ಕಿರುತೆರೆ ನಟಿ 'ಕುಲವಧು' ವಚನಾಗೆ ಕಂಕಣ ಬಲ ಕೂಡಿ ಬಂದಿದೆ.!

ಬಣ್ಣದ ಲೋಕದಲ್ಲಂತೂ ಇತ್ತೀಚೆಗೆ ಮದುವೆ ಸೀಸನ್ ಜೋರಾಗಿದೆ. ನಟ ಧ್ರುವ ಸರ್ಜಾ ನಿಶ್ಚಿತಾರ್ಥ ಮಾಡಿಕೊಂಡರು. ದಿಗಂತ್-ಐಂದ್ರಿತಾ ರೇ ಮದುವೆ ನಡೆಯಿತು. ಇದೇ ತಿಂಗಳು ನೇಹಾ ಪಾಟೀಲ್ ವಿವಾಹ ನೆರವೇರಲಿದೆ. ಇನ್ನೂ ಕಿರುತೆರೆ ನಟ ಜಗನ್ನಾಥ್ ಚಂದ್ರಶೇಖರ್ ಎಂಗೇಜ್ ಆದರು. ಸದ್ಯದಲ್ಲೇ 'ಅಗ್ನಿಸಾಕ್ಷಿ' ಧಾರಾವಾಹಿ ಖ್ಯಾತಿಯ ವಿಜಯ್ ಸೂರ್ಯ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಹೀಗಿರುವಾಗಲೇ, 'ಕುಲವಧು' ಧಾರಾವಾಹಿ ಖ್ಯಾತಿಯ ವಚನಾ ಅಲಿಯಾಸ್ ಅಮೃತಾಗೂ ಕಂಕಣ ಬಲ ಕೂಡಿ ಬಂದಿದೆ. ಕಿರುತೆರೆ ನಟ ರಘು ಜೊತೆ ಅಮೃತಾ ಮದುವೆ ನಿಶ್ಚಯ ಆಗಿದೆ.

TV Actor Raghu and TV Actress Amrutha to get married in May 2019

'ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ' ಧಾರಾವಾಹಿಯಲ್ಲಿ ಒಟ್ಟಿಗೆ ಅಭಿನಯಿಸಿದ್ದ ರಘು ಮತ್ತು ಅಮೃತಾ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇಬ್ಬರ ಪ್ರೀತಿಗೆ ಕುಟುಂಬದವರು ಒಪ್ಪಿಗೆ ನೀಡಿದ್ದು, ಇತ್ತೀಚೆಗಷ್ಟೇ ನಿಶ್ಚಿತಾರ್ಥ ಕೂಡ ನೆರವೇರಿದೆ.

ಮೇ 12 ಮತ್ತು 13 ರಂದು ರಘು ಮತ್ತು ಅಮೃತಾ ವಿವಾಹ ಮಹೋತ್ಸವ ನಡೆಯಲಿದೆ. ಹೊಸ ಜೀವನಕ್ಕೆ ಅಡಿಯಿಡುತ್ತಿರುವ ರಘು ಮತ್ತು ಅಮೃತಾಗೆ ನಮ್ಮ ಕಡೆಯಿಂದಲೂ ಶುಭಾಶಯಗಳು.

More from Filmibeat

English summary
TV Actor Raghu and TV Actress Amrutha to get married in May 2019.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X