»   » ವರ್ಷದ ಆರಂಭದಲ್ಲೇ ಸ್ಟಾರ್ ಚಿತ್ರಗಳ ಸಂಭ್ರಮ

ವರ್ಷದ ಆರಂಭದಲ್ಲೇ ಸ್ಟಾರ್ ಚಿತ್ರಗಳ ಸಂಭ್ರಮ

Posted By:
Subscribe to Filmibeat Kannada

ಹೊಸ ವರ್ಷ ಪ್ರಾರಂಭ ಆಯ್ತು ಸಿನಿಮಾ ಪ್ರಿಯರಿಗೆ ಇಂದಿನಿಂದಲೇ ಯಾವ ಸ್ಟಾರ್ ಚಿತ್ರ ಯಾವಾಗ ರಿಲೀಸ್ ಆಗುತ್ತೆ ಅನ್ನೂ ಕುತೂಹಲ ಪ್ರಾರಂಭ ಆಗಿದೆ. ಈ ವರ್ಷ ಕಳೆದ ವರ್ಷಕ್ಕಿಂತಲೂ ಹೆಚ್ಚು ಚಿತ್ರಗಳನ್ನ ನೋಡಬಹುದು. ನಿರೀಕ್ಷಿತ ಚಿತ್ರಗಳು ಹೆಚ್ಚಾಗಿ ರಿಲೀಸ್ ಆಗುತ್ತೆ ಅನ್ನೋ ಆಸೆಯಲ್ಲಿರುವ ಅಭಿಮಾನಿಗಳಿಗೊಂದು ಗುಡ್ ನ್ಯೂಸ್ ಇದೆ.

ವರ್ಷದ ಮೊದಲ ತಿಂಗಳಲ್ಲಿ ಬಿಗ್ ಸ್ಟಾರ್ ಅಭಿನಯಿಸಿರುವ ಚಿತ್ರ ಬಿಡುಗಡೆ ಆಗುತ್ತಿದೆ. ಮೂರು ದೊಡ್ಡ ಚಿತ್ರಗಳು ತೆರೆಗೆ ಬರೋದಕ್ಕೆ ಸಿದ್ದವಾಗಿದ್ದು ಈಗಾಗಲೇ ಈ ಸಿನಿಮಾಗಳು ಪ್ರೇಕ್ಷಕರಲ್ಲಿ ಬಾರಿ ನಿರೀಕ್ಷೆಯನ್ನೂ ಹುಟ್ಟುಹಾಕಿವೆ.

ಮೂರು ಕನ್ನಡ ಸಿನಿಮಾಗಳು ಸೆನ್ಸಾರ್ ಬಾಗಿಲಿಗೆ ಎಂಟ್ರಿ ಕೊಟ್ಟಿವೆ. ರಿಲೀಸ್ ಡೇಟ್ ಅಧಿಕೃತವಾಗಿ ಅನೌನ್ಸ್ ಆಗಿಲ್ಲವಾದರೂ ಚಿತ್ರಗಳು ಇದೇ ತಿಂಗಳಲ್ಲಿ ಬಿಡುಗಡೆ ಆಗುವುದು ಪಕ್ಕಾ ಆಗಿದೆ. ಹಾಗಾದರೆ ಬಿಗ್ ಸ್ಟಾರ್ ಆಕ್ಟ್ ಮಾಡಿರುವ ಬಿಡುಗಡೆಗೆ ತಯಾರಾಗಿರುವ ಸಿನಿಮಾಗಳು ಯಾವುವು? ವರ್ಷದ ಆರಂಭದಲ್ಲೇ ಸ್ಟಾರ್ ವಾರ್ ಆಗುವ ಸಾಧ್ಯತೆಗಳು ಇದ್ಯಾ? ಇವೆಲ್ಲವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಸುಗ್ಗಿ ಸಂಭ್ರಮಕ್ಕೆ ಟಗರು ಚಿತ್ರ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ತರಲು ಚಿತ್ರತಂಡ ಸಿದ್ದತೆ ಮಾಡಿಕೊಂಡಿದೆ. ಈಗಾಗಲೇ ಹಾಡುಗಳು ಮತ್ತು ಮೇಕಿಂಗ್ ನಿಂದ 'ಟಗರು' ಚಿತ್ರದ ಬಗ್ಗೆ ಸಾಕಷ್ಟು ಕುತೂಹಲಗಳು ಹುಟ್ಟುಕೊಂಡಿವೆ. ನಿರ್ಮಾಪಕ ಕೆ ಪಿ ಶ್ರೀಕಾಂತ್ ಹೇಳಿರುವಂತೆ ಚಿತ್ರ ಸುಗ್ಗಿ ಸಂಭ್ರಮಕ್ಕೆ ತೆರೆಗೆ ಬರಲಿದೆ.

ಕನ್ನಡ ಮೀಡಿಯಂ ರಾಜುವಿಗೆ ಕಿಚ್ಚನ ಪಾಠ

ಜನವರಿ ಮೂರನೇ ವಾರಕ್ಕೆ 'ರಾಜು ಕನ್ನಡ ಮೀಡಿಯಂ' ಚಿತ್ರ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ಗುರುನಂದನ್ ಹಾಗೂ ಅವಂತಿಕ ಶೆಟ್ಟಿ ಅಭಿನಯಿಸಿದ್ದು ಕಿಚ್ಚ ಸುದೀಪ್ ಅಥಿತಿ ಪಾತ್ರವನ್ನ ನಿರ್ವಹಿಸಿದ್ದಾರೆ. ಕಿಚ್ಚ ಫಸ್ಟ್ ಲುಕ್ ಈಗಾಗಲೇ ಅಭಿಮಾನಿಗಳಿಗೆ ಮೋಡಿ ಮಾಡಿದೆ.

ಜನವರಿ 26ಕ್ಕೆ ಕನಕ ಚಿತ್ರ ಬಿಡುಗಡೆ

ಕಳೆದ ಡಿಸೆಂಬರ್ ನಲ್ಲೇ ಬಿಡುಗಡೆ ಆಗಬೇಕಿದ್ದ ದುನಿಯಾ ವಿಜಿ ಅಭಿನಯದ 'ಕನಕ' ಸಿನಿಮಾ ಇದೇ ತಿಂಗಳ 26 ರಂದು ರಿಲೀಸ್ ಮಾಡಲು ನಿರ್ದೇಶಕ ನಿರ್ಮಾಪಕ ಆರ್ ಚಂದ್ರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಗಣರಾಜ್ಯೋತ್ಸವದ ಅಂಗವಾಗಿ ವಿಜಿ ಅವರ ವರ್ಷದ ಮೊದಲ ಚಿತ್ರವಾಗಿ 'ಕನಕ' ತೆರೆ ಮೇಲೆ ಬರಲಿದ್ದಾನೆ.

'ಬೃಹಸ್ಪತಿ' ಕೂಡ ತೆರೆಗೆ

ಆರಂಭದ ತಿಂಗಳಲ್ಲೇ ಮೂರು ಸ್ಟಾರ್ ಚಿತ್ರಗಳು ತೆರೆಗೆ ಬರೋದಕ್ಕೆ ಸಿದ್ಧವಾಗಿದೆ. ಇವುಗಳ ಜೊತೆಯಲ್ಲಿ ಮನೋರಂಜನ್ ಅಭಿನಯದ 'ಬೃಹಸ್ಪತಿ' ಚಿತ್ರ ರಿಲೀಸ್ ಆಗಲಿದೆ. ಇನ್ನೂ ಅನೌನ್ಸ್ ಆಗದ ಮತ್ತಷ್ಟು ಚಿತ್ರಗಳು ಇದೇ ತಿಂಗಳು ಬಿಡುಗಡೆ ಆಗಲಿದೆ.

English summary
Kannada actor Shivarajkumar, Duniya Vijay and Sudeep's movies are being released this month(january). Tagaru, Kanaka and Raju Kannada Medium films will be released this month and Manoranjan Ravichandran starrer brihaspati also releasing january 1 week (jan 5th)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X