»   » ಎಂಥದಾ ಟ್ರೇಲರ್ ನೋಡಿಲ್ವ.. ಶೂಟ್ ಮಾಡ್ಬೇಕಾ!

ಎಂಥದಾ ಟ್ರೇಲರ್ ನೋಡಿಲ್ವ.. ಶೂಟ್ ಮಾಡ್ಬೇಕಾ!

Posted By:
Subscribe to Filmibeat Kannada

'ನಾನು ನಟನಾಗಬೇಕು ಎಂದು ಚಿತ್ರರಂಗಕ್ಕೆ ಬಂದಿದ್ದಲ್ಲ. ನಿರ್ದೇಶನ ಎಂದಿದ್ದರೂ ನನ್ನ ಮೊದಲ ಆಯ್ಕೆ' ಎಂದು ಹೇಳಲು ನಿಜಕ್ಕೂ ಧೈರ್ಯ ಬೇಕು. ಆಗಿನ್ನೂ ಸುನಿ ನಿರ್ದೇಶನದ ಸಿಂಪಾಲ್ಲಾಗ್ ಒಂದು ಲವ್ ಸ್ಟೋರಿ ರಿಲೀಸ್ ಆಗಿತ್ತು ನಮ್ಮ ಒನ್ ಇಂಡಿಯಾ ಕಚೇರಿಯಲ್ಲಿ ಕುಳಿತು ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಹೇಳಿದ ಮಾತು ಇನ್ನೂ ನೆನಪಿದೆ.

ತುಗ್ಲಕ್, Lets kill gandhi ರಕ್ಷಿತ್ ಶೆಟ್ಟಿ ನಂತರ ಸಿಂಪಾಲ್ಲಾಗೊಂದು ಲವ್ ಸ್ಟೋರಿ ನಂತರ ಸಿಂಪಲ್ ಸ್ಟಾರ್ ಆಗಿ ಬೆಳೆದು ಈಗ 'ಉಳಿದವರು ಕಂಡಂತೆ' ಮೂಲಕ ಹೊಸ ಟ್ರೆಂಡ್ ಸೆಟ್ಟರ್ ಆಗಿದ್ದಾರೆ. ಉಳಿದವರು ಕಂಡಂತೆ ಚಿತ್ರದ ಟೇಲರ್ ತ್ರಿವೇಣಿ ಚಿತ್ರಮಂದಿರದಲ್ಲಿ ಶನಿವಾರ ಭರ್ಜರಿಯಾಗಿ ರಿಲೀಸ್ ಆಗಿದ್ದೇ ತಡ ಅಭಿಮಾನಿಗಳ ಮನಸೂರೆಗೊಂಡಿದೆ.

ಉಳಿದವರು ಕಂಡಂತೆ ಟ್ರೇಲರ್ ಈಗಾಗಲೇ 50 ಸಾವಿರ ಗಡಿ ದಾಟಿ ಮುನ್ನುಗ್ಗುತ್ತಿದೆ. ಕುಂದ್ರಾಪ ಕನ್ನಡ ಸಾಫ್ಟ್ ಬೈಗುಳಗಳು ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. 80 ರ ದಶಕದಲ್ಲಿ ಉಡುಪಿ ಸುತ್ತಮುತ್ತ ಶ್ರೀಕೃಷ್ಣ ಜನ್ಮಾಷ್ಟಮಿ ದಿನ ನಡೆದ ಘಟನಾವಳಿ ಸುತ್ತ ಕಥೆ ಹೆಣೆಯಲಾಗಿದೆಯಂತೆ. ಕರಾವಳಿ ಭಾಗದಲ್ಲೇ ಚಿತ್ರಿತವಾಗಿರುವ ಟ್ರೇಲರ್ ಹೇಗಿದೆ ಎಂಬುದನ್ನು ನೋಡಿ..

Ulidavaru Kandanthe's Trailer Gets Rave Reviews

ಟ್ರೇಲರ್ ರಿಲೀಸ್ ಸಮಾರಂಭಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಲೂಸ್ ಮಾದ ಯೋಗಿ, ಹರ್ಷಿಕಾ ಪೂಣಚ್ಚ, ಮೇಘನಾ ಗಾಂವ್ ಕರ್, ನಿರ್ದೇಶಕ ಪವನ್ ಒಡೆಯರ್ ಬಂದಿದ್ದರು. ಇವರ ಜತೆಗೆ ಉಳಿದವರು ಕಂಡಂತೆ ಚಿತ್ರ ನಿರ್ಮಿಸಿರುವ ಸುವಿನ್ ಸಿನಿಮಾಸ್ ನ ನಿರ್ದೇಶಕ ಸುನಿ, ಹೇಮಂತ್, ಅಭಿ ಇದ್ದರು.

ಇವರ ಜತೆಗೆ ಚಿತ್ರದ ತಾರಾಗಣದಲ್ಲಿರುವ ತಾರಾ ಅನುರಾಧ, ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ, ಯಜ್ಞ ಶೆಟ್ಟಿ, ಟಿವಿ 9ನ ಮಾಜಿ ನಿರೂಪಕಿ ಕಮ್ ವಾರ್ತಾ ವಾಚಕಿ ಶೀತಲ್ ಶೆಟ್ಟಿ, ದಿನೇಶ್ ಮಂಗಳೂರು, ಈ ಹಿಂದೆ ಟಿವಿ ಚಾನೆಲ್ ನಿರೂಪಕರಾಗಿದ್ದ, ಆಗಾಗ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಗೌರೀಶ್ ಅಕ್ಕಿ ಮುಂತಾದವರು ಹಾಜರಿದ್ದರು. ಉಳಿದಂತೆ ಅಚ್ಯುತ್ ಕುಮಾರ್, ಕಿಶೋರ್ ಕುಮಾರ್, ಬಿ. ಸುರೇಶ್ ಅವರು ಸಾಮಾಜಿಕ ಜಾಲ ತಾಣಗಳಲ್ಲಿ ಶುಭ ಹಾರೈಸಿದರು.

ಪುನೀತ್ ಅವರು ಮಾತನಾಡಿ, ಇದು ಪವರ್ ಫುಲ್ ಟ್ರೇಲರ್ ರಾಮ್ ಗೋಪಾಲ್ ವರ್ಮಾ ಚಿತ್ರದ ಲೆವೆಲ್ ಗೆ ಟ್ರೇಲರ್ ಕಾಣಿಸುತ್ತಿದೆ. ಸಿಂಪಲ್ ..ಸ್ಟೋರಿ ಮೂವಿ ತಂಡ ಈ ರೀತಿ ವಿಶಿಷ್ಟ ಚಿತ್ರ ನಿರ್ಮಿಸಿರುವುದು ನೋಡಿ ಖುಷಿಯಾಗುತ್ತಿದೆ ಎಂದರು.
<center><iframe width="100%" height="360" src="//www.youtube.com/embed/POJ_6EtGeMw" frameborder="0" allowfullscreen></iframe></center>

ಲೂಸ್ ಮಾದ ಯೋಗಿ: ದಯವಿಟ್ಟು ಚಿತ್ರ ಯಾವಾಗ ಹೇಳಿ ನಂದೂ ಒಂದೆರಡು ಚಿತ್ರಗಳಿವೆ.. ನಾನು ರಿಲೀಸ್ ಡೇಟ್ಸ್ ಮುಂದಕ್ಕೆ ಹಾಕ್ತೀನಿ ಅಂದ್ರು.

ತಾರಾ ಅವರು ಚಿತ್ರ ತಂಡವನ್ನು ಎಲ್ಲರಿಗೂ ಪರಿಚಯಿಸಿದರು. ಸಂಗೀತ ಹಾಗೂ ಹಿನ್ನೆಲೆ ಸಂಗೀಯ ನೀಡಿರುವ ಅಜನೀಶ್ ಲೋಕನಾಥ್ ಹಾಗೂ ಛಾಯಾಗ್ರಹಣ ಮಾಡಿರುವ ಕರ್ಮ್ ಚಾವ್ಲಾ ಅವರ ಶ್ರಮಕ್ಕೆ ಎಲ್ಲರೂ ಬಹುಪರಾಕ್ ಎಂದರು. ಚಿತ್ರ ಸಂಕ್ರಾಂತಿ ಸಮಯಕ್ಕೆ ರಿಲೀಸ್ ಆಗಿ ಹೊಸ ಕ್ರಾಂತಿ ಮಾಡುವ ಸಾಧ್ಯತೆಯಿದೆ. ನಟನೆ, ಚಿತ್ರಕಥೆ ಸಂಭಾಷಣೆ ನಿರ್ದೇಶನದ ಜತೆಗೆ ಹಾಡುಗಳನ್ನು ರಕ್ಷಿತ್ ಶೆಟ್ಟಿ ಬರೆದಿರುವುದು ಇನ್ನೊಂದು ವಿಶೇಷ.

English summary
The trailer of Sandalwood's forthcoming movie Ulidavaru Kandanthe (UK) was released on Saturday, (Dec 7) at Triveni theatre, Bangalore. Rakshit Shetty Directoral debut movie trailer has got more than 50K hits in YouTube. It has also broke the previous record of Simple Aag Ond Love Story, which was made by the same team.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada