»   » ವಿಭಿನ್ನ, ವಿಚಿತ್ರ, ವಿನೂತನ ಶೀರ್ಷಿಕೆಗಳಿಂದ ಗಮನ ಸೆಳೆಯುತ್ತಿವೆ ಈ ಕನ್ನಡ ಚಿತ್ರಗಳು

ವಿಭಿನ್ನ, ವಿಚಿತ್ರ, ವಿನೂತನ ಶೀರ್ಷಿಕೆಗಳಿಂದ ಗಮನ ಸೆಳೆಯುತ್ತಿವೆ ಈ ಕನ್ನಡ ಚಿತ್ರಗಳು

Posted By:
Subscribe to Filmibeat Kannada

ಅದೊಂದು ಕಾಲವಿತ್ತು. ಸಿನಿಮಾ ಟೈಟಲ್ ಅಂದ್ರೆ ಅಣ್ಣಾವ್ರ 'ಬಂಗಾರದ ಮನುಷ್ಯ', 'ತಂದೆಗೆ ತಕ್ಕ ಮಗ', 'ದೇವತಾ ಮನುಷ್ಯ', ವಿಷ್ಣುವರ್ಧನ್ ಅವರ 'ಸೊಸೆ ತಂದ ಸೌಭಾಗ್ಯ', 'ಗಲಾಟೆ ಸಂಸಾರ', 'ಸೂರ್ಯವಂಶ'.....ಹೀಗೆ ಹೇಳ್ತಾ ಹೋದ್ರೆ ನೂರಾರು ಟೈಟಲ್ ಗಳು ಕಣ್ಮುಂದೆ ಬರುತ್ತೆ.

ಆದ್ರೆ, ಇತ್ತೀಚೆಗೆ ಸಿನಿಮಾ ಟೈಟಲ್ ಗಳು ''ಇದು ಸಿನಿಮಾ ಟೈಟಲ್.!'' ಎನ್ನುವಂತಹ ಪರಿಸ್ಥಿತಿ ಬಂದಿದೆ. ಪ್ರತಿನಿತ್ಯ ಮಾತನಾಡೋ ಪದಗಳೇ ಸಿನಿಮಾ ಟೈಟಲ್ ಆಗೋಗಿದೆ. ದಿನಿತ್ಯದ ಬೈಗುಳಗಳೇ ಚಿತ್ರಗಳ ಶೀರ್ಷಿಕೆ ಆಗಿದೆ.

ಅದರಲ್ಲೂ, ಈಗಿನ ಸಿನಿಮಾ ಮೇಕರ್ಸ್ ಅಂತೂ ಸಿನಿಮಾ ಟೈಟಲ್ ನಿಂದಲೇ ಹೆಚ್ಚು ಪಬ್ಲಿಸಿಟಿ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈ ರೀತಿಯ ಕೆಲವು ಡಿಫ್ರೆಂಟ್ ಟೈಟಲ್ ನಲ್ಲಿ ಮೂಡಿ ಬರ್ತಿರುವ ಸಿನಿಮಾಗಳನ್ನ ಪಟ್ಟಿ ಮಾಡಿದ್ದೀವಿ. ಮುಂದಿದೆ ಓದಿ.....

'ದಯವಿಟ್ಟು ಗಮನಿಸಿ'

'ದಯವಿಟ್ಟು ಗಮನಿಸಿ' ಇದು ರೋಹಿತ್ ಪದಕಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಈ ಪದವನ್ನ ರೈಲ್ವೆ ಸ್ಟೇಷನ್ ನಲ್ಲಿ, ಬಸ್ ಸ್ಟೇಷನ್ ನಲ್ಲಿ ಹೆಚ್ಚು ಬಳಸುವ ಪದ.

ಕನ್ನಡಕ್ಕಾಗಿ ಒಂದನ್ನ ಒತ್ತಿ

ಮೊಬೈಲ್ ಬಳಕೆದಾರು ಕಸ್ಟಮರ್ ಕೇರ್ ಗೆ ಫೋನ್ ಮಾಡಿದ್ರೆ, 'ಕನ್ನಡಕ್ಕಾಗಿ ಒಂದನ್ನ ಒತ್ತಿ', ಇಂಗ್ಲೀಷ್ ಗಾಗಿ ಎರಡನ್ನ ಒತ್ತಿ, ಹಿಂದಿಗಾಗಿ ಮೂರನ್ನ ಒತ್ತಿ,,,,ಎನ್ನುವ ಸಂಭಾಷಣೆ ಕೇಳೆ ಇರ್ತಿರಾ. ಇದೀಗ 'ಕನ್ನಡಕ್ಕಾಗಿ ಒಂದನ್ನ ಒತ್ತಿ' ಎಂಬ ಹೆಸರಿನಲ್ಲಿ ಸಿನಿಮಾ ಒಂದು ಬರ್ತಿದೆ. ಕೃಷಿ ತಾಪಂಡ ಮತ್ತು ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ. ಕುಶಾಲ್ ನಿರ್ದೇಶನ ಮಾಡುತ್ತಿದ್ದಾರೆ.

ನೀವು ಕರೆ ಮಾಡಿದ ಚಂದಾದಾರರು ಬಿಜಿಯಾಗಿದ್ದಾರೆ

''ನೀವು ಕರೆ ಮಾಡಿದ ಚಂದಾದಾರರು ಬಿಜಿಯಾಗಿದ್ದಾರೆ'' ಇದು ಸಾಮಾನ್ಯವಾಗಿ ಫೋನ್ ಮಾಡಿದಾಗ, ನೀವು ಫೋನ್ ಮಾಡಿರುವ ಸಂಖ್ಯೆ ಬಿಜಿ ಇದ್ದಾಗ ಕೇಳಿ ಬರು ಸಂಭಾಷಣೆ. ಇದೀಗ, ಈ ಹೆಸರಿನಲ್ಲೂ ಸಿನಿಮಾ ಬರ್ತಿದೆ. ತಿಥಿ ಖ್ಯಾತಿ ಪೂಜಾ ಈ ಚಿತ್ರದ ನಾಯಕಿ. ಈ ಹಿಂದೆ 'ದೂದ್ ಸಾಗರ್' ಚಿತ್ರವನ್ನ ನಿರ್ದೇಶನ ಮಾಡಿದ್ದ ಸ್ಯಾಮುಯಲ್ ಟೋನಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಪ್ರದೇಶ ಸಮಾಚಾರ

ರೇಡಿಯೋ ಕೇಳುವ ಅಭ್ಯಾಸವಿದ್ದರೇ 'ಪ್ರದೇಶ ಸಮಾಚಾರ' ಎಂಬ ಪದದ ನೆನಪು ನಿಮಗೆ ಇರುತ್ತೆ. ಈ ಹೆಸರಿನಲ್ಲೂ ಸಿನಿಮಾ ತಯಾರಾಗುತ್ತಿರುವುದು ವಿಶೇಷ. ಈ ಚಿತ್ರಕ್ಕೆ 'ಮದುವೆಯ ಮಮತೆಯ ಕರೆಯೋಲೆ' ಖ್ಯಾತಿಯ ಸೂರಜ್ ಗೌಡ ನಾಯಕ. ಅರ್ಜುನ್ ಎಂಬುವರು ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.

ಏಪ್ರಿಲ್ ನ ಹಿಮಬಿಂದು

'ಏಪ್ರಿಲ್ ನ ಹಿಮಬಿಂದು'..... ಹಿಮ ಯಾವಾಗ ಬರುತ್ತೆ ಅಂತ ನಾವು ಹೇಳ್ತಿಲ್ಲ. ಇದು ಕನ್ನಡದಲ್ಲಿ ಸಿದ್ದವಾಗ್ತಿರುವ ಹೊಸ ಸಿನಿಮಾ. ಈ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯದಲ್ಲೇ ತೆರೆಕಾಣಲಿದೆ.

ಗೌಡ್ರು ಹೋಟೆಲ್

ಬಹುಶಃ ಪ್ರತಿಯೊಂದು ಹಳ್ಳಿಯಲ್ಲೂ ಒಂದೊಂದು 'ಗೌಡ್ರು ಹೋಟೆಲ್' ಇರಬಹುದು ಅನ್ಸುತ್ತೆ. ಅದೇ ಖ್ಯಾತಿಯಲ್ಲಿ 'ಗೌಡ್ರು ಹೋಟೆಲ್' ಅಂತ ಒಂದು ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ. ಪ್ರಕಾಶ್ ರೈ, ರಚನಾ ಚಂದ್ರ, ವೇದಿಕಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

8MM

ನವರಸ ನಾಯಕ ಜಗ್ಗೇಶ್ ಅಭಿನಯಿಸುತ್ತಿರುವ ಹೊಸ ಚಿತ್ರದ ಹೆಸರು '8MM'. ಒಂದು ಕ್ರೈಂ ಸುತ್ತ ಹೆಣೆದಿರುವ '8MM' ಚಿತ್ರಕ್ಕೆ ಹರಿಕೃಷ್ಣ ಎಂಬುವರು ಆಕ್ಷನ್ ಕಟ್ ಹೇಳಲಿದ್ದಾರೆ. ಅಷ್ಟಕ್ಕೂ '8MM' ಅನ್ನೋದು ಬುಲೆಟ್ ಸೈಜ್.

ಕಾರ್ ಹೆಸರಿನಲ್ಲೊಂದು ಸಿನಿಮಾ

ಈ ಹಿಂದೆ 'ಮಾರುತಿ 800' ನಂತರ 'ಜಾಗ್ವಾರ್' ಅಂತ ಕಾರಿನ ಹೆಸರಿನಲ್ಲಿ ಸಿನಿಮಾ ಬಂದಿತ್ತು. ಈಗ BMW ಅಂತ ಮತ್ತೊಂದು ಸಿನಿಮಾ ಬರ್ತಿದೆ. ‘ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಖ್ಯಾತಿಯ ಪ್ರವೀಣ್ ನಾಯಕನಾಗಿದ್ದು, ಗಂಧರ್ವ ಆಕ್ಷನ್ ಕಟ್ ಹೇಳುತ್ತಿದ್ದಾರೆ.

English summary
These Kannada cinema's are Getting Attention for the title of film
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada