»   » ಕೊನೆಯ ದಿನಗಳನ್ನು ಎಣಿಸುತ್ತಿರುವ ಉಮಾ ಚಿತ್ರಮಂದಿರ

ಕೊನೆಯ ದಿನಗಳನ್ನು ಎಣಿಸುತ್ತಿರುವ ಉಮಾ ಚಿತ್ರಮಂದಿರ

Posted By:
Subscribe to Filmibeat Kannada

ಕನ್ನಡ ಚಿತ್ರಗಳಿಗೆ ಮಾತ್ರ ಮೀಸಲಾಗಿದ್ದ ನಗರದ ಪ್ರಸಿದ್ದ ಚಾಮರಾಜ ಪೇಟೆಯಲ್ಲಿನ ಉಮಾ ಚಿತ್ರ ಮಂದಿರ ತೆರೆಮೆರೆಗೆ ಸರಿಯಲಿದೆ. ಚಾಮರಾಜ ಪೇಟೆಗೆ ಕಳಸಪ್ರಾಯವಾಗಿದ್ದ ನಗರದ ಹಳೆಯ ಉಮಾ ಚಿತ್ರಮಂದಿರವನ್ನು ನೆಲಸಮ ಮಾಡಲು ಚಿತ್ರಮಂದಿರ ಮಾಲೀಕರು ನಿರ್ಧರಿಸಿದ್ದಾರೆ.

ಚಿತ್ರಲೋಕ ಡಾಟ್ ಕಾಂ ವರದಿ ಮಾಡಿದ ಪ್ರಕಾರ ಆ ಜಾಗದಲ್ಲಿ ಮಾಲ್ ಮತ್ತು ಮಿನಿ ಮಲ್ಟಿಪ್ಲೆಕ್ಸ್ ತಲೆ ಎತ್ತಲಿದೆ. ಈಗಾಗಲೇ ಇದಕ್ಕೆ ಸಂಬಂಧಪಟ್ಟ ಕಾಗದಪತ್ರಗಳ ಕೆಲಸಗಳು ಕೋರ್ಟಿನಲ್ಲಿದ್ದು ಇನ್ನು ಮೂರು ತಿಂಗಳೊಳಗೆ ನಗರದ ಚಿತ್ರಮಂದಿರಗಳ ಪಟ್ಟಿಯಿಂದ "ಉಮಾ" ಚಿತ್ರಮಂದಿರದ ಹೆಸರು ಕಣ್ಮರೆಯಾಗಲಿದೆ.

ಸಿಂಗಲ್ ಸ್ಕ್ರೀನ್ ಪರದೆಯ ಚಿತ್ರಮಂದಿರಗಳು ಇತ್ತೀಚಿನ ದಿನಗಳಲ್ಲಿ ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರು ನಗರದ ಬಹಳಷ್ಟು ಚಿತ್ರಮಂದಿರಗಳು ತೆರೆಮೆರೆಗೆ ಸರಿಯುತ್ತಿದೆ. ಆ ಪಟ್ಟಿಗೆ ಇನ್ನೊಂದು ಸೇರ್ಪಡೆ ಉಮಾ ಚಿತ್ರಮಂದಿರ.

ಚಿತ್ರಮಂದಿರದ ಮಾಲೀಕರು ಮತ್ತು ಲೀಸ್ ದಾರರ ನಡುವಣ ದಾವೆ ನ್ಯಾಯಾಲಯದಲ್ಲಿದ್ದು, ಕೋರ್ಟ್ ಆದೇಶಕ್ಕೆ ಅನುಗುಣವಾಗಿ ಚಿತ್ರಮಂದಿರದ ಕೊನೆಯ ಪ್ರದರ್ಶನದ ದಿನ ನಿಗದಿಯಾಗಲಿದೆ. ಮಾಲೀಕರ ಪ್ರಕಾರ ಲೀಸ್ ಅವಧಿ ಮುಗಿದಿದ್ದರೆ, ಲೀಸ್ ದಾರರ ಪ್ರಕಾರ 2015ರ ವರೆಗೆ ಲೀಸ್ ಅವಧಿ ಇದೆ. ಹಾಗಾಗಿ ಇನ್ನು ಮೂರು ತಿಂಗಳು ಅಥವಾ ಇನ್ನೆರಡು ವರ್ಷಗಳಲ್ಲಿ ಉಮಾ ಚಿತ್ರಮಂದಿರ ನೆಲಸಮವಾಗಲಿದೆ.

ಡಾ. ರಾಜ್ ಚಿತ್ರಗಳನ್ನು ಕಡ್ಡಾಯವಾಗಿ ಪ್ರದರ್ಶಿಸುತ್ತಿದ್ದ ಉಮಾ ಚಿತ್ರಮಂದಿರ ಕನ್ನಡ ಚಿತ್ರ ಹೊರತು ಪಡಿಸಿ ಬೇರೆ ಭಾಷೆಯ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದ ಉದಾಹರಣೆ ಅಪರೂಪ. ನಾನೊಬ್ಬ ಕಳ್ಳ, ಹಾಲುಜೇನು, ಚಲಿಸುವ ಮೋಡಗಳು, ಕಿಟ್ಟುಪುಟ್ಟು, ನಾನಿನ್ನ ಬಿಡಲಾರೆ, ಆಪ್ತಮಿತ್ರ ಮುಂತಾದ ಚಿತ್ರಗಳು ನೂರು ದಿನ ಪ್ರದರ್ಶನ ಕಂಡಿದ್ದವು.

ಸದ್ಯ ನಾಗಶೇಖರ್ ನಿರ್ದೇಶನದ ಮೈನಾ ಚಿತ್ರ ಉಮಾ ಚಿತ್ರ ಮಂದಿರದಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ. ತೆರೆಮೆರೆಗೆ ಸರಿದ ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳು ಸ್ಲೈಡಿನಲ್ಲಿ

(Image courtesy: chitraloka)

ಪಲ್ಲವಿ, ಕಾರ್ಪೋರೇಶನ್ ವೃತ್ತ

ಕನ್ನಡೇತರ ಚಿತ್ರಗಳಿಗೆ ಮೀಸಲಾಗಿದ್ದ ಪಲ್ಲವಿ ಚಿತ್ರಮಂದಿರ ತನ್ನ ಕೊನೆಯ ದಿನದ ಆಟದಲ್ಲಿ ಕನ್ನಡ ಚಿತ್ರ ಪ್ರದರ್ಶಿಸುವ ಮೂಲಕ ಕನ್ನಡ ಚಿತ್ರಗಳಿಗೆ ತನ್ನ ಕೊನೆಯ ಗೌರವ ನೀಡಿತ್ತು. ಡಿಸೆಂಬರ್ 2012 ಕೊನೆಯ ವಾರದಲ್ಲಿ ಚಿತ್ರಮಂದಿರ ಬಂದ್ ಆಗಿತ್ತು.

ಶಾಂತಿ, ಸೌತ್ ಎಂಡ್ ವೃತ್ತದ ಬಳಿ

ಮತ್ತೊಂದು ಕನ್ನಡ ಚಿತ್ರಗಳಿಗೆ ಮೀಸಲಾಗಿದ್ದ ಚಿತ್ರಮಂದಿರ. ಥಿಯೇಟರ್ ನೆಲಸಮವಾಗಿ ಅಲ್ಲಿ ಈಗ ಖಾಸಾಗಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ.
(ಚಿತ್ರ: ಉಮಾ ಚಿತ್ರಮಂದಿರ)

ಸಂಜಯ್, ಮಕ್ಕಳಕೂಟದ ಬಳಿ

ಸಂಜಯ್ ಚಿತ್ರಮಂದಿರ ನೆಲಸಮಗೊಂಡು ಅಲ್ಲಿ ಕೆಂಪೇಗೌಡ ಕಲಾಕ್ಷೇತ್ರ ತಲೆ ಎತ್ತಿದೆ.
(ಚಿತ್ರ: ಸಂಜಯ್ ಚಿತ್ರಮಂದಿರ)

ಗೀತಾಂಜಲಿ, ಮಲ್ಲೇಶ್ವರಂ

ಚಿತ್ರಮಂದಿರದ ನೆಲಸಮಗೊಂಡು ಮೆಗಾ ಮಾರ್ಟ್, ಬಿಗ್ ಬಜಾರ್ ಕಾರ್ಯ ನಿರ್ವಹಿಸುತ್ತಿದೆ.
(ಚಿತ್ರ: ಮಲ್ಲೇಶ್ವರಂ ವೃತ್ತ)

ಸೆಂಟ್ರಲ್, ಶೇಷಾದ್ರಿಪುರಂ

ಚಿತ್ರಮಂದಿರದ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ತಲೆ ಎತ್ತಿದೆ.
(ಚಿತ್ರ: ಶೇಷಾದ್ರಿಪುರಂ ಮ್ಯಾಪ್)

ಪ್ರಭಾತ್ ಮತ್ತು ಶಿವಾಜಿ, ಜೆ ಸಿ ರಸ್ತೆ

ಈ ಎರಡೂ ಚಿತ್ರಮಂದಿರಗಳು ನೆಲಸಮಗೊಂಡು, ಕರ್ಮರ್ಶಿಯಲ್ ಕಾಂಪ್ಲೆಕ್ಸ್ ಆಗಿದೆ.(ಚಿತ್ರ: ರವೀಂದ್ರ ಕಲಾಕ್ಷೇತ್ರ, ಜೆ ಸಿ ರಸ್ತೆ)

ಕಲ್ಪನ, ಮೆಜೆಸ್ಟಿಕ್, ಅಲಂಕಾರ್, ಕೆಂಪೇಗೌಡ, ಮೆಜೆಸ್ಟಿಕ್

ಕೆ ಜಿ ರಸ್ತೆಯಲ್ಲಿರುವ ಈ ನಾಲ್ಕೂ ಚಿತ್ರಮಂದಿರಗಳು ನೆಲಸಮಗೊಂಡು ವಾಣಿಜ್ಯ ಸಂಕೀರ್ಣ ತಲೆ ಎತ್ತಿದೆ/ ಎತ್ತುತ್ತಿದೆ.
(ಚಿತ್ರ: ಕೆಂಪೇಗೌಡ ಬಸ್ ನಿಲ್ದಾಣ)

ಗೀತಾ ಮತ್ತು ಹಿಮಾಲಯ, ಮೆಜೆಸ್ಟಿಕ್

ಕೆ ಜಿ ರಸ್ತೆಯಲ್ಲಿರುವ ಈ ಎರಡೂ ಚಿತ್ರಮಂದಿರದ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ಕಾರ್ಯ ನಿರ್ವಹಿಸುತ್ತಿದೆ.
(ಚಿತ್ರ: ಕೆಂಪೇಗೌಡ ಬಸ್ ನಿಲ್ದಾಣ)

English summary
Bangalore's one of the old cinema hall Uma theater in Chamrajpet going to be demolished. Mall and mini multiplex going to be constructed in that place.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada