»   » ಲಂಡನ್ ನಲ್ಲಿ ಮುಖಾಮುಖಿ ಆಗಲಿರುವ ಶಿವಣ್ಣ - ಸುದೀಪ್

ಲಂಡನ್ ನಲ್ಲಿ ಮುಖಾಮುಖಿ ಆಗಲಿರುವ ಶಿವಣ್ಣ - ಸುದೀಪ್

Written By:
Subscribe to Filmibeat Kannada

'ದಿ ವಿಲನ್' ಸಿನಿಮಾದಲ್ಲಿ ಶಿವರಾಜ್ ಕುಮಾರ್ ಮತ್ತು ಸುದೀಪ್ ಯಾವಾಗ ಒಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಎಂಬುದರ ಕುರಿತು ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಇತ್ತು. ಆದರೆ ಈಗ ಆ ಟೈಂ ಬಂದಿದೆ.

ಸದ್ಯ 'ದಿ ವಿಲನ್' ಚಿತ್ರತಂಡ ಲಂಡನ್ ತಲುಪಿದೆ. ಲಂಡನ್ ನಿಂದ ಫೋಟೋ ತೆಗೆದು ಈ ವಿಷಯವನ್ನು ಸ್ವತಃ ನಿರ್ದೇಶಕ ಪ್ರೇಮ್ ಹಂಚಿಕೊಂಡಿದ್ದಾರೆ. ಇನ್ನೂ 'ಲೆಜೆಂಡ್ಸ್ ಆರ್ ಗೆಟಿಂಗ್ ಟುಗೆದರ್' ಎಂದು ಪ್ರೇಮ್ ಫೋಟೋ ಮೂಲಕ ತಿಳಿಸಿದ್ದಾರೆ.

the-villain-shooting-london

ಇಷ್ಟು ದಿನ 'ದಿ ವಿಲನ್' ಚಿತ್ರದಲ್ಲಿನ ಸುದೀಪ್ ಅವರ ಭಾಗದ ಚಿತ್ರೀಕರಣವಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಶಿವಣ್ಣ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ಇತ್ತೀಚಿಗಷ್ಟೇ ಬ್ಯಾಂಕಾಕ್ ಶೂಟಿಂಗ್ ಮುಗಿಸಿ ಕೊಂಚ ಬ್ರೇಕ್ ತೆಗೆದುಕೊಂಡಿದ್ದ 'ದಿ ವಿಲನ್' ಟೀಂ ಈಗ ಲಂಡನ್ ನಲ್ಲಿ ಚಿತ್ರೀಕರಣವನ್ನು ಮುಂದುವರೆಸಲಿದೆ.

English summary
'The Villain' team went to London for shooting. This part of the shoot will be involve both Shiva Rajkumar and Sudeep.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada