ್ರಗಳು]

ನಿನ್ನೆಯಷ್ಟೇ (ನವೆಂಬರ್ 08) ಹೈದರಾಬಾದ್ ನಲ್ಲಿ ಅದ್ಧೂರಿಯಾಗಿ ನಡೆದ 'ಲಿಂಗಾ' ಚಿತ್ರದ ತೆಲುಗು ಅವತರಣಿಕೆಯ ಕರ್ಟೇನ್ ರೇಸರ್ ಕಾರ್ಯಕ್ರಮದಲ್ಲಿ 'ದೇವರು ಕೊಟ್ಟ ಶಾಪ'ದ ವಿಷಯವನ್ನು ಸೂಪರ್ ಸ್ಟಾರ್ ರಜನಿಕಾಂತ್ ಬಹಿರಂಗ ಪಡಿಸಿದರು. [ರಜನಿಕಾಂತ್ 'ಲಿಂಗಾ' ಟ್ರೇಲರ್ ನಲ್ಲಿ ಏನುಂಟು, ಏನಿಲ್ಲ.?]

'ಲಿಂಗಾ' ಚಿತ್ರದಲ್ಲಿ ಸೋನಾಕ್ಷಿ ಸಿನ್ಹ ಮತ್ತು ಅನುಶ್ಕಾ ಶೆಟ್ಟಿ ಜೊತೆ ರೋಮ್ಯಾನ್ ಮಾಡಿರುವ ತಲೈವಾ, ''60 ವರ್ಷ ವಯಸ್ಸಿನ ನನ್ನಂಥ ಕಲಾವಿದರಿಗೆ ದೇವರು ಕೊಟ್ಟಿರುವ ದೊಡ್ಡ ಶಾಪವೆಂದರೆ ಅದು ನನ್ನ ಮಕ್ಕಳ ವಯಸ್ಸಿನ ನಟಿಯರೊಂದಿಗೆ ರೋಮ್ಯಾನ್ಸ್ ಮಾಡುವುದು. ಸೋನಾಕ್ಷಿ ಜೊತೆ ಡ್ಯುಯೆಟ್ ಹಾಡಲ್ಲಿ ಹೆಜ್ಜೆ ಹಾಕುವುದು, ಚಲಿಸುತ್ತಿರುವ ರೈಲನ್ನ ನಿಲ್ಲಿಸುವ ಸ್ಟಂಟ್ ಗಿಂತಲೂ ಅತಿ ಕಷ್ಟಕರವಾಗಿತ್ತು'' ಅಂತ ರಜನಿಕಾಂತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Super Star Rajinikanth1

ಬಾಲಿವುಡ್ ಬ್ಯೂಟಿ ಸೋನಾಕ್ಷಿ ಸಿನ್ಹ ರವರನ್ನ ಚಿಕ್ಕವಯಸ್ಸಿನಿಂದಲೂ ತನ್ನ ಮಗಳಂತೆ ಮುದ್ದು ಮಾಡಿರುವ ರಜನಿಕಾಂತ್ ಗೆ ಆಕೆಯೊಂದಿಗೆ ರೋಮ್ಯಾನ್ಸ್ ಮಾಡುವ ದೃಶ್ಯಗಳು ತೀರಾ ಕಿರಿಕಿರಿಯುಂಟು ಮಾಡಿತ್ತಂತೆ. ''ನನ್ನ ಮೊದಲ ಚಿತ್ರದ ಮೊದಲ ಶಾಟ್ ಎದುರಿಸಿದಾಗಲೂ ಈ ಮಟ್ಟಕ್ಕೆ ಅಂಜಿಕೆ ಆಗಿರಲಿಲ್ಲ'', ಅಂತ ರಜನಿ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ. [ದಕ್ಷಿಣದಲ್ಲಿ ಹೊಸ ದಾಖಲೆ ಸೃಷ್ಟಿಸಿದ ರಜನಿ 'ಲಿಂಗಾ']

ರೋಮ್ಯಾನ್ಸ್ ಮಾಡುವ ಬಗ್ಗೆ ರಜನಿಗೆ ಎಷ್ಟೇ ಅಸಮಾಧಾನವಿದ್ದರೂ, ಈಗಿನ ಟಾಪ್ ಹೀರೋಯಿನ್ ಗಳ ಜೊತೆ ಅವರು ಮರ ಸುತ್ತೋದಿಲ್ಲ ಅಂದ್ರೆ ಅಭಿಮಾನಿಗಳು ಸುಮ್ನಿರ್ತಾರಾ? ತಮ್ಮ ಭಕ್ತರಿಂದ ಬರುವ ಶಿಳ್ಳೆ-ಕೇಕೆಗಳಿಗೋಸ್ಕರವಾದರೂ ಇದನ್ನೆಲ್ಲಾ ಸಹಿಸಿಕೊಳ್ಳಲೇಬೇಕಾರುವುದು ಅನಿವಾರ್ಯ. (ಏಜೆನ್ಸೀಸ್)

Post by Oneindia Kannada.
English summary
Super Star Rajinikanth feels, the most difficult task for him is romancing an Actress like Sonakshi Sinha, who is like his Daughter.''The worst punishment God can give actors like me who are in their 60's is to sing duets'', says Rajinikanth.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada