For Quick Alerts
  ALLOW NOTIFICATIONS  
  For Daily Alerts

  ಮರಕಿಣಿ ಅವರ 'ಟಚ್ ಸ್ಕ್ರೀನ್' ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ

  By Bharath Kumar
  |

  ಹಿರಿಯ ಸಿನಿಮಾ ಪತ್ರಕರ್ತ, ವಿಮರ್ಶಕ ಹಾಗೂ ಸಂಭಾಷಣಾಕಾರ ಉದಯ ಮರಕಿಣಿ ಅವರ ಅಂಕಣ ಬರಹಗಳ ಸಂಕಲನ 'ಟಚ್ ಸ್ಕ್ರೀನ್'ಗೆ ರಾಜ್ಯ ಸರ್ಕಾರ ನೀಡುವ 2014ನೇ ಸಾಲಿನ ಅತ್ಯುತ್ತಮ ಸಿನಿಮಾ ಸಾಹಿತ್ಯ ಪ್ರಶಸ್ತಿ ಲಭಿಸಿದೆ.

  ಚಲನಚಿತ್ರರಂಗದಲ್ಲಿ ತಾವು ಕಂಡ ವ್ಯಕ್ತಿಗಳ, ಘಟನೆಗಳ ಕುರಿತು ಉದಯ ಮರಕಿಣಿ ಅವರು ಚಿತ್ರಲೋಕ.ಕಾಮ್‌ ವೆಬ್‌ಸೈಟಿಗೆ ಬರೆದ ಅಂಕಣಗಳ ಸಂಗ್ರಹ ಈ 'ಟಚ್ ಸ್ಕ್ರೀನ್'. ಹಿರಿಯ ನಟರ ಜೊತೆಗಿನ ಅನುಭವ, ಚಿತ್ರರಂಗದ ಬಿಕ್ಕಟ್ಟುಗಳು, ಸಿನಿಮಾ ಕಷ್ಟಗಳು, ವಿವಾದಗಳು, ಸಂವಾದಗಳು, ಸಂತೋಷದ ಸನ್ನಿವೇಶಗಳು ಸೇರಿದಂತೆ ಹಲವು ವಿಷಯಗಳು ಈ ಪುಸ್ತಕದಲ್ಲಿದ್ದವು. ಈ ಪುಸ್ತಕವನ್ನ ಚಿತ್ರಲೋಕ.ಕಮ್ ನ 15ನೇ ವರ್ಷದ ಸಂಭ್ರಮಾಚರಣೆಯಲ್ಲಿ ಬಿಡುಗಡೆ ಮಾಡಲಾಗಿತ್ತು.

  ಚಿತ್ರಲೋಕ.ಕಾಮ್‌ನ ಮಾಲೀಕ ಕೆ.ಎಂ.ವೀರೇಶ್‌ 'ಟಚ್ ಸ್ಕ್ರೀನ್' ಕೃತಿಯನ್ನ ಪ್ರಕಟಿಸಿದ್ರು. ಹೀಗಾಗಿ, ಉದಯ ಮರಕಿಣಿ ಹಾಗೂ ಪ್ರಕಾಶನ ಮಾಡಿದ ವೀರೇಶ್‌ ಅವರಿಗೆ ಜಂಟಿಯಾಗಿ ರಾಜ್ಯ ಚಲನಚಿತ್ರ ಸಾಹಿತ್ಯ ಪ್ರಶಸ್ತಿ ಲಭಿಸಲಿದ್ದು, 50 ಗ್ರಾಂ ನ ಬೆಳ್ಳಿ ಪದಕ ಮತ್ತು 20 ಸಾವಿರ ರೂಪಾಯಿ ನಗದು ಬಹುಮಾನ ದೊರಕಲಿದೆ.

  2014ನೇ ಸಾಲಿನ ಪ್ರಶಸ್ತಿಯನ್ನ 'ಟಚ್ ಸ್ಕ್ರೀನ್' ಪುಸ್ತಕಕ್ಕೆ ಹಾಗೂ 2015ನೇ ಸಾಲಿನ ಪ್ರಶಸ್ತಿಯನ್ನ 'ಡಾ.ರಾಜ್ ಕುಮಾರ್ ಸಮಗ್ರ ಚರಿತ್ರೆ' ಪುಸ್ತಕ ಬರೆದ 'ರುಕ್ಕೋಜಿ' ಅವರಿಗೆ ಈ ವರ್ಷದ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಲಾಗುತ್ತದೆ.

  English summary
  Well known Uday Marakini's first book 'Touch Screen' which is a collection of his columns in Chitraloka.com has been awarded the best book for the year 2014 from the Karnataka State Government.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X