twitter
    For Quick Alerts
    ALLOW NOTIFICATIONS  
    For Daily Alerts

    ಕಾಂಗ್ರೆಸ್ ಸರ್ಕಾರದಿಂದ 'ಜನತಾ ಥಿಯೇಟರ್' ಸ್ಥಾಪನೆ

    By Mahesh
    |

    ಕನ್ನಡ ಚಿತ್ರರಂಗ ಹಾಗೂ ಕನ್ನಡ ಸಿನಿರಸಿಕರ ನಡುವೆ ಡಬ್ಬಿಂಗ್ ಬೇಕೇ? ಬೇಡವೇ? ಎಂಬ ಬಿಸಿಬಿಸಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಸಿದ್ದರಾಮಯ್ಯ ಅವರ ಸರ್ಕಾರ ತಣ್ಣಗೆ ಸಕತ್ ಹಾಟ್ ಸುದ್ದಿ ನೀಡಿದ್ದಾರೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿನ ಟಿಕೆಟ್ ದರ ಇಳಿಕೆ, ಪ್ರತಿ ಜಿಲ್ಲೆಗೊಂದು ಜನತಾ ಥಿಯೇಟರ್ ಸ್ಥಾಪನೆ, ತಮಿಳುನಾಡು ಮಾದರಿ ಮನರಂಜನಾ ಕಾಯಿದೆ ಅನುಷ್ಠಾನದ ಬಗ್ಗೆ ಮೂಲ ಸೌಕರ್ಯ ಅಭಿವೃದ್ಧಿ, ವಾರ್ತಾ ಹಾಗೂ ಹಜ್ ಖಾತೆ ಸಚಿವ ರೋಷನ್ ಬೇಗ್ ಮಾತನಾಡಿದ್ದಾರೆ.

    ರಾಜ್ಯದಲ್ಲಿನ ಎಲ್ಲಾ ಜನಸಾಮಾನ್ಯರೂ ಚಲನ ಚಿತ್ರವನ್ನು ವೀಕ್ಷಿಸಲು ಅನುಕೂಲವಾಗುವಂತೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿನ ಟಿಕೆಟ್ ದರವನ್ನು ಕಡಿಮೆ ಮಾಡುವ ಸಂಬಂಧ ಸರಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಂಬಾ ಉತ್ಸುಕರಾಗಿದ್ದಾರೆ ಎಂದು ಮೂಲ ಸೌಕರ್ಯ ಅಭಿವೃದ್ಧಿ, ವಾರ್ತಾ ಹಾಗೂ ಹಜ್ ಖಾತೆ ಸಚಿವ ರೋಷನ್ ಬೇಗ್ ಹೇಳಿದ್ದಾರೆ.

    ಬೆಳಗಾವಿ ನಗರದ ಕಪಿಲೇಶ್ವರ ರಸ್ತೆ ಹಾಗೂ ಹಳೆ ಪಿಬಿ ರಸ್ತೆಯಲ್ಲಿ ನಿರ್ಮಿಸಲಾಗುವ ರೈಲ್ವೆ ಮೇಲು ಸೇತುವೆಗಳ ಸ್ಥಳ ಪರಿಶೀಲನೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು,

    Uniform Ticket Rates at Multiplexes: Minister Roshan Baig

    'ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಪ್ರವೇಶ ದರವು ತುಂಬಾ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಮಲ್ಟಿಪ್ಲೆಕ್ಸ್, ಮಾಲ್‌ಗಳಲ್ಲಿ ಒಂದು ಫಿಲ್ಮ್ ನೋಡಲು ಏನಿಲ್ಲವೆಂದರೂ 700-800 ರೂ. ಟಿಕೆಟ್ ಬೆಲೆ ನೀಡಬೇಕಾಗುತ್ತದೆ. ಟಿಕೆಟ್ ದರ ಎಲ್ಲೂ ನಿರ್ದಿಷ್ಟವಾಗಿಲ್ಲ. ಮೇಲಾಗಿ ಇಂಥ ಮಲ್ಟಿಪ್ಲೆಕ್ಸ್‌ಗಳಲ್ಲಿ ಪರಭಾಷಾ ಚಿತ್ರಗಳ ಪ್ರದರ್ಶನವೇ ಹೆಚ್ಚು. ಜನ ಸಾಮಾನ್ಯರು ಈ ಚಿತ್ರಮಂದಿರಗಳಲ್ಲಿ ಚಿತ್ರಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯೋದ್ಯಮ ಮಂಡಳಿ ಜೊತೆಗೆ ಚರ್ಚೆ ನಡೆಸುವುದಾಗಿ' ಹೇಳಿದರು

    ಜನತಾ ಥಿಯೇಟರ್ : ರಾಜ್ಯದಲ್ಲಿ ಚಲನಚಿತ್ರ ನೀತಿ ಪರಿಷ್ಕರಿಸುವ ಬಗ್ಗೆಯೂ ತಾನು ಚಿಂತನೆ ನಡೆಸಿದ್ದೇನೆ. ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಲ್ಲಿನ ಚಲನಚಿತ್ರ ನೀತಿಯನ್ನು ಅಧ್ಯಯನ ಮಾಡಿ ಈ ಕುರಿತು ಕ್ರಮಕೈಗೊಳ್ಳಲಾಗುವುದು ಎಂದರು.ಸ್ಥಳೀಯ ಭಾಷಾ ಚಲನಚಿತ್ರ ವೀಕ್ಷಣೆ ಅನುಕೂಲಕ್ಕಾಗಿ ಪ್ರತಿ ಜಿಲ್ಲೆಗೊಂದು 200-300 ಆಸನ ಸಾಮರ್ಥ್ಯದ 'ಜನತಾ ಥಿಯೇಟರ್' ಸ್ಥಾಪಿಸುವ ಉದ್ದೇಶ ಸರಕಾರದ ಮುಂದಿದೆ ಎಂದರು

    ಬಿಜೆಪಿ ಎಂಎಲ್ಸಿ, ನಟ, ಜಗ್ಗೇಶ್ ಅವರು ಸಾಫ್ಟ್ ವೇರ್ ಗಂಡ ಚಿತ್ರದ ಚಿತ್ರೀಕರಣದ ನಡುವೆ ಪ್ರತಿಕ್ರಿಯಿಸಿ, ಮಧ್ಯಮ ವರ್ಗದ ಜನತೆಗೆ ಇದು ಸಿಹಿ ಸುದ್ದಿಯಾಗಲಿದೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಸಿನಿಮಾಗಳು ಹೆಚ್ಚಾಗಲಿವೆ. ಪರಭಾಷೆ ಚಿತ್ರಗಳ ದರ 800 ರಿಂದ 1000 ರು ತನಕ ಇರುವುದು ತುಂಬಾ ಹೊರೆ ಎಂದಿದ್ದಾರೆ.

    'ಟಿಕೆಟ್ ದರ ಹೆಚ್ಚಳ ಜನರನ್ನು ಚಿತ್ರಮಂದಿರದಿಂದ ದೂರವುಳಿಯುವಂತೆ ಮಾಡುವ ಭಯವಿದೆ. ಚಿತ್ರಮಂದಿರಗಳ ಕ್ಯಾಂಟೀನ್ ದರವೂ ಹೆಚ್ಚಾಗಿದೆ. ಮಾಲ್, ಮಲ್ಟಿಪ್ಲೆಕ್ಸ್ ಗಳಲ್ಲಿ ಬೇರೆ ಭಾಷೆ ಚಿತ್ರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಕನ್ನಡ ಭಾಷೆ ಚಿತ್ರಗಳಿಂದ ಏನು ಗಿಟ್ಟುತ್ತಿಲ್ಲ ಎನ್ನಲು ಟಿಕೆಟ್ ದರ ಏರುಪೇರು ಕೂಡಾ ಕಾರಣ' ಎಂದು ನಿರ್ಮಾಪಕ, ವಿತರಕ ರಾಮು ಹೇಳಿದ್ದಾರೆ.

    'ಇಲ್ಲಿ ಸಮಸ್ಯೆ ಇರುವುದು ನಿರ್ಮಾಪಕರು ಹಾಗೂ ಮಲ್ಟಿಪ್ಲೆಕ್ಸ್ ಮಾಲೀಕರ ನಡುವೆ ಇಬ್ಬರು ಕುಳಿತು ಒಮ್ಮತಕ್ಕೆ ಬಂದರೆ ಒಳ್ಳೆಯದು' ಎಂದು ಈ ಟಿವಿ ರಿಯಾಲಿಟಿ ಶೋ ಡ್ಯಾನ್ಸಿಂಗ್ ಸ್ಟಾರ್ ಜಡ್ಜ್ ಆಗಿರುವ ನಿರ್ದೇಶಕ ಗುರುಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.

    ಸದ್ಯ ಮಾಮೂಲಿ ಚಿತ್ರಮಂದಿರಗಳಲ್ಲಿ 60 ರಿಂದ 150ರ ತನಕ ಟಿಕೆಟ್ ದರವಿದೆ. ದರ ನಿಗದಿ ಬಗ್ಗೆ ಕೆಎಫ್ ಸಿಸಿ ಸದಸ್ಯರ ಜತೆ ಸಚಿವ ಬೇಗ್ ಅವರು ಒಂದು ಸುತ್ತಿನ ಮಾತುಕತೆ ನಡೆಸುವ ಸಾಧ್ಯತೆಗಳಿವೆ. ಆದರೆ, ಸದ್ಯಕ್ಕೆ ಕೆಎಫ್ ಸಿಸಿ ಡಬ್ಬಿಂಗ್ ಕರಿನೆರಳಿನಲ್ಲಿ ಸಿಲುಕಿದ್ದು, ಬೇರೆ ವಿಚಾರದ ಬಗ್ಗೆ ತಕ್ಷಣಕ್ಕೆ ನಿರ್ಧಾರ ಕೈಗೊಳ್ಳುವ ಲಕ್ಷಣಗಳು ಕಂಡು ಬಂದಿಲ್ಲ.

    English summary
    Karnataka Information Minister Roshan Baig’s suggestion of bringing uniform ticket prices for multiplexes in the state and to reform Kannada film industry policies similar to Tamil Nadu's entertainment tax Act is welcomed by KFI.
    Monday, January 20, 2014, 17:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X