For Quick Alerts
  ALLOW NOTIFICATIONS  
  For Daily Alerts

  ಮಾರ್ಚ್ 1ಕ್ಕೆ 'ಯಜಮಾನ' ಚಿತ್ರದ ಜೊತೆ ಬರ್ತಿದೆ 2 ಕನ್ನಡ ಸಿನಿಮಾ

  |
  ಮಾರ್ಚ್ 1ಕ್ಕೆ 'ಯಜಮಾನ' ಚಿತ್ರದ ಜೊತೆ ಬರ್ತಿದೆ 2 ಕನ್ನಡ ಸಿನಿಮಾ..! | FILMIBEAT KANNADA

  ಸಾಮಾನ್ಯವಾಗಿ ದೊಡ್ಡ ಸ್ಟಾರ್ ಗಳ ಸಿನಿಮಾಗಳು ಬಂದಾಗ ಹೊಸಬರು ಚಿತ್ರಗಳು ತಮ್ಮ ಬಿಡುಗಡೆ ದಿನಾಂಕವನ್ನ ಒಂದು ವಾರಕ್ಕೋ ಅಥವಾ ಎರಡು ವಾರಕ್ಕೂ ಮುಂದಕ್ಕೆ ಹಾಕಿಕೊಳ್ತಾರೆ. ಎಂತಹ ದೊಡ್ಡ ಚಿತ್ರವೇ ಬಂದರೂ, ನಮ್ಮ ಸಿನಿಮಾ ಚೆನ್ನಾಗಿದ್ರೆ ಜನ ಬಂದೇ ಬರ್ತಾರೆ, ನೋಡೇ ನೋಡ್ತಾರೆ ಎಂಬ ಕಾನ್ಫಿಡೆನ್ಸ್ ನಿಂದ ಅದೇ ದಿನ ಬರೋದು ನೋಡಿದ್ದೀವಿ.

  ಅದರಲ್ಲೂ ದರ್ಶನ್ ಯಜಮಾನ ಅಂತಹ ಸಿನಿಮಾ ಬಂದಾಗ, ಆಲ್ ಮೋಸ್ಟ್ ಥಿಯೇಟರ್ ಗಳನ್ನ ಕಸಿದುಕೊಳ್ಳುತ್ತೆ. ಒಂದು ವಾರ ಪೂರ್ತಿ ರಾಜ್ಯಾದ್ಯಂತ ಯಜಮಾನನ ಹವಾ ಇದ್ದೇ ಇರುತ್ತೆ. ಹಾಗಾಗಿ ಮುಂದಾಲೋಚನೆಯಿಂದ ಆ ದಿನ ಬರಬೇಕು ಅಂದುಕೊಂಡಿದ್ದ ಸಿನಿಮಾಗಳು ಮುಂದಕ್ಕೆ ಹೋಗುವುದು ಸಹಜ.

  ಆದ್ರೆ, ಯಜಮಾನ ಸಿನಿಮಾ ರಿಲೀಸ್ ದಿನವೇ ಎರಡು ಕನ್ನಡ ಸಿನಿಮಾ ತೆರೆಕಾಣಲು ಸಜ್ಜಾಗಿದೆ. ಈ ಎರಡು ಚಿತ್ರಗಳು ದಿನಾಂಕವನ್ನ ಘೋಷಿಸಿದೆ. ಅಷ್ಟಕ್ಕೂ, ಆ ಚಿತ್ರಗಳು ಯಾವುದು? ಮುಂದೆ ಓದಿ....

  ರಾಘಣ್ಣನ ಅಮ್ಮನ ಮನೆ

  ರಾಘಣ್ಣನ ಅಮ್ಮನ ಮನೆ

  ರಾಘವೇಂದ್ರ ರಾಜ್ ಕುಮಾರ್ ತುಂಬಾ ವರ್ಷದ ನಂತರ ನಟಿಸಿರುವ ಸಿನಿಮಾ ಅಮ್ಮನ ಮನೆ. ಸದ್ಯ ಪೋಸ್ಟರ್, ಟೀಸರ್ ನಿಂದ ಗಮನ ಸೆಳೆದಿರುವ ಈ ಚಿತ್ರದ ಆಡಿಯೋ ಫೆಬ್ರವರಿ 23 ರಂದು ಆಗಲಿದೆ. ಈ ಚಿತ್ರ ಮಾರ್ಚ್ 1 ರಂದು ಚಿತ್ರಮಂದಿರಕ್ಕೆ ಬರ್ತಿರುವುದು ಕುತೂಹಲ ಮೂಡಿಸಿದೆ.

  ಕಾಲೇಜ್ ಡೇಸ್

  ಕಾಲೇಜ್ ಡೇಸ್

  ಕಲರ್ಸ್ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ಎಂ.ಎಸ್.ರವೀಂದ್ರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಕಾಲೇಜ್ ಡೇಸ್' ಸಿನಿಮಾ ಮಾರ್ಚ್ 1 ರಂದೇ ಬರುವುದಾಗಿ ಘೋಷಿಸಿಕೊಂಡಿದೆ. ಸದ್ಯ ಟ್ರೈಲರ್, ಹಾಡುಗಳನ್ನ ರಿಲೀಸ್ ಮಾಡಿ ತಕ್ಕ ಮಟ್ಟಿಗೆ ಸದ್ದು ಮಾಡಿದೆ. ಅಕ್ಷಯ್ ನಾಯಕನಾಗಿದ್ದು ಪಲ್ಲವಿ ಮತ್ತು ಸ್ಮಿತಾ ನಾಯಕಿಯಾಗಿ ನಟಿಸಿದ್ದಾರೆ.

  ಮುಂದಕ್ಕೆ ಹೋಗುತ್ತಾ?

  ಮುಂದಕ್ಕೆ ಹೋಗುತ್ತಾ?

  ಸದ್ಯಕ್ಕೆ ಈ ಎರಡು ಚಿತ್ರಗಳು ರಿಲೀಸ್ ದಿನಾಂಕವನ್ನ ಘೋಷಿಸಿದೆ. ದರ್ಶನ್ ಸಿನಿಮಾ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವುದರಿಂದ, ಈ ಚಿತ್ರಗಳಿಗೆ ಥಿಯೇಟರ್ ಕೊರತೆ ಎದುರಾಗಬಹುದು ಎಂಬ ನಿರೀಕ್ಷೆ ಇದೆ. ಇನ್ನು ಒಂದು ವಾರ ಸಮಯವಿದ್ದು, ಅಷ್ಟರಲ್ಲಿ ಮುಂದಕ್ಕೆ ಹೋಗಬಹುದಾ ಎಂಬ ಲೆಕ್ಕಾಚಾರ ಇದೆ.

  ಯಜಮಾನ ಜೊತೆ ಮತ್ಯಾರು?

  ಯಜಮಾನ ಜೊತೆ ಮತ್ಯಾರು?

  ಸದ್ಯಕ್ಕೆ ಯಜಮಾನ, ಅಮ್ಮನ ಮನೆ, ಕಾಲೇಜ್ ಡೇಸ್ ಚಿತ್ರಗಳು ಮಾರ್ಚ್ 1ಕ್ಕೆ ಬರ್ತಿದೆ. ಇದರ ಜೊತೆ ಮತ್ಯಾವ ಚಿತ್ರಗಳು ಬರಲಿದೆ ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಕನ್ನಡದ ಜೊತೆ ತೆಲುಗು, ಹಿಂದಿ, ತಮಿಳು ಚಿತ್ರಗಳು ಬರುವ ಸಾಧ್ಯತೆ ಇದೆ.

  English summary
  Challenging star darshan starrer yajamana, Raghavendra rajkumar starrer ammana mane and college days movies releasing on march 1st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X