»   » ಖತರ್ನಾಕ್ ಉಮೇಶ್ ರೆಡ್ಡಿಯ Alive Story

ಖತರ್ನಾಕ್ ಉಮೇಶ್ ರೆಡ್ಡಿಯ Alive Story

Posted By:
Subscribe to Filmibeat Kannada

ಇತ್ತೀಚೆಗೆ 'ಉಮೇಶ್' ಎಂಬ ಚಿತ್ರ ಬಿಡುಗಡೆಯಾಗಿದ್ದು ಗೊತ್ತೇ ಇದೆ. ಆ ಚಿತ್ರಕ್ಕೆ ಯಾವ ವಿಮರ್ಶಕರು 2 ಸ್ಟಾರ್ ಮೇಲೆ ರೇಟಿಂಗ್ ಕೊಡಲಿಲ್ಲ. ಈಗ ಮತ್ತೊಂದು ಚಿತ್ರ 'ಉಮೇಶ್ ರೆಡ್ಡಿ' ಹೆಸರಿನಲ್ಲಿ ಬರುತ್ತಿದೆ.

ಉಮೇಶ್ ಚಿತ್ರಕ್ಕೆ ವ್ಯಕ್ತವಾದ ನೀರಸ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಉಮೇಶ್ ರೆಡ್ಡಿ ಚಿತ್ರದ ಟೈಟಲನ್ನು ಬದಲಾಯಿಸಲಾಗಿದೆ. ಈಗ ಚಿತ್ರಕ್ಕೆ 'ಖತರ್ನಾಕ್' ಎಂದು ಹೆಸರಿಡಲಾಗಿದೆ. ಆದರೆ ಚಿತ್ರದ ಅಡಿಬರಹವನ್ನು ಉಮೇಶ್ ರೆಡ್ಡಿ Alive Story ಎಂದು ಇಡಲಾಗಿದೆ.

Umesh Reddy

ಇನ್ನು 'ಖತರ್ನಾಕ್' ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನವನ್ನು ಮಳವಳ್ಳಿ ಸಾಯಿಕೃಷ್ಣ ಮಾಡಿದ್ದಾರೆ. ಈ ಚಿತ್ರವನ್ನು ಆದಿತ್ಯ ರಮೇಶ್ ನಿರ್ಮಿಸಿದ್ದಾರೆ. ಸಾಧು ಕೋಕಿಲ ಅವರ ಸಂಗೀತ ಚಿತ್ರಕ್ಕಿದೆ.

ಚಿತ್ರದಲ್ಲಿ ಉಮೇಶ್ ರೆಡ್ಡಿಯಾಗಿ ನಟ ರವಿ ಕಾಳೆ ಕಾಣಿಸಲಿದ್ದಾರೆ. ಈಗಾಗಲೆ ಅವರು ವಿಲನ್, ಪೊಲೀಸ್ ಪಾತ್ರಗಳಿಂದ ಕನ್ನಡ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದಾರೆ. ಈಗವರು ವಿಕೃತಕಾಮಿಯಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇದೊಂದು ಚಾಲೆಂಜಿಂಗ್ ರೋಲ್ ಎನ್ನುತ್ತಾರೆ ರವಿ ಕಾಳೆ.

ಅಂದಹಾಗೆ ಉಮೇಶ್ ರೆಡ್ಡಿ ಹುಟ್ಟಿ ಬೆಳೆದದ್ದೆಲ್ಲಾ ಚಿತ್ರದುರ್ಗದಲ್ಲಿ. ಹಾಗಾಗಿ ನಿರ್ದೇಶಕರು ಅಲ್ಲೇ ಮುಹೂರ್ತ ನೆರವೇರಿಸಿದ್ದರು. ಹಾಗೆಯೇ ಆತ ಎಲ್ಲೆಲ್ಲಿ ಅಪರಾಧಗಳನ್ನು ಎಸೆದಿದ್ದಾನೋ ಅಲ್ಲಲ್ಲೇ ಚಿತ್ರೀಕರಿಸುವುದಾಗಿಯೂ ತಿಳಿಸಿದ್ದಾರೆ.

ಉಮೇಶ್ ರೆಡ್ಡಿಯ ಅಪರಾಧಗಳ ಜಾಡನ್ನು ಹುಡುಕುತ್ತಾ ಹೊರಟರೆ ಕಾಶ್ಮೀರ, ಪುಣೆಯಲ್ಲೂ ಚಿತ್ರೀಕರಣ ಮಾಡಬೇಕಾಗುತ್ತದೆ. ತಾವು ಅದಕ್ಕೂ ಸಿದ್ಧ ಎನ್ನುತ್ತಾರೆ ಚಿತ್ರದ ನಿರ್ಮಾಪಕ ರಮೇಶ್. ಚಿತ್ರದ ಪ್ರಮುಖ ಪಾತ್ರದಲ್ಲಿ ರೂಪಿಕಾ ಅಭಿನಯಿಸುತ್ತಿದ್ದಾರೆ. (ಏಜೆನ್ಸೀಸ್)

English summary
Malavalli Saikrishna has renamed their film 'Umeh Reddy' as 'Khatarnak'. But the sub title remains 'Umesh Reddy Alive Story'. It is his third film which is based on real-life incidents, after Cyanide and Dandupalya.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada