»   » ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಮೇಘನಾ ರಾಜ್, ತಿಲಕ್ ನಟನೆ

ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಮೇಘನಾ ರಾಜ್, ತಿಲಕ್ ನಟನೆ

Posted By:
Subscribe to Filmibeat Kannada

ನಟಿ ಮೇಘನಾ ರಾಜ್ ತಮ್ಮ ನಿಶ್ಚಿತಾರ್ಥದ ಬಳಿಕ ಹೊಸ ಸಿನಿಮಾ ಮಾಡುತ್ತಿದ್ದಾರೆ. ಚಿತ್ರಕ್ಕೆ 'ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ' ಎಂಬ ವಿಭಿನ್ನ ಟೈಟಲ್ ಇಟ್ಟಿದ್ದು, ಈಗಾಗಲೇ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.

ಸದ್ಯ ಈ ಸಿನಿಮಾತಂಡಕ್ಕೆ ನಟ ತಿಲಕ್ ಸೇರಿಕೊಂಡಿದ್ದಾರೆ. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ತಿಲಕ್ ಮತ್ತು ಮೇಘನಾ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ತಿಲಕ್ ಪಾತ್ರ ತುಂಬ ಪ್ರಮುಖವಾಗಿದೆಯಂತೆ. ಈ ಪಾತ್ರದ ಮೂಲಕ ಚಿತ್ರಕ್ಕೆ ತಿರುವು ಸಿಗುತ್ತದೆಯಂತೆ.

Tilak has joined Meghana's new film

ಅಂದಹಾಗೆ, ಈ ಹಿಂದೆ 'ಜಲ್ಸಾ' ಚಿತ್ರವನ್ನು ನಿರ್ದೇಶನ ಮಾಡಿದ್ದ ಕಾಂತ ಕನ್ನಲ್ಲಿ ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮೊದಲು ಕಮರ್ಶಿಯಲ್ ಸಿನಿಮಾ ಮಾಡಿದ್ದ ಅವರು ಈಗ ವಿಭಿನ್ನ ಕಥೆಯ ಚಿತ್ರ ಮಾಡುತ್ತಿದ್ದಾರೆ. ಮೇಘನಾ ಅವರ ಕೆರಿಯರ್ ನಲ್ಲಿ ಇದು ವಿಶೇಷ ಸಿನಿಮಾವಾಗಿದ್ದು ಚಿತ್ರದಲ್ಲಿ ಅವರು ಮೂರು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Tilak has joined Meghana's new film

ಸಂಬಂದಗಳ ಸುತ್ತ ಈ ಚಿತ್ರ ಸುತ್ತಲಿದ್ದು, ವಾಸ್ತವಕ್ಕೆ ತುಂಬ ಹತ್ತಿರವಾಗುವ ವಿಷಯ ಚಿತ್ರದಲ್ಲಿದೆಯಂತೆ. ಇನ್ನು ದೇವರಾಜ್ ದಾವಣಗೆರೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ವಿ.ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ.

English summary
Actress Meghana Raj and Tilak Shekar together for 'Iruvudellava Bittu Iruve Bittukolluvude Jeevana' movie. ಒಂದೇ ಸಿನಿಮಾದಲ್ಲಿ ನಟಿ ಮೇಘನಾ ರಾಜ್ ಮತ್ತು ತಿಲಕ್ ನಟಿಸುತ್ತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada