Don't Miss!
- News
Peshawar Mosque Blast: ಪೇಶಾವರ ಮಸೀದಿಯಲ್ಲಿ ಆತ್ಮಾಹುತಿ ಬಾಂಬರ್ನ ತುಂಡಾದ ತಲೆ ಪತ್ತೆ!
- Automobiles
ಹೋಂಡಾ ಆಕ್ಟೀವಾ 6Gಗೆ ಸೆಡ್ಡು ಹೊಡೆಯಲು ಮಾರುಕಟ್ಟೆಗಿಳಿದ ಹೀರೋ Xoom... ಏನಿದರ ವಿಶೇಷತೆ!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Technology
ಜಿಯೋ ಟ್ರೂ 5G ಸೇವೆ ಈಗ ಚಿತ್ರದುರ್ಗದಲ್ಲಿಯೂ ಲಭ್ಯ!..5G ರೀಚಾರ್ಜ್ ಬೆಲೆ ಎಷ್ಟು?
- Sports
WIPL 2023: ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಸಲಗ' ಜೊತೆ ರಿಲೀಸ್ ಆಗಲಿದೆ ಮತ್ತೊಂದು ನಿರೀಕ್ಷೆಯ ಸಿನಿಮಾ
ಕೊರೊನಾ ಬಿಕ್ಕಟ್ಟಿನಿಂದ ನಿಧಾನವಾಗಿ ಚೇತರಿಕೆ ಕಾಣುತ್ತಿರುವ ಸಮಯದಲ್ಲಿ ಒಂದೊಂದೆ ಚಿತ್ರಗಳು ತೆರೆಗೆ ಬರಲು ಸಜ್ಜಾಗಿದೆ. ಕಳೆದ ವರ್ಷದಿಂದ ಪ್ರೇಕ್ಷಕರೆದುರು ಬರಲು ಕಾಯುತ್ತಿರುವ ನಿರೀಕ್ಷೆಯ ಚಿತ್ರಗಳು ರಿಲೀಸ್ ದಿನಾಂಕ ಲಾಕ್ ಮಾಡಿಕೊಂಡಿದೆ. ಸದ್ಯದ ಲೆಕ್ಕಾಚಾರ ಗಮನಿಸಿದರೆ ಆಗಸ್ಟ್ ತಿಂಗಳಿನಿಂದ ಗಾಂಧಿನಗರದಲ್ಲಿ ಸಿನಿಜಾತ್ರೆ ಆರಂಭವಾಗಲಿದೆ.
ಸ್ಟಾರ್ ನಟರ ಚಿತ್ರಗಳೆಲ್ಲವೂ ಜುಲೈ ತಿಂಗಳು ಮುಗಿದ ನಂತರ ಥಿಯೇಟರ್‌ಗೆ ಬರಲು ನಿರ್ಧರಿಸಿದೆ. ಅಷ್ಟರೊಳಗೆ 50 ಪರ್ಸೆಂಟ್ ಇರುವ ಆಸನ ಭರ್ತಿ, 100 ಪರ್ಸೆಂಟ್ ಆಗುವ ನಿರೀಕ್ಷೆ ಇಟ್ಟುಕೊಂಡಿದೆ. ಇನ್ನು ಚಿತ್ರರಂಗದ ಮತ್ತು ನಿರ್ಮಾಪಕರ ಹಿತದೃಷ್ಟಿಯಿಂದ ಯಾವುದೇ ಸಿನಿಮಾಗಳಿಗೆ ತೊಂದರೆಯಾಗದಂತೆ ರಿಲೀಸ್ ಪ್ಲಾನ್ ಆಗಿದೆ. ಇಂತಹ ಎಚ್ಚರಿಕೆಯ ನಡುವೆಯೂ ಒಂದೇ ದಿನ ಎರಡು ಚಿತ್ರಗಳು ಥಿಯೇಟರ್‌ಗೆ ಬರಲು ಮುಂದಾಗಿದೆ. ದುನಿಯಾ ವಿಜಯ್ ನಿರ್ದೇಶಿಸಿರುವ ಸಲಗ ಸಿನಿಮಾದೊಂದಿಗೆ ಮತ್ತೊಂದು ನಿರೀಕ್ಷೆಯ ಸಿನಿಮಾ ಚಿತ್ರಮಂದಿರಕ್ಕೆ ಬರುವುದಾಗಿ ಪ್ರಕಟಿಸಿಕೊಂಡಿದೆ. ಮುಂದೆ ಓದಿ...

ವರಮಹಾಲಕ್ಷ್ಮಿ ಹಬ್ಬಕ್ಕೆ ಸಲಗ
ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಆಗಸ್ಟ್ 20 ರಂದು ಸಲಗ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ನಿರ್ಧರಿಸಿದೆ. ದುನಿಯಾ ವಿಜಯ್ ಮೊದಲ ಸಲ ನಟನೆಯ ಜೊತೆ ನಿರ್ದೇಶನ ಮಾಡಿರುವ ಚಿತ್ರ ಇದಾಗಿದ್ದು, ಹೆಚ್ಚು ನಿರೀಕ್ಷೆ ಮೂಡಿಸಿದೆ. ವಿಜಯ್ ಜೊತೆ ಡಾಲಿ ಧನಂಜಯ್ ಸಹ ಪ್ರಮುಖ ಪಾತ್ರ ನಿರ್ವಹಿಸಿದ್ದು, ಕೆಪಿ ಶ್ರೀಕಾಂತ್ ಬಂಡವಾಳ ಹಾಕಿದ್ದಾರೆ.
ದುನಿಯಾ
ವಿಜಯ್
'ಸಲಗ'
ಬಿಡುಗಡೆಗೆ
ಮುಹೂರ್ತ
ನಿಗದಿ

ಆಗಸ್ಟ್ 20ಕ್ಕೆ 'ನಿನ್ನ ಸನಿಹಕೆ'
ಸಲಗ ಬಿಡುಗಡೆ ದಿನವೇ ಡಾ ರಾಜ್ ಕುಮಾರ್ ಮೊಮ್ಮಗಳು ಅಭಿನಯದ 'ನಿನ್ನ ಸನಿಹಕೆ' ಚಿತ್ರವೂ ಥಿಯೇಟರ್‌ಗೆ ಬರಲಿದೆ. ಸೂರಜ್ ಗೌಡ ನಟಿಸಿ, ನಿರ್ದೇಶಿಸಿರುವ 'ನಿನ್ನ ಸನಿಹಕೆ' ಚಿತ್ರವೂ ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಪ್ರೇಕ್ಷಕರೆದುರು ಬರುವುದಾಗಿ ಘೋಷಿಸಿಕೊಂಡಿದೆ. ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರಗಳ ನಡುವೆ ಯಾವುದೇ ಪೈಪೋಟಿ ಇಲ್ಲವಾದರೂ ಕೋವಿಡ್ ಕಷ್ಟದ ಸಮಯದಲ್ಲಿ ಎರಡು ಚಿತ್ರ ಒಂದೇ ದಿನ ಬರ್ತಿರುವುದು ಚರ್ಚೆಗೆ ಕಾರಣವಾಗಿದೆ.

ಸೆಪ್ಟೆಂಬರ್‌ನಲ್ಲಿ ಭಜರಂಗಿ 2
'ಸಲಗ' ರಿಲೀಸ್ ಆದ 20 ದಿನಗಳ ನಂತರ ಶಿವಣ್ಣನ ಭಜರಂಗಿ-2 ಸಿನಿಮಾ ಬರ್ತಿದೆ. ಅಂದ್ರೆ ಸೆಪ್ಟೆಂಬರ್ 10ಕ್ಕೆ 'ಭಜರಂಗಿ-2' ಚಿತ್ರ ಥಿಯೇಟರ್ ಬರುವುದು ಖಚಿತವಾಗಿದೆ. ಲೆಕ್ಕಾಚಾರದಂತೆ ಸಲಗ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಇಂಡಸ್ಟ್ರಿಯಲ್ಲಿ ಮತ್ತೆ ಸಿನಿಮಾ ಸಂಭ್ರಮ ಶುರುವಾಗಲಿದೆ.
ಮೋಹಕ
ತಾರೆ
ರಮ್ಯಾ
ಇತ್ತೀಚಿಗೆ
ಹೆಚ್ಚು
ಇಷ್ಟ
ಪಟ್ಟ
ಕನ್ನಡದ
ಹಾಡಿದು

ಸುದೀಪ್ ಬರ್ತಡೇಗೆ ಕೋಟಿಗೊಬ್ಬ 3
ಸಲಗ ಹಾಗೂ ಭಜರಂಗಿ ಸಿನಿಮಾಗಳ ನಡುವೆ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ತೆರೆಗೆ ಬರಲಿದೆ. ಸದ್ಯದ ಮಾಹಿತಿ ಪ್ರಕಾರ, ಸೆಪ್ಟೆಂಬರ್ 2 ರಂದು ಕೋಟಿಗೊಬ್ಬ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿಲ್ಲ.