For Quick Alerts
  ALLOW NOTIFICATIONS  
  For Daily Alerts

  ಸಂದೇಶ್ ಆಡಿಯೋ ಕುರಿತು ನಿರ್ಮಾಪಕ ಉಮಾಪತಿ ಹೇಳಿದ್ದೇನು?

  |

  ದರ್ಶನ್ ಆಪ್ತ, ಹೋಟೆಲ್ ಸಂದೇಶ್ ಪ್ರಿನ್ಸ್ ಮಾಲೀಕ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಹಲವು ವಿಚಾರಗಳು ಪ್ರಸ್ತಾಪವಾಗಿದೆ. ಇದರಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹೆಸರು ಸಹ ಚರ್ಚೆಯಾಗಿದೆ. ನಟ ದರ್ಶನ್ ಹಾಗೂ ಸ್ನೇಹಿತರು ಸೇರಿ ಉಮಾಪತಿ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎನ್ನುವ ವಿಷಯವನ್ನು ಆಡಿಯೋದಲ್ಲಿ ಚರ್ಚಿಸಲಾಗಿದೆ.

  ಅರುಣಾ ಕುಮಾರಿ ಘಟನೆ, ಉಮಾಪತಿ ಮತ್ತು ಅರುಣಾ ಕುಮಾರಿ ವಾಟ್ಸಪ್ ಚಾಟ್ ಹಾಗೂ ಅದಾದ ಮೇಲೆ ನಡೆದ ಬೆಳವಣಿಗೆಗಳನ್ನು ಗಮನಿಸಿದರೆ ಆಡಿಯೋದಲ್ಲಿ ಚರ್ಚಿಸಲಾದ ವಿಚಾರ ಅನುಮಾನ ಉಂಟು ಮಾಡಿದೆ. ಇದೀಗ, ಈ ಆಡಿಯೋ ಕ್ಲಿಪ್‌ ಬಗ್ಗೆ ನಿರ್ಮಾಪಕ ಉಮಾಪತಿ ಸ್ಪಷ್ಟನೆ ಕೊಟ್ಟಿದ್ದಾರೆ. ಮುಂದೆ ಓದಿ....

  'ದರ್ಶನ್-ಇಂದ್ರಜಿತ್ ಇಲ್ಲಿಗೆ ಬಿಟ್ಟುಬಿಡಿ': ವಿಚಾರಣೆ ಬಳಿಕ ಸಂದೇಶ್ ಪ್ರತಿಕ್ರಿಯೆ 'ದರ್ಶನ್-ಇಂದ್ರಜಿತ್ ಇಲ್ಲಿಗೆ ಬಿಟ್ಟುಬಿಡಿ': ವಿಚಾರಣೆ ಬಳಿಕ ಸಂದೇಶ್ ಪ್ರತಿಕ್ರಿಯೆ

  ಇಂದ್ರಜಿತ್ ಹಿಂದೆ ನಾನಿಲ್ಲ

  ಇಂದ್ರಜಿತ್ ಹಿಂದೆ ನಾನಿಲ್ಲ

  ದರ್ಶನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ನಿರ್ದೇಶಕ-ಪತ್ರಕರ್ತ ಇಂದ್ರಜಿತ್ ಹಿಂದೆ ಯಾರೋ ಇದ್ದಾರೆ. ದುರುದ್ದೇಶದಿಂದ ಇಂತಹ ಕೇಸ್ ಹಾಕಿಸುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಉಮಾಪತಿ ಪ್ರತಿಕ್ರಿಯೆ ನೀಡಿದ್ದು, ''ಇಂದ್ರಜಿತ್ ಅವರನ್ನು ನಾನು ಭೇಟಿ ಮಾಡಿಲ್ಲ. ಅವರ ಹಿಂದೆಯೂ ನಾನಿಲ್ಲ. ನನ್ನ ವಿಚಾರದಲ್ಲಿ ನಾನೊಬ್ಬನೇ ಹೋರಾಟ ಮಾಡ್ತಿದ್ದೇನೆ'' ಎಂದಿದ್ದಾರೆ.

  ಬ್ಲಾಕ್‌ಮೇಲ್ ಮಾಡುವ ಕೆಲಸ ಏನು ಮಾಡಿಲ್ಲ

  ಬ್ಲಾಕ್‌ಮೇಲ್ ಮಾಡುವ ಕೆಲಸ ಏನು ಮಾಡಿಲ್ಲ

  ಆಡಿಯೋದಲ್ಲಿ ಉಮಾಪತಿ ಅವರನ್ನು ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂಬ ವಿಷಯ ಪ್ರಸ್ತಾಪವಾಗಿರುವ ಬಗ್ಗೆ ಮಾತನಾಡಿದ ಉಮಾಪತಿ, ''ಬ್ಲಾಕ್‌ ಮೇಲ್ ಮಾಡಿಸಿಕೊಳ್ಳುವಂತಹ ಕೆಲಸ ನಾನು ಏನು ಮಾಡಿಲ್ಲ. ನನ್ನ ಮೇಲೆ ಆರೋಪ ಮಾಡಿರುವವರೆಲ್ಲಾ ಸಾಚಾಗಳಾ? ನನ್ನ ದರ್ಶನ್ ಸರ್ ವಿಚಾರ ನಾವು ನೋಡಿಕೊಳ್ಳುತ್ತೇವೆ'' ಎಂದು ಉತ್ತರಿಸಿದ್ದಾರೆ.

  ದರ್ಶನ್‌ಗಿಲ್ಲ ಮುಕ್ತಿ: ಮತ್ತೆ ಬಾಂಬ್ ಎಸೆದ ಇಂದ್ರಜಿತ್, ಗಲಾಟೆ ಬಗ್ಗೆ ಸಂದೇಶ್ ಹೇಳಿದ 'ಸತ್ಯ'ದರ್ಶನ್‌ಗಿಲ್ಲ ಮುಕ್ತಿ: ಮತ್ತೆ ಬಾಂಬ್ ಎಸೆದ ಇಂದ್ರಜಿತ್, ಗಲಾಟೆ ಬಗ್ಗೆ ಸಂದೇಶ್ ಹೇಳಿದ 'ಸತ್ಯ'

  ದರ್ಶನ್ ಜೊತೆ ಭಿನ್ನಾಭಿಪ್ರಾಯ ಇಲ್ಲ

  ದರ್ಶನ್ ಜೊತೆ ಭಿನ್ನಾಭಿಪ್ರಾಯ ಇಲ್ಲ

  ''ನನ್ನ ಮತ್ತು ದರ್ಶನ್ ಸರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅವರು ಮೈಸೂರಿಗೆ ಹೋಗುವ ಮುಂಚೆ ನನ್ನ ಬಳಿ ಮಾತನಾಡಿದರು. ಪ್ರೆಸ್‌ಮೀಟ್ ಮಾಡುವ ಮೊದಲು ಸಹ ನನ್ನ ಜೊತೆ ಮಾತನಾಡಿದರು. ನಾವಿಬ್ಬರು ಚೆನ್ನಾಗಿದ್ದೇವೆ. ನಾವು ದೂರ ಆಗುವ ಮಾತಿಲ್ಲ. ಮತ್ತೊಬ್ಬರ ವಿಚಾರಕ್ಕೆ ನಾನು ತಲೆಕೆಡಿಸಿಕೊಳ್ಳಲ್ಲ'' ಎಂದು ಉಮಾಪತಿ ತಿಳಿಸಿದರು.

  Darshan ವಿಚಾರದಲ್ಲಿ ಸುಳ್ಳು ಹೇಳಿದ್ರ ಹೋಟೆಲ್ ಮಾಲೀಕ ಸಂದೇಶ್ | Darshan Hotel Controversy |Filmibeat Kannada
  ಅರುಣಾ ಕುಮಾರಿ ಕೇಸ್ ಮುಂದುವರಿಯುತ್ತದೆ

  ಅರುಣಾ ಕುಮಾರಿ ಕೇಸ್ ಮುಂದುವರಿಯುತ್ತದೆ

  ''ವಿಷಯ ಅರುಣಾಕುಮಾರಿ ಸುತ್ತಾ ಇದೆ. ಇದರಲ್ಲಿ ನನ್ನ ಹೆಸರು ಬಂದಿದೆ. ಅದಕ್ಕೆ ಮಾತ್ರ ನನ್ನ ಹೋರಾಟ. ಬೇರೆ ಯಾವುದೇ ವಿಷಯಗಳಿಗೆ ನಾನು ಜವಾಬ್ದಾರನಲ್ಲ. ಈ ಸಂಬಂಧ ವಕೀಲರನ್ನು ಭೇಟಿ ಮಾಡಿದ್ದೇನೆ. ಅವರು ಮುಂದುವರಿಸುತ್ತಾರೆ'' ಎಂದು ಉಮಾಪತಿ ತಿಳಿಸಿದ್ದಾರೆ.

  English summary
  Producer Umapathy Srinivas react about sandesh swamy audio.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X