»   » 'ಟೈಗರ್' ಚಿತ್ರವನ್ನ ಹಾಡಿ ಹೊಗಳಿದ 'ಆಪ್ತಮಿತ್ರ' ಕಿಚ್ಚ ಸುದೀಪ್

'ಟೈಗರ್' ಚಿತ್ರವನ್ನ ಹಾಡಿ ಹೊಗಳಿದ 'ಆಪ್ತಮಿತ್ರ' ಕಿಚ್ಚ ಸುದೀಪ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ 'ವಿಕ್ಟರಿ', 'ಅಧ್ಯಕ್ಷ', 'ರನ್ನ', 'ಮುಕುಂದ ಮುರಾರಿ'... ಹೀಗೆ ಬ್ಯಾಕ್ ಟು ಬ್ಯಾಕ್ ನಾಲ್ಕು ಸೂಪರ್ ಹಿಟ್ ಚಿತ್ರಗಳನ್ನ ನಿರ್ದೇಶಿಸಿರುವ ನಂದ ಕಿಶೋರ್ ಈಗ ಪ್ರದೀಪ್ ಗಾಗಿ 'ಟೈಗರ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಒಂದರ ಹಿಂದೊಂದರಂತೆ ಸಕ್ಸಸ್ ಖುಷಿಯಲ್ಲಿಯೇ ಇರುವ ನಂದ ಕಿಶೋರ್, 'ಟೈಗರ್' ಚಿತ್ರದ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಬಿಡುಗಡೆಗೆ ಸಿದ್ಧವಾಗಿರುವ 'ಟೈಗರ್' ಚಿತ್ರಕ್ಕೆ ಈಗ ಆನೆಬಲ ಸಿಕ್ಕಂತಾಗಿದೆ. ಅದೂ ನಂದ ಕಿಶೋರ್ ರವರ ಆಪ್ತಮಿತ್ರ ಕಿಚ್ಚ ಸುದೀಪ್ ಕಡೆಯಿಂದ.! ಮುಂದೆ ಓದಿ...['ಟೈಗರ್'ಗೆ ಖಡಕ್ ಧ್ವನಿ ನೀಡಿದ 'ಬಬ್ಬರ್ ಶೇರ್' ಕಿಚ್ಚ ಸುದೀಪ್]

'ಟೈಗರ್' ಚಿತ್ರವನ್ನ ಮೆಚ್ಚಿದ ಕಿಚ್ಚ ಸುದೀಪ್

ನಂದ ಕಿಶೋರ್ ರವರ ನೂತನ ಪ್ರಯತ್ನ 'ಟೈಗರ್' ಚಿತ್ರವನ್ನ ಕಿಚ್ಚ ಸುದೀಪ್ ಮೆಚ್ಚಿಕೊಂಡಿದ್ದಾರೆ. ಪ್ರದೀಪ್ ನಟನೆ ಕಂಡು ಸುದೀಪ್ ಹಾಡಿ ಹೊಗಳಿದ್ದಾರೆ.

ಟ್ವಿಟ್ಟರ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ ಸುದೀಪ್

ಕಿಚ್ಚ ಸುದೀಪ್ ಗಾಗಿ 'ಟೈಗರ್' ಚಿತ್ರತಂಡ ವಿಶೇಷ ಪ್ರದರ್ಶನ ಹಮ್ಮಿಕೊಂಡಿತ್ತು. (ಯಾವಾಗ, ಎಲ್ಲಿ ಎಂಬ ಖಚಿತ ಮಾಹಿತಿ ಇಲ್ಲ) 'ಟೈಗರ್' ಚಿತ್ರವನ್ನ ವೀಕ್ಷಿಸಿದ ಬಳಿಕ ಚಿತ್ರತಂಡಕ್ಕೆ ಟ್ವಿಟ್ಟರ್ ನಲ್ಲಿ ಕಿಚ್ಚ ಸುದೀಪ್ ಭೇಷ್ ಎಂದಿದ್ದಾರೆ.

ಸುದೀಪ್ ಹೇಳಿರುವುದೇನು.?

''ಟೈಗರ್' ಚಿತ್ರದ ಮೂಲಕ ನಂದ ಕಿಶೋರ್ ಮತ್ತೊಂದು ಕಮರ್ಶಿಯಲ್ ಚಿತ್ರ ಹೆಣೆಯುವಲ್ಲಿ ಯಶಸ್ವಿ ಆಗಿದ್ದಾರೆ. ಪ್ರದೀಪ್ ನಟನೆ ಅದ್ಭುತ. ಅವರ ಸ್ಕ್ರೀನ್ ಪ್ರೆಸೆನ್ಸ್ ಕೂಡ ಚೆನ್ನಾಗಿದೆ'' ಎಂದಿದ್ದಾರೆ ನಟ ಸುದೀಪ್.

'ಟೈಗರ್' ಗೆ ಜೋಶ್ ಸಿಕ್ಕಿದೆ

'ಟೈಗರ್' ಚಿತ್ರದ ಬಗ್ಗೆ ಸುದೀಪ್ ಮೆಚ್ಚುಗೆಯ ಮಾತುಗಳನ್ನಾಡಿರುವುದರಿಂದ, ಚಿತ್ರತಂಡಕ್ಕೆ ಹೊಸ ಹುರುಪು ಸಿಕ್ಕಂತಾಗಿದೆ.

ವಿಶೇಷ ಹಾಡಿಗೆ ಧ್ವನಿ ನೀಡಿದ್ದಾರೆ ಕಿಚ್ಚ ಸುದೀಪ್

'ಟೈಗರ್' ಚಿತ್ರದ ಸ್ಪೆಷಲ್ ಟೀಸರ್ ಸಾಂಗ್ ಗೆ ಕಿಚ್ಚ ಸುದೀಪ್ ಧ್ವನಿ ಕೂಡ ನೀಡಿದ್ದಾರೆ.

'ಟೈಗರ್' ಚಿತ್ರದ ಕುರಿತು...

ಆಕ್ಷನ್ ಥ್ರಿಲ್ಲರ್ ಚಿತ್ರವಾಗಿರುವ 'ಟೈಗರ್' ಸಿನಿಮಾದಲ್ಲಿ ಪ್ರದೀಪ್ ಗೆ Nyra Banerjee ಜೋಡಿಯಾಗಿದ್ದಾರೆ. ಚಿಕ್ಕಣ್ಣ, ಕೆ.ಶಿವರಾಂ, ರವಿಶಂಕರ್, ಸಾಧು ಕೋಕಿಲ, ರಂಗಾಯಣ ರಘು ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ. ಅರ್ಜುನ್ ಜನ್ಯ ಸಂಗೀತ ಇರುವ ಚಿತ್ರಕ್ಕೆ ನಂದ ಕಿಶೋರ್ ಆಕ್ಷನ್ ಕಟ್ ಹೇಳಿದ್ದಾರೆ. 'ಟೈಗರ್' ಚಿತ್ರದ ಬಿಡುಗಡೆ ದಿನಾಂಕ ಇನ್ನೂ ಅನೌನ್ಸ್ ಆಗಿಲ್ಲ.

English summary
Kannada Actor Kiccha Sudeep appreciated Kannada Movie 'Tiger' which features Kannada Actor Pradeep. 'Tiger' is directed by Nanda Kishore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada