twitter
    For Quick Alerts
    ALLOW NOTIFICATIONS  
    For Daily Alerts

    'ಸೂರ್ಯವಂಶ' ಸಿನಿಮಾವನ್ನು ರವಿಚಂದ್ರನ್ ಮಾಡಬೇಕಿತ್ತಂತೆ!

    |

    Recommended Video

    ಸೂರ್ಯವಂಶದ ಬಗ್ಗೆ ಎಸ್.ನಾರಾಯಣ್ ಹೀಗಂದದ್ದು ಏಕೆ? | FILMIBEAT KANNADA

    ಕೆಲವು ಸಿನಿಮಾಗಳು ಹಿಟ್ ಆಗುತ್ತವೆ.. ಕೆಲವು ಸಿನಿಮಾಗಳು ಫ್ಲಾಫ್ ಆಗುತ್ತಿವೆ.. ಆದರೆ, ಅದಕ್ಕೂ ಮೀರಿ ಕೆಲವೇ ಕೆಲವು ಸಿನಿಮಾಗಳು ಮಾತ್ರ ನಮ್ಮ ಭಾವನೆಗಳ ಜೊತೆಗೆ ಬೆರತು ಹೋಗಿರುತ್ತವೆ. ಅಂತಹ ಸಿನಿಮಾ 'ಸೂರ್ಯವಂಶ'.

    ವಿಷ್ಣುವರ್ಧನ್ ನಟನೆಯ ಸೂಪರ್ ಹಿಟ್ ಸಿನಿಮಾ 'ಸೂರ್ಯವಂಶ' ಬಿಡುಗಡೆಯಾಗಿ ಇದೀಗ 20 ವರ್ಷಗಳು ಕಳೆದಿದೆ. ಈ ವಿಶೇಷವಾಗಿ ಸುದ್ದಿವಾಹಿನಿಯೊಂದು ಕಾರ್ಯಕ್ರಮ ಮಾಡಿದ್ದು, ಅದರಲ್ಲಿ 'ಸೂರ್ಯವಂಶ'ದ ಅನೇಕ ವಿಷಯಗಳ ತಿಳಿದಿದೆ.

    ಪ್ರತಿಮೆ ರೂಪ ಪಡೆದ 'ಸೂರ್ಯವಂಶ'ದ ಸತ್ಯಮೂರ್ತಿ ವಿಷ್ಣುಪ್ರತಿಮೆ ರೂಪ ಪಡೆದ 'ಸೂರ್ಯವಂಶ'ದ ಸತ್ಯಮೂರ್ತಿ ವಿಷ್ಣು

    ಒಂದು ಸಿನಿಮಾದ ಹಿಂದೆ ಒಂದಷ್ಟು ಕಥೆ ಇರುತ್ತದೆ. ಹೀಗಿರುವಾಗ, ಇಂತಹ ಅದ್ಬುತ ಸಿನಿಮಾದ ಹಿಂದೆ ನೂರಾರು ಕಥೆಗಳು ಇರುತ್ತದೆ. ಅವುಗಳಲ್ಲಿ ಕೆಲವು ಮುಖ್ಯ ಸಂಗತಿಗಳನ್ನು ನಿರ್ದೇಶಕ ಎಸ್ ನಾರಾಯಣ್ ಹಂಚಿಕೊಂಡಿದ್ದಾರೆ. ಮುಂದಿವೆ ಓದಿ...

    'ಸೂರ್ಯವಂಶ' ಚಿತ್ರವನ್ನು ರವಿಚಂದ್ರನ್ ಮಾಡಬೇಕಿತ್ತು

    'ಸೂರ್ಯವಂಶ' ಚಿತ್ರವನ್ನು ರವಿಚಂದ್ರನ್ ಮಾಡಬೇಕಿತ್ತು

    'ಸೂರ್ಯವಂಶ' ಸಿನಿಮಾವನ್ನು ಮೊದಲು ರವಿಚಂದ್ರನ್ ಮಾಡಬೇಕಿತ್ತು. ಇದು ತಮಿಳು ಸಿನಿಮಾದ ರಿಮೇಕ್ ಆಗಿದ್ದು, ರವಿಚಂದ್ರನ್ ತಮ್ಮ ಈಶ್ವರಿ ಪಿಚ್ಚರ್ಸ್ ನಲ್ಲಿ ನಿರ್ಮಾಣ ಮಾಡುವ ತಯಾರಿ ನಡೆಸಿದ್ದರು. ಎಸ್ ನಾರಾಯಣ್ ಅವರೇ ಚಿತ್ರದ ನಿರ್ದೇಶನ ಮಾಡಬೇಕಿತ್ತು. ಆದರೆ, ರಿಮೇಕ್ ರೈಟ್ಸ್ ತೆಗೆದುಕೊಳ್ಳುವುದು ತಡ ಆಗಿ, ಆ ಸಿನಿಮಾ ರವಿಚಂದ್ರನ್ ಕೈ ತಪ್ಪಿತ್ತು.

    ರಿಮೇಕ್ ಹಕ್ಕು ಪಡೆದ ಕುಮಾರಸ್ವಾಮಿ

    ರಿಮೇಕ್ ಹಕ್ಕು ಪಡೆದ ಕುಮಾರಸ್ವಾಮಿ

    ರವಿಚಂದ್ರನ್ ರಿಮೇಕ್ ಹಕ್ಕು ಪಡೆಯುವ ಮುನ್ನ ಇಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಆಗ ರಿಮೇಕ್ ರೈಟ್ಸ್ ತೆಗೆದುಕೊಂಡರು. ಇದು ಅವರ ನಿರ್ಮಾಣದ ಮೊದಲ ಸಿನಿಮಾ ಆಯಿತು. ರವಿಚಂದ್ರನ್ ಜೊತೆಗೆ ಆ ಸಿನಿಮಾವನ್ನು ನಿರ್ದೇಶನ ಮಾಡಲು ತಯಾರಿ ನಡೆಸಿದ್ದ ಎಸ್ ನಾರಾಯಣ್ ಅವರನೇ ಈ ಚಿತ್ರದ ಡೈರೆಕ್ಟರ್ ಆಗುವಂತೆ ಮಾಡಿದರು.

    ಹೊಸ ಹಾಡುಗಳನ್ನು ನೀಡಿದ ಮನೋಹರ್

    ಹೊಸ ಹಾಡುಗಳನ್ನು ನೀಡಿದ ಮನೋಹರ್

    'ಸೂರ್ಯವಂಶ' ತಮಿಳು ಸಿನಿಮಾ. ಅದನ್ನು ತೆಲುಗು, ಹಿಂದಿ ಹಾಗೂ ಕನ್ನಡದಲ್ಲಿ ರಿಮೇಕ್ ಮಾಡಲಾಯಿತು. ತಮಿಳು ಹಾಡುಗಳನ್ನೇ ಹಿಂದಿ ಮತ್ತು ತೆಲುಗುನಲ್ಲಿಯೂ ಬಳಸಿಕೊಳ್ಳಲಾಯಿತು. ಆದರೆ, ಕನ್ನಡದಲ್ಲಿ ಮಾತ್ರ ಹೊಸ ಹಾಡುಗಳನ್ನು ಮಾಡಲಾಯಿತು. 'ಜನುಮದ ಜೋಡಿ' ಬಳಿಕ ವಿ ಮನೋಹರ್ ಕೆರಿಯರ್ ನಲ್ಲಿ ಈ ಚಿತ್ರ ದೊಡ್ಡ ಹಿಟ್ ಆಯ್ತು.

    ತಾತ - ಮೊಮ್ಮಗನ ಹಾಡು ಕನ್ನಡದಲ್ಲಿ ಮಾತ್ರ ಇದೆ

    ತಾತ - ಮೊಮ್ಮಗನ ಹಾಡು ಕನ್ನಡದಲ್ಲಿ ಮಾತ್ರ ಇದೆ

    ಚಿತ್ರದಲ್ಲಿ ತಾತ - ಮೊಮ್ಮಗನ ಬಾಂದವ್ಯ ಬಹಳ ಚೆನ್ನಾಗಿದೆ ಇದೆ. ಆದರೆ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಅವರಿಬ್ಬರಿಗೆ ಯಾವುದೇ ಹಾಡು ಇರಲಿಲ್ಲ. ಹೀಗಿರುವಾಗ ಯೋಚನೆ ಮಾಡಿ ವಿ ಮನೋಹರ್ ಹಾಗೂ ಎಸ್ ನಾರಾಯಣ್ ಒಂದು ಹಾಡು ಮಾಡಿದರು. ತಾತ ಮೊಮ್ಮಗ ಇಬ್ಬರು ಫ್ರೆಂಡ್ಸ್ ಆಗಿ ಹಾಡುವ ಈ ಹಾಡು ಅದ್ಬುತವಾಗಿ ಮೂಡಿ ಬಂದಿದೆ.

    ಒಂದು ಪಾತ್ರದಲ್ಲಿ ನಟಿಸಿದ ಎಸ್ ನಾರಾಯಣ್

    ಒಂದು ಪಾತ್ರದಲ್ಲಿ ನಟಿಸಿದ ಎಸ್ ನಾರಾಯಣ್

    ಒಂದು ದೃಶ್ಯವನ್ನು ಚಿತ್ರೀಕರಣ ಮಾಡುವಾಗ ಒಬ್ಬ ಕಲಾವಿದ ಕೈ ಕೊಟ್ಟರು. ಸೆಟ್ ನಲ್ಲಿ ಇರುವ ಬೇರೆ ಯಾವ ಕಲಾವಿದರ ಬಳಿ ಆ ಪಾತ್ರ ಮಾಡಿಸುವುದು ಎಂದು ಎಸ್ ನಾರಾಯಣ್ ಯೋಚನೆ ಮಾಡಿದರು. ಬಳಿಕ ತಾವೇ ಆ ಸಣ್ಣ ಪಾತ್ರವನ್ನು ನಿರ್ವಹಿಸಿದರು. ನಿರ್ದೇಶಕರೇ ನಟಿಸುವುದನ್ನು ನೋಡಿ ವಿಷ್ಣು ಖುಷಿ ಪಟ್ಟರಂತೆ.

    ವಿಷ್ಣು ಮೀಸೆ ಅಂದರೆ ರಾಜ್ ಗೆ ಬಹಳ ಇಷ್ಟ

    ವಿಷ್ಣು ಮೀಸೆ ಅಂದರೆ ರಾಜ್ ಗೆ ಬಹಳ ಇಷ್ಟ

    'ಸೂರ್ಯವಂಶ' ಬಿಡುಗಡೆಯ ವೇಳೆಗೆ ಎಸ್ ನಾರಾಯಣ್ ರಾಜ್ ಕುಮಾರ್ ರಿಗೆ 'ಶಬ್ಧವೇದಿ' ಚಿತ್ರವನ್ನು ಮಾಡುತ್ತಿದ್ದರು. ಈ ವೇಳೆ ಪತ್ರಿಕೆಯಲ್ಲಿ ಬಂದ 'ಸೂರ್ಯವಂಶ' ಫೋಟೋ ನೋಡಿದ ರಾಜ್, ವಿಷ್ಣು ಮೀಸೆಯನ್ನು ಬಹಳ ಇಷ್ಟ ಪಟ್ಟರಂತೆ. ವಿಷ್ಣುಗೆ ಅಣ್ಣಾವ್ರು ಫೋನ್ ಮಾಡಿದರಂತೆ. ರಾಜ್ ಫೋನ್ ಮಾಡಿ ಹೊಗಳಿದ ಆ ಘಟನೆ ಎಂದಿಗೂ ಮರೆಯಲಾಗದು ಎಂದು ವಿಷ್ಣು ಹೇಳಿದರಂತೆ.

    English summary
    Unknown facts about actor Vishnuvardhan 'Suryavamsha' kannada movie. The movie is directed by S Narayan.
    Wednesday, June 26, 2019, 14:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X