»   » ತುಳು ಚಿತ್ರ 'ಏರೆಗ್ಲಾ ಪನೊಡ್ಚಿ' ಸದ್ಯದಲ್ಲೇ ನಿಮ್ಮ ಮುಂದೆ

ತುಳು ಚಿತ್ರ 'ಏರೆಗ್ಲಾ ಪನೊಡ್ಚಿ' ಸದ್ಯದಲ್ಲೇ ನಿಮ್ಮ ಮುಂದೆ

By: ಸೋನು ಗೌಡ
Subscribe to Filmibeat Kannada

ಕರಾವಳಿ ಭಾಗದ ಜನರಿಗೆ ಇದೀಗ ಒಂದು ಸಿಹಿ ಸುದ್ದಿ ಬಂದಿದೆ. ಅದೇನಪ್ಪಾ ಅಂದ್ರೆ ತುಂಬಾ ಹಿಟ್ ಚಿತ್ರಗಳಾದ 'ಚಾಲಪೋಲಿಲು', 'ದಂಡ್', 'ರಂಗ್' ಮೂಲಕ ತುಳು ಚಿತ್ರರಂಗದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸಾಲಿಗೆ ಮತ್ತೊಂದು ಚಿತ್ರ ಸೇರ್ಪಡೆಗೊಳ್ಳಲಿದೆ.

ಹೌದು ಹೆಸರಾಂತ ನಿರ್ದೇಶಕ ರಾಜ್ಯ ಪ್ರಶಸ್ತಿ ವಿಜೇತ ಕೋಡ್ಲು ರಾಮಕೃಷ್ಣ ಅವರ 25ನೇ ಚಿತ್ರ 'ಏರೆಗ್ಲಾ ಪನೊಡ್ಚಿ' ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ವಠಾರವೊಂದರಲ್ಲಿ ನಡೆಯುವ ನಿತ್ಯ ಘಟನೆಯನ್ನಾಧರಿಸಿ ಚಿತ್ರದ ಕಥೆ ರಚಿಸಲಾಗಿದ್ದು, ಮಧ್ಯಮ ವರ್ಗದ ಹೆಂಗಸರ ಸುತ್ತ ನಡೆಯುವ ಕಥೆಯಾಗಿದೆ.[ಕೋಡ್ಲು ರಾಮಕೃಷ್ಣ ನಿರ್ದೇಶನದ 25ನೇ ಚಿತ್ರ 'ಏರೆಗ್ಲಾ ಪನೊಡ್ಚಿ']

Thulu movie 'Yeregla Panodchi' to hit screens in soon

ವಠಾರದಲ್ಲಿ ಬಾಡಿಗೆಗೆ ಇರುವ ನಾಲ್ಕು ಹೆಂಗಸರ ಸಂಸಾರಕ್ಕೆ ಸ್ವಂತ ಮನೆ ಬೇಕೆಂಬ ಹಂಬಲ, ಆದರೆ ಮನೆ ಗಂಡಸರಿಗೆ ಅದರ ಜವಾಬ್ದಾರಿ ಇರುವುದಿಲ್ಲ. ಈ ಸಂದರ್ಭದಲ್ಲಿ ಅಲ್ಲಿಗೆ ಮೂರನೇ ವ್ಯಕ್ತಿಯ ಆಗಮನವಾಗಿ ಅವರ ಆಸೆಗೆ ನೀರೆರೆಯುತ್ತಾನೆ ನಂತರ ಏನಾಗುತ್ತೇ ಅಂತ ಚಿತ್ರ ನೋಡಿ ನಿಮಗೆ ಗೊತ್ತಾಗುತ್ತೆ, ಒಟ್ನಲ್ಲಿ ಇವಿಷ್ಟು 'ಏರೆಗ್ಲಾ ಪನೊಡ್ಚಿ' ಚಿತ್ರದ ಹೂರಣ.[ತುಳು ಪರ್ಬ' ಚಿತ್ರದ ಸಖತ್ ಫೀಲಿಂಗ್ಸ್ ನೋಡಿ]

ಇತ್ತೀಚೆಗೆ ಸ್ಯಾಂಡಲ್ ವುಡ್ ನಂತೆ ತುಳು ಚಿತ್ರಗಳು ಚಿತ್ರರಂಗ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತಹ ಸಾಧನೆ ಮಾಡುತ್ತಿದ್ದು, ತುಳು ಸಿನೆಮಾದ ಮಾರ್ಕೆಟ್ ವಿಸ್ತಾರವಾದಂತಿದೆ.

Thulu movie 'Yeregla Panodchi' to hit screens in soon

ಕೋಡ್ಲು ರಾಮಕೃಷ್ಣ ಕ್ರೀಯೇಷನ್ಸ್ ಅರ್ಪಿಸುವ 'ಏರೆಗ್ಲಾ ಪನೋಡ್ಚಿ' ಚಿತ್ರದಲ್ಲಿ ವಿಶೇಷವಾಗಿ ಕನ್ನಡ ನಟಿ ನೀತೂ, ಶಿವಧ್ವಜ್, ಇಳಾ ವಿಟ್ಲ ಸೇರಿದಂತೆ ಶೋಭಾ ರೈ, ಭೋಜರಾಜ ವಾಮಂಜೂರ್, ಅರವಿಂದ ಬೋಳಾರ್, ಸುಂದರ ರೈ ಮಂದಾರ, ರಕ್ಷಾ ಪೈ ಮುಂತಾದವರ ತಾರಾಗಣವಿದ್ದು, ಚಿತ್ರಕ್ಕೆ ಗಿರಧರ ದಿವಾನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.[ಚಾಲಿಪೋಲಿಲು 200; ಸಚಿವ ಖಾದರ್ ಜೊತೆ ಸಂಭ್ರಮ]

ಮಂಗಳೂರು, ಬೆಂಗಳೂರು, ತೀರ್ಥಹಳ್ಳಿ ಹಾಗೂ ಉಡುಪಿ ಸುತ್ತಮುತ್ತಲಲ್ಲಿ ಚಿತ್ರದ ಮಾತಿನ ಭಾಗ ಚಿತ್ರೀಕರಿಸಿದ್ದು, ಕರಾವಳಿಯ ಸುಂದರ ತಾಣಗಳಲ್ಲಿ ಹಾಡಿನ ಚಿತ್ರೀಕರಣ ನಡೆಸಲಾಗಿದೆ.

ಒಟ್ಟಿನಲ್ಲಿ ಪಕ್ಕಾ ಫ್ಯಾಮಿಲಿ ಎಂರ್ಟಟ್ರೈನರ್ ಚಿತ್ರವಾಗಿರುವ 'ಏರೆಗ್ಲಾ ಪನೋಡ್ಚಿ' ಸದ್ಯದಲ್ಲೇ ತೆರೆ ಮೇಲೆ ಅಪ್ಪಳಿಸಲಿದೆ.

English summary
Thulu movie 'Yeregla Panodchi' directed by Kodlu Ramakrishna and Produced by Mohandas Pai and Balakrishna Kalaburgi under the banner of Kudlu Creations, will be released in Soon.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada