»   » ಜೂನ್ 16 ರಿಂದ ಗಾಂಧಿನಗರದಲ್ಲಿ 'ಟೈಗರ್' ಘರ್ಜನೆ

ಜೂನ್ 16 ರಿಂದ ಗಾಂಧಿನಗರದಲ್ಲಿ 'ಟೈಗರ್' ಘರ್ಜನೆ

Posted By:
Subscribe to Filmibeat Kannada

ನಂದ ಕಿಶೋರ್ ನಿರ್ದೇಶನದ 'ಟೈಗರ್' ಸಿನಿಮಾ ಬಿಡುಗಡೆಗೆ ಈಗ ದಿನಾಂಕ ನಿಗದಿಯಾಗಿದೆ. ಸಿನಿಮಾ ಇದೇ ತಿಂಗಳು 16ಕ್ಕೆ ತೆರೆಗೆ ಬರುವುದಕ್ಕೆ ರೆಡಿಯಾಗಿದೆ.

'ವಿಕ್ಟರಿ', 'ಅಧ್ಯಕ್ಷ', 'ರನ್ನ', 'ಮುಕುಂದ ಮುರಾರಿ', ಸಿನಿಮಾಗಳನ್ನು ಮಾಡಿದ್ದ ನಂದ ಕಿಶೋರ್ ಈಗ ಮತ್ತೊಂದು ಪಕ್ಕಾ ಕಮರ್ಷಿಯಲ್ ಎಂಟರ್ ಟೈನರ್ ಸಿನಿಮಾದ ಮೂಲಕ ಬಂದಿದ್ದಾರೆ. ಅಂದ್ಹಾಗೆ, ಚಿತ್ರದಲ್ಲಿ ಟೈಗರ್ ಆಗಿ ಘರ್ಜಿಸಿರುವುದು ನಟ ಪ್ರದೀಪ್.['ಟೈಗರ್' ಚಿತ್ರವನ್ನ ಹಾಡಿ ಹೊಗಳಿದ 'ಆಪ್ತಮಿತ್ರ' ಕಿಚ್ಚ ಸುದೀಪ್]

Tiger movie will be release on june 16th

ನಟ ಪ್ರದೀಪ್ ಗೆ ಜೋಡಿಯಾಗಿ 'ಸವಾರಿ-2' ಖ್ಯಾತಿಯ ನಟಿ ಮಧುರಿಮಾ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ಮೂಲಕ ಎಲ್ಲರ ಗಮನ ಸೆಳೆದಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡುಗಳು ಕೂಡ ಬಿಡುಗಡೆಯಾಗಿದ್ದು, ಸಖತ್ ಸೌಂಡ್ ಮಾಡುತ್ತಿವೆ.['ಟೈಗರ್'ಗೆ ಖಡಕ್ ಧ್ವನಿ ನೀಡಿದ 'ಬಬ್ಬರ್ ಶೇರ್' ಕಿಚ್ಚ ಸುದೀಪ್]

Tiger movie will be release on june 16th

ಕಿಚ್ಚ ಸುದೀಪ್ ಸಹ ಇತ್ತೀಚಿಗಷ್ಟೇ 'ಟೈಗರ್' ಸಿನಿಮಾ ನೋಡಿದ್ದು, ಚಿತ್ರತಂಡಕ್ಕೆ ಶುಭಾಶಯ ಕೋರಿದ್ದರು. ಈ ಮೂಲಕ ಬ್ಯಾಕ್ ಟು ಬ್ಯಾಕ್ ನಾಲ್ಕು ಹಿಟ್ ಸಿನಿಮಾಗಳನ್ನು ನೀಡಿದ್ದ ನಂದಕಿಶೋರ್ ಈ ಸಿನಿಮಾದಲ್ಲಿಯೂ ಯಶಸ್ಸು ಗಳಿಸುವ ನಿರೀಕ್ಷೆಯಲ್ಲಿದ್ದಾರೆ.

English summary
kannada actor Pradeep starrer 'Tiger' movie will release on june 16th. The movie is directed by nanda kishore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada