ಕಡೆಗೂ ಕನ್ನಡಕ್ಕೆ ಅಡಿಯಿಟ್ಟ ತ್ರಿಷಾ ಕೃಷ್ಣನ್
ಅಂದಹಾಗೆ ಜನವರಿ 2013ಕ್ಕೆ ಸೆಟ್ಟೇರಲಿರುವ ಈ ಚಿತ್ರದ ಟೈಟಲ್ RUM (ರಂಭೆ ಊರ್ವಶಿ ಮೇನಕೆ). ಇದೊಂದು ಮಹಿಳಾ ಪ್ರಧಾನ ಚಿತ್ರವಂತೆ. ಚಿತ್ರದ ಪಾತ್ರವರ್ಗದಲ್ಲಿ ಯಾರ್‍ಯಾರು ಇದ್ದಾರೆ ಎಂಬುದನ್ನು ಚಿತ್ರತಂಡ ಇನ್ನೂ ಸುಳಿವು ಬಿಟ್ಟುಕೊಟ್ಟಿಲ್ಲ.
ಟಾಲಿವುಡ್ ಟಾಪ್ ನಿರ್ಮಾಪಕರಲ್ಲಿ ಒಬ್ಬರಾದ ಎಂ.ಎಸ್.ರಾಜು ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಈ ಹಿಂದೆಯೂ ಕನ್ನಡದಲ್ಲಿ ಅಭಿನಯಿಸುವಂತೆ ಬಹಳಷ್ಟು ಆಫರ್ ಗಳು ಬಂದಿದ್ದವಂತೆ. ಆದರೆ ಯಾವುದಕ್ಕೂ ಸಹಿ ಹಾಕಿರಲಿಲ್ಲ ಎಂದಿದ್ದಾರೆ ತ್ರಿಷಾ.
ಬಹುಶಃ ಆಕೆಗೆ ಕಥೆ ಇಷ್ಟವಾಗಲಿಲ್ಲವೋ ಅಥವಾ ಕೇಳಿದಷ್ಟು ಸಂಭಾವನೆ ಸಿಗಲಿಲ್ಲವೋ ಕಾರಣ ಸ್ಪಷ್ಟವಾಗಿ ಗೊತ್ತಿಲ್ಲ. ಈಗ ಕನ್ನಡ ಚಿತ್ರಕ್ಕೆ ಸಹಿಹಾಕಿರುವ ತ್ರಿಷಾ ಈ ಬಗ್ಗೆ ಮಾತನಾಡುತ್ತಾ, ಕಲಾವಿದರಿಗೆ ಭಾಷೆ ಯಾವುದಾದರೇನು. ಅವರಿಗೆ ಭಾಷೆಯ ಹಂಗಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆಯೇ ತ್ರಿಷಾ ಕನ್ನಡ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿತ್ತು. ಅದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಸಿಎಂ (ಕಾಮನ್ ಮ್ಯಾನ್) ಚಿತ್ರ ಎಂಬ ಸುದ್ದಿ ಇತ್ತು. ಈ ಚಿತ್ರಕ್ಕಾಗಿ ರು.80 ಲಕ್ಷ ಸಂಭಾವನೆಯನ್ನೂ ತ್ರಿಷಾ ಅವರಿಗೆ ನೀಡಲಾಗಿದೆ ಎನ್ನಲಾಗಿತ್ತು. ಬಳಿಕ ಆ ಚಿತ್ರದ ಕಥೆ ಏನಾಯಿತೋ ಏನೋ ಗೊತ್ತಿಲ್ಲ. (ಏಜೆನ್ಸೀಸ್)


Click it and Unblock the Notifications












