»   » ಚಿತ್ರಗಳು : ಚಿಕ್ಕಮಗಳೂರಿನಲ್ಲಿ ಹಾಟ್ ಮಲ್ಲಿಗೆ ಆಮಿ ಜಾಕ್ಸನ್

ಚಿತ್ರಗಳು : ಚಿಕ್ಕಮಗಳೂರಿನಲ್ಲಿ ಹಾಟ್ ಮಲ್ಲಿಗೆ ಆಮಿ ಜಾಕ್ಸನ್

Posted By:
Subscribe to Filmibeat Kannada

'ದಿ ವಿಲನ್' ಚಿತ್ರದ ಚಿತ್ರೀಕರಣ ಸದ್ಯ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದೆ. ವಿದೇಶ ಸುತ್ತಿ ಬಂದ ಪ್ರೇಮ್ ಅಂಡ್ ಟೀಂ ಈಗ ಚಿಕ್ಕಮಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಸುದೀಪ್ ಮತ್ತು ನಟಿ ಆಮಿ ಜಾಕ್ಸನ್ ಭಾಗದ ಶೂಟಿಂಗ್ ಇಲ್ಲಿ ನಡೆಯುತ್ತಿದೆ.

ಇದೀಗ ಚಿಕ್ಕಮಗಳೂರಿನ ಸೌಂದರ್ಯಕ್ಕೆ ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ಮನಸೋತ್ತಿದ್ದಾರೆ. ಅಲ್ಲಿನ ಹಸಿರು, ಬೆಟ್ಟ, ಮಂಜು, ಮಳೆ ನೋಡಿ 'ದಿ ವಿಲನ್' ಬೆಡಗಿ ಥ್ರಿಲ್ ಆಗಿದ್ದಾರೆ. ಚಿತ್ರೀಕರಣದ ವೇಳೆ ಚಿಕ್ಕಮಗಳೂರಲ್ಲಿ ಒಂದು ರೌಂಡ್ ಹಾಕಿದ ಆಮಿ ಜಾಕ್ಸನ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಚಿಕ್ಕಮಗಳೂರಿನಲ್ಲಿ ಹಾಟ್ ಮಲ್ಲಿಗೆ

ಚಿಕ್ಕಮಗಳೂರಿನಲ್ಲಿ 'ವಿಲನ್' ಶೂಟಿಂಗ್ ಮಾಡ್ತಿರುವ ನಟಿ ಆಮಿ ಜಾಕ್ಸನ್ ಅಲ್ಲಿನ ಪ್ರಕೃತಿ ಸೊಬಗು ಕಂಡು ಖುಷಿಯಾಗಿದ್ದಾರೆ. ಶೂಟಿಂಗ್ ಗ್ಯಾಪ್ ನಲ್ಲಿ ಚಿಕ್ಕಮಗಳೂರಿನಲ್ಲಿ ಒಂದು ರೌಂಡ್ ಹೊಡೆದು ಎಂಜಾಯ್ ಮಾಡಿದ್ದಾರೆ.

ಮುಂಜಾನೆ ಮಂಜು

ಚುಮು ಚುಮು ಚಳಿಯ ಮುಂಜಾನೆಯಲ್ಲಿ, ಚಿಲಿಪಿಲಿ ಸದ್ದು ಮಾಡುವ ಹಕ್ಕಿಗಳ ನಾದವನ್ನ ಕೇಳಿಕೊಂಡು ಆಮಿ ಜಾಕ್ಸನ್ ಥ್ರಿಲ್ ಆಗಿದ್ದಾರೆ.

ಸಂತಸ ಹಂಚಿಕೊಂಡ ನಟಿ

''ನಾನು ಈಗ ಕರ್ನಾಟಕದ ಅತಿ ಎತ್ತರದ ಬೆಟ್ಟದ ಮೇಲೆ ಕುಳಿತಿದ್ದಿನಿ'' ಎಂದು ದೇವಸ್ಥಾನದ ಮುಂದೆ ಒಂದು ಫೋಟೋ ತೆಗೆದು ಟ್ವಿಟ್ಟರ್ ನ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಬಿಳಿ ಪಂಚೆ, ಬಿಳಿ ಶರ್ಟ್ ಹಾಕ್ಕೊಂಡು 'ಮದುಮಗ'ನಂತೆ ಮಿಂಚಿದ ಸುದೀಪ್

ಎಳನೀರು ಕುಡಿದ ಆಮಿ

ರಸ್ತೆ ಮಧ್ಯೆ ಆಮಿ ಜಾಕ್ಸನ್ ಎಳನೀರು ಕುಡಿಯುತ್ತಿರುವ ಫೋಸ್ ನೋಡಿ ಪಡ್ಡೆ ಹುಡುಗ್ರು ಬೆರಗಾಗಿದ್ದಾರೆ.

ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ರಿಲೀಸ್ ಆದ 'ದಿ ವಿಲನ್' ಮೋಷನ್ ಪೋಸ್ಟರ್ ನೋಡಿ!

ಸುದೀಪ್ ಜೊತೆ ಆಮಿ ಜಾಕ್ಸನ್

ತಾನು ಮುಂದಿನ ಚಿತ್ರದಲ್ಲಿ ನಟ ಸುದೀಪ್ ಜೊತೆ ನಟಿಸುತ್ತಿದ್ದೀನಿ ಎಂದು ಹೇಳುವ ಮೂಲಕ ತಮ್ಮ ಖುಷಿಯನ್ನ ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.

'ದಿ ವಿಲನ್' : ರಾಮನೊಳಗೊಬ್ಬ ರಾವಣ... ರಾವಣನೊಳಗೊಬ್ಬ ರಾಮ..!

ಕನ್ನಡದ ಮೊದಲ ಸಿನಿಮಾ

ಈಗಾಗಲೇ ಹಿಂದಿ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಆಮಿ ಜಾಕ್ಸನ್ ಇದೇ ಮೊದಲ ಭಾರಿಗೆ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪ್ರೇಮ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಶಿವಣ್ಣ ಮತ್ತು ಸುದೀಪ್ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

English summary
Actress Amy Jackson taken her twitter account to share 'The Villain' shooting photos. This part of the shoot will be involved Amy Jackson both and Sudeep.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada