»   » 'ಚಾಲಿ ಪೋಲಿಲು' ಕಲಾವಿದರಿಗೆ ಹೊಸ ಬಿರುದು ಸನ್ಮಾನ

'ಚಾಲಿ ಪೋಲಿಲು' ಕಲಾವಿದರಿಗೆ ಹೊಸ ಬಿರುದು ಸನ್ಮಾನ

Posted By:
Subscribe to Filmibeat Kannada

ಈ ವರ್ಷ ಭಾರಿ ಸದ್ದು ಮಾಡಿದ ತುಳು ಚಿತ್ರ 'ಚಾಲಿ ಪೋಲಿಲು'. ಈ ಚಿತ್ರ ಶತದಿನೋತ್ಸವ ಪೂರೈಸಿರುವುದಷ್ಟೇ ಅಲ್ಲದೆ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. ಈ ಚಿತ್ರದ ನಟರಿಗೆ ಇತ್ತೀಚೆಗೆ ಹೊಸ ಬಿರುದುಗಳನ್ನು ಪ್ರದಾನ ಮಾಡಿ ಮಂಗಳೂರಿನಲ್ಲಿ ಸನ್ಮಾನಿಸಲಾಯಿತು.

ಜಯಕಿರಣ ಫಿಲಂಸ್ ಲಾಂಛನದಲ್ಲಿ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದ 'ಚಾಲಿಪೋಲಿಲು' ತುಳು ಚಿತ್ರದ ಶತದಿನೋತ್ಸವ ಸಮಾರಂಭದ ಸಂದರ್ಭದಲ್ಲಿ ಚಿತ್ರನಟ ಅರವಿಂದ ಬೋಳಾರ್ ಅವರಿಗೆ 'ತುಳುವ ಮಾಣಿಕ್ಯ', ಭೋಜರಾಜ್ ವಾಮಂಜೂರ್ ಅವರಿಗೆ 'ನವರಸ ರಾಜೆ' ಹಾಗೂ ಲಕ್ಷ್ಮಣ್ ಕುಮಾರ್ ಮಲ್ಲೂರ್ ಅವರಿಗೆ 'ರಂಗಭೂಷಣ' ಬಿರುದು ನೀಡಿ ಸನ್ಮಾನಿಸಲಾಯಿತು. [ಚಾಲಿಪೋಲಿಲು ಚಿತ್ರ ವಿಮರ್ಶೆ]

Chaali Polilu actors honoured

ಡಾನ್ ಬಾಸ್ಕೋ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಹಿರಿಯ ಜಾನಪದ ವಿದ್ವಾಂಸ ಡಾ. ಬಿ.ಎ. ವಿವೇಕ್ ರೈ, ಡಾ. ಹಂನ್ಸರಾಜ್ ಆಳ್ವ ಅವರು ಅರವಿಂದ ಬೋಳಾರ್ ಮತ್ತು ಭೋಜರಾಜ್ ವಾಮಂಜೂರ್ ಅವರನ್ನು ಗೌರವಿಸಿದರು. ಲಕ್ಷ್ಮಣ್ ಕುಮಾರ್ ಮಲ್ಲೂರ್ ಅವರನ್ನು ಮೇಯರ್ ಮಹಾಬಲ ಮಾರ್ಲ ಸನ್ಮಾನಿಸಿದರು.

ಸಂಗೀತ ನಿರ್ದೇಶಕ ವಿ. ಮನೋಹರ್, ದೇವದಾಸ್ ಕಾಪಿಕಾಡ್, ಉತ್ಪಲ್ ನಾಯರ್, ಕರ್ನೂರ್ ಮೋಹನ್ ರೈ, ಗಿರೀಶ್ ಶೆಟ್ಟಿ ಕಟೀಲ್, ಪ್ರಕಾಶ್ ಪಾಂಡೇಶ್ವರ್,ವೀರೇಂದ್ರ ಶೆಟ್ಟಿ ಕಾವೂರ್, ಜಗನ್ನಾಥ ಶೆಟ್ಟಿ ಬಾಳ, ಕದ್ರಿ ನವನೀತ್ ಶೆಟ್ಟಿ ಉಪಸ್ಥಿತರಿದ್ದರು.

ಚಾಲಿಪೋಲಿಲು ಉತ್ತಮ ಗುಣಮಟ್ಟ ಮತ್ತು ಉತ್ತಮ ಕಥೆ, ಸಂದೇಶ, ಹಾಸ್ಯದಿಂದ ಎಲ್ಲ ವರ್ಗದ ಜನರನ್ನೂ ಸೆಳೆದಂಥ ಒಂದು ಉತ್ಕೃಷ್ಟ ಮಟ್ಟದ ಸಿನಿಮಾ ಆಗಿದೆ. ಮಹಿಳೆಯರೂ, ಮಕ್ಕಳನ್ನೂ ಇದು ಸಿನಿಮಾ ಮಂದಿರಕ್ಕೆ ಸೆಳೆದಿದೆ

ಹಲವಾರು ನಟ, ನಟಿಯರ ಭವಿಷ್ಯಕ್ಕೆ ಚಾಲಿಪೋಲಿಲು ಹೊಸ ರೂಪ ನೀಡಿದೆ ಎಂಬುದು ಚಿತ್ರತಂಡಕ್ಕೆ ಹೆಮ್ಮೆಯ ಸಂಗತಿ. ಇತ್ತೀಚೆಗೆ ಮಂಗಳೂರಿನ ಫೋರಂ ಮಾಲ್ ನಲ್ಲಿ ನಡೆದ ತುಳು ಚಿತ್ರೋತ್ಸವ 2014ರ ವಿಭಾಗದಲ್ಲಿ ಚಾಲಿಪೋಲಿಲು 8 ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ತನ್ನ ಸಾಧನೆಗೆ ಒಂದು ಅಧಿಕೃತ ಮನ್ನಣೆಯನ್ನು ಗಳಿಸಿಕೊಂಡಿದೆ. (ಫಿಲ್ಮಿಬೀಟ್ ಕನ್ನಡ)

English summary
Tulu movie 'Chaali Polilu' actors Aravinda Bolar, Bhojaraj Vamanjoor and Lakshman Kumar Mallur honoured in Mangaluru with new title 'Tuluva Manikya', 'Navarasa Raje' and 'Rangabhushana' respectively.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada