»   » ಅಕ್ಟೋಬರ್‌ 27ಕ್ಕೆ ಸತೀಶ್ 'ಟೈಗರ್ ಗಲ್ಲಿ' ಬರ್ತಿದೆ.!

ಅಕ್ಟೋಬರ್‌ 27ಕ್ಕೆ ಸತೀಶ್ 'ಟೈಗರ್ ಗಲ್ಲಿ' ಬರ್ತಿದೆ.!

Posted By:
Subscribe to Filmibeat Kannada

ಸತೀಶ್ ನೀನಾಸಂ ಅಭಿನಯದ 'ಟೈಗರ್ ಗಲ್ಲಿ' ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಿದ್ದು, ಥಿಯೇಟರ್ ಗೆ ಬರಲು ಸಜ್ಜಾಗಿದೆ. ಈಗಾಗಲೇ ಟ್ರೈಲರ್ ಮೂಲಕ ಅಬ್ಬರಿಸುತ್ತಿರುವ 'ಟೈಗರ್ ಗಲ್ಲಿ' ಸೆನ್ಸಾರ್ ನಲ್ಲೂ ಪಾಸ್ ಆಗಿತ್ತು.

ಅಕ್ಟೋಬರ್‌ ಕೊನೆಯ ವಾರದಲ್ಲಿ ಅಂದರೆ ಅಕ್ಟೋಬರ್‌ 27ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರವನ್ನ ಡೆಡ್ಲಿ ಡೈರೆಕ್ಟರ್ ರವಿ ಶ್ರೀವತ್ಸ ನಿರ್ದೇಶಿಸಿದ್ದು, ರವಿ ಶ್ರೀವತ್ಸ ಅವರ ಹಿಂದಿನ ಚಿತ್ರಗಳಂತೆ ಈ ಚಿತ್ರಕ್ಕೂ "ಎ' ಪ್ರಮಾಣ ಪತ್ರ ಸಿಕ್ಕಿದೆ. ಎಂ.ಎನ್. ಕುಮಾರ್ ನಿರ್ಮಿಸಿದ್ದಾರೆ. ಸತೀಶ್ ಈ ಚಿತ್ರದಲ್ಲಿ ಮೊದಲ ಬಾರಿಗೆ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Tiger Galli will release on 27th of October

ಸತೀಶ್ ಗೆ ನಾಯಕಿಯರಾಗಿ ರೋಶನಿ ಪ್ರಕಾಶ್, ಭಾವನಾ ರಾವ್ ನಟಿಸಿದ್ದಾರೆ. ಇನ್ನು ಯಮುನಾ ಶ್ರೀನಿಧಿ, ಶಿವಮಣಿ, ಪೂಜಾ ಲೋಕೇಶ್, ಜಟ್ಟ' ಗಿರಿರಾಜ್, ಯೋಗೇಶ್ ಕುಮಾರ್, ಅಯ್ಯಪ್ಪ ಶರ್ಮ, ಅನಂತ್ ವೇಲು, ಪೂಜಾ ಲೋಕೇಶ್ ಮತ್ತಿತರರು ತಾರಾಬಳಗದಲ್ಲಿದ್ದಾರೆ.

'ಟೈಗರ್ ಗಲ್ಲಿ' ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜಿಸಿದರೆ, ಮ್ಯಾಥ್ಯೂ ರಾಜನ್ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರ ಈಗಾಗಲೇ ಸೆನ್ಸಾರ್ ಆಗಿದ್ದು, ರವಿ ಶ್ರೀವತ್ಸ ಅವರ ಹಿಂದಿನ ಚಿತ್ರಗಳಂತೆ ಈ ಚಿತ್ರಕ್ಕೂ ಎ' ಪ್ರಮಾಣ ಪತ್ರ ಸಿಕ್ಕಿದೆ.

English summary
Sathish Neenasam starrer 'Tiger Galli' which is written and directed by Ravi Srivatsa is already censored with an 'A' certificate to film. the film will release on 27th of October.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X