»   » ಗಡ್ಡಪ್ಪನ ಓಟಕ್ಕೆ ಬ್ರೇಕ್ ಹಾಕಲು ಯಾರಿಂದಲೂ ಸಾಧ್ಯವಿಲ್ಲ!

ಗಡ್ಡಪ್ಪನ ಓಟಕ್ಕೆ ಬ್ರೇಕ್ ಹಾಕಲು ಯಾರಿಂದಲೂ ಸಾಧ್ಯವಿಲ್ಲ!

Posted By:
Subscribe to Filmibeat Kannada

'ತಿಥಿ' ಖ್ಯಾತಿಯ ಗಡ್ಡಪ್ಪ ಕನ್ನಡ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ತಿಂಗಳಿಗೆ ಒಂದು ಸಿನಿಮಾ ಎಂಬಂತೆ ಗಡ್ಡಪ್ಪ ಅಭಿನಯದ ಸಾಲು ಸಾಲು ಚಿತ್ರಗಳು ಬಿಡುಗಡೆಯಾಗುತ್ತಿದೆ.

'ತಿಥಿ' ಮಾಡಿ, 'ತರ್ಲೆ ವಿಲೇಜ್' ಹುಟ್ಟುಹಾಕಿ, 'ಏನ್ ನಿನ್ ಪ್ರಾಬ್ಲಮ್ಮು' ಎಂದಿದ್ದ ಗಡ್ಡಪ್ಪ ಇದೀಗ ಮತ್ತೊಂದು ಹೊಸ ಚಿತ್ರವನ್ನ ಶುರು ಮಾಡಿದ್ದಾರೆ. ಸಿಂಪಲ್ ಆಗಿ ಪೂಜೆ ಆರಂಭಿಸಿ ಚಿತ್ರೀಕರಣ ಕೂಡ ಶುರು ಮಾಡಿಬಿಟ್ಟಿದ್ದಾರೆ.['ತಿಥಿ' ನಾಯಕರ ಕಾಲ್ ಶೀಟ್ ಕಷ್ಟ: 'ಏನ್ ನಿನ್ ಪ್ರಾಬ್ಲಮ್ಮು']

ಗಡ್ಡಪ್ಪನ ಹೊಸ ಚಿತ್ರ

'ಏನ್ ನಿನ್ ಪ್ರಾಬ್ಲಮ್ಮು' ಚಿತ್ರದ ನಂತರ ಗಡ್ಡಪ್ಪ ಮತ್ತೊಂದು ಹೊಸ ಚಿತ್ರಕ್ಕೆ ಒಕೆ ಎಂದಿದ್ದು, 'ಪ್ರೊಡಕ್ಷನ್ ನಂ 2' ಚಿತ್ರದಲ್ಲಿ ಗಡ್ಡಪ್ಪ ಪ್ರಮುಖ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.['ಗಡ್ಡಪ್ಪನ ಸರ್ಕಲ್'ನಲ್ಲಿ ರೌಡಿಗಳಾದ ಗಡ್ಡಪ್ಪ-ಸೆಂಚುರಿಗೌಡ!]

ಮುಹೂರ್ತ ನೆರೆವೇರಿಸಿಕೊಂಡ 'ಪ್ರೊಡಕ್ಷನ್ ನಂ 2'

ಇತ್ತೀಚಿಗಷ್ಟೆ ವಡ್ಡರಹಳ್ಳಿಯಲ್ಲಿ 'ಪ್ರೊಡಕ್ಷನ್ ನಂ 2' ಚಿತ್ರದ ಮುಹೂರ್ತ ನೆರೆವೇರಿದ್ದು, ಗಡ್ಡಪ್ಪ ಸೇರಿದಂತೆ ಚಿತ್ರತಂಡ ಭಾಗವಹಿಸಿತ್ತು.['ಗಡ್ಡಪ್ಪ-ಸೆಂಚುರಿಗೌಡ'ರ ಹೊಸ ಚಿತ್ರದಲ್ಲೂ 'ಮಸಾಲೆ ಮಾತು'ಗಳ ಅಬ್ಬರ]

ಪ್ರೇಮ ಕಥೆಯಲ್ಲಿ ಗಡ್ಡಪ್ಪನ ಕಥೆ

ಇದೊಂದು ಪ್ರೇಮಕಥೆಯಾಗಿದ್ದು, ಹಳ್ಳಿಯ ಗೌಡರ ಮಗ ಹಾಗೂ ಮತ್ತೊಬ್ಬ ಗೌಡರ ಮಗಳ ಗುಂಪು ಗಾರಿಕೆಯ ಜಗಳವನ್ನ ಮನರಂಜನಾತ್ಮಕವಾಗಿ ರೂಪಿಸಲಾಗುತ್ತಿದೆಯಂತೆ. ಇದರಲ್ಲಿ ಗಡ್ಡಪ್ಪ ಅವರದು ಪ್ರಮುಖ ಪಾತ್ರವಂತೆ.

ನಿರ್ಮಾಪಕರು ಯಾರು?

ಈ ಹಿಂದೆ 'ಹರಿಶ್ಚಂದ್ರ ಮಕ್ಕಳು' ಎಂಬ ಚಿತ್ರವನ್ನ ನಿರ್ಮಾಣ ಮಾಡಿದ್ದ ಎಂ.ಸಿ. ಹೇಮಂತ್ ಗೌಡ ಗಡ್ಡಪ್ಪನ ಹೊಸ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

ನಿರ್ದೇಶಕರು ಯಾರು?

ಎಸ್.ವಿ ರಾಜು ಚಟ್ಟನಹಳ್ಳಿ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಜೊತೆ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಪಿ.ವಿ.ಆರ್ ಸ್ವಾಮಿ ಛಾಯಗ್ರಹಣ, ಕಾರ್ತಿಕ್ ಸಂಕಲನವಿರಲಿದ್ದು, ಗಡ್ಡಪ್ಪನ ಜೊತೆಯಲ್ಲಿ ವಿಜಯ ಅರವಿಂದ್, ಅನಖಾ, ಹೇಮಂತ್ ಗೌಡ ಸೇರಿದಂತೆ ಹಲವು ಕಲಾವಿದರು ಅಭಿನಯಿಸಲಿದ್ದಾರೆ.

English summary
Thithi Fame Actor Gaddappa Started His New Film Untitled 'Production no 2'. The Movie Directed by S.V Raju chattahalli and Produced by M.C Hemanth Gowda.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada