For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ ಹುಟ್ಟುಹಬ್ಬಕ್ಕೆ ಈ ವಿಶೇಷ ಗಿಫ್ಟ್ ಕೊಟ್ಟರೆ, ನಿಮಗೂ ಗಿಫ್ಟ್ ಸಿಗಲಿದೆ!

  |

  ಸ್ಟಾರ್ ನಟರ ಹುಟ್ಟುಹಬ್ಬ ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮ. ಅದೊಂದು ದಿನ ತಮ್ಮ ನೆಚ್ಚಿನ ನಟನನ್ನು ಭೇಟಿಮಾಡಿ, ತಮ್ಮಿಷ್ಟದ ಉಡುಗೊರೆಯನ್ನು ಕೊಟ್ಟು, ಶುಭ ಹಾರೈಸುವುದು ಎಂದರೆ ಅಭಿಮಾನಿಗಳಿಗೆ ಖುಷಿಯೋ ಖುಷಿ.

  ಆದರೆ ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಕನ್ನಡದ ಸ್ಟಾರ್ ನಟರು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಆಚರಿಸಿಕೊಂಡಿಲ್ಲ. ಇನ್ನು ಕೆಲವರು ಅಪ್ಪು ನಿಧನದಿಂದಾಗಿ ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಇದೀಗ ಒಬ್ಬೊಬ್ಬರೇ ನಟರು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಸಂಭ್ರಮಿಸಲು ಶುರುಮಾಡಿದ್ದಾರೆ.

  ನಟ ಸುದೀಪ್ ಕೊರೊನಾಗೂ ಮೊದಲೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದನ್ನು ನಿಲ್ಲಿಸಿದ್ದರು. ಹಾಗಾಗಿ ಹಲವು ವರ್ಷಗಳ ಗ್ಯಾಪ್ ಬಳಿಕ ಇದೀಗ ತಮ್ಮ ಅಭಿಮಾನಿಗಳ ಜೊತೆ ಸೇರಿ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಈಗ ಮುಂದಿನ ಸರದಿ ರಿಯಲ್ ಸ್ಟಾರ್ ಉಪೇಂದ್ರ ಅವರದ್ದು.

  ಸೆಪ್ಟೆಂಬರ್ 18 ಉಪೇಂದ್ರ ಹುಟ್ಟುಹಬ್ಬ!

  ಸೆಪ್ಟೆಂಬರ್ 18 ಉಪೇಂದ್ರ ಹುಟ್ಟುಹಬ್ಬ!

  ಇದೇ ಸೆಪ್ಟೆಂಬರ್ 18ಕ್ಕೆ ನಟ ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬ. ಕಳೆದ ಎರಡು ವರ್ಷಗಳಿಂದ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿರುವ ನಟ ಉಪೇಂದ್ರ ತಮ್ಮ ಅಭಿಮಾನಿಗಳ ಜೊತೆಗೆ ಬರ್ತಡೇ ಸೆಲೆಬ್ರೇಟ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟ ಉಪೇಂದ್ರ ಎಲ್ಲರಿಗೂ ತಮ್ಮ ಮನೆಗೆ ಆಹ್ವಾನ ನೀಡಿದ್ದಾರೆ. ಆದರೆ ಈ ಬಾರಿ ಕೇಕ್, ಹಾರ, ಬಗೆಬಗೆಯ ಉಡುಗೊರೆಗಳಿಗಿಂತ ವಿಶೇಷವಾದ ಗಿಫ್ಟ್ ಒಂದನ್ನ ಉಪೇಂದ್ರ ಕೇಳಿದ್ದಾರೆ.

  ಗಿಫ್ಟ್ ಕೇಳಿದ ಉಪೇಂದ್ರ!

  ಗಿಫ್ಟ್ ಕೇಳಿದ ಉಪೇಂದ್ರ!

  ನಟರ ಹುಟ್ಟುಹಬ್ಬ ಎಂದರೆ ಅಲ್ಲಿ ಬರುವಂತಹ ನೂರಾರು ಅಭಿಮಾನಿಗಳು ಹಾರ, ಹೂಗುಚ್ಚ, ಕೇಕು ಜೊತೆಗೆ ತಮಗಿಷ್ಟವಾದ ನಾನಾ ಬಗೆಯ ಉಡುಗೊರೆಗಳನ್ನು ತರುತ್ತಾರೆ. ಆದರೆ ನಟ ಉಪೇಂದ್ರ ಇದೆಲ್ಲದಕ್ಕೂ ಬ್ರೇಕ್ ಹಾಕಿ, ತಮಗೆ ಏನು ಬೇಕು ಎನ್ನುವುದನ್ನು ಹೇಳಿಕೊಂಡಿದ್ದಾರೆ. ಹೌದು ನಟ ಉಪೇಂದ್ರ ಈ ಬಾರಿ ತಮಗೆ ಶುಭಕೋರಲು ಬರುವವರಿಗೆ ವಿಶೇಷವಾದ ಉಡುಗೊರೆಯೊಂದನ್ನು ಕೇಳಿದ್ದಾರೆ. ಇವರ ಹುಟ್ಟುಹಬ್ಬಕ್ಕೆ ಬರುವವರು ಮರೆಯದೇ ಈ ಉಡುಗೊರೆಯನ್ನು ತರಲೇಬೇಕು ಎಂದು ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ ನಟ ಉಪೇಂದ್ರ.

  ಉಪೇಂದ್ರ ಕೇಳಿದ ಗಿಫ್ಟ್‌ಗೆ ದುಡ್ಡು ಬೇಕಿಲ್ಲ!

  ಉಪೇಂದ್ರ ಕೇಳಿದ ಗಿಫ್ಟ್‌ಗೆ ದುಡ್ಡು ಬೇಕಿಲ್ಲ!

  ಹುಟ್ಟು ಹಬ್ಬಕ್ಕೆ ನಿಮ್ಮ ಹೊಸ ವಿಚಾರಗಳನ್ನೇ ಉಡುಗೊರೆಯಾಗಿ ಕೇಳಿದ್ದಾರೆ ನಟ ಉಪೇಂದ್ರ. ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಉಪೇಂದ್ರ, "ವಿಚಾರವಂತರಾಗೋಣಾ?, ಇದೇ ಸೆಪ್ಟೆಂಬರ್ 18 ಅಭಿಮಾನಿಗಳ ದಿನದಂದು ನಿಮ್ಮನ್ನ ನಮ್ಮ ಮನೆಯಲ್ಲಿ ಬೇಟಿಯಾಗುತ್ತೇನೆ. ಆ ದಿನ ಕೇಕ್, ಹೂಗುಚ್ಚ, ಗಿಫ್ಟ್ ಎಲ್ಲಾ ಬಿಟ್ಟು, ಒಂದು ಹಾಳೆಯಲ್ಲಿ 18 ಪದಗಳನ್ನು ಮೀರದಂತೆ ಏನಾದರೂ ಒಂದು ಉತ್ತಮ ವಿಚಾರವನ್ನು ಬರೆದು ತರುತ್ತೀರಾ? ಅತ್ಯುತ್ತಮವಾದ 18 ಬರವಣಿಗೆಗೆ ಸೂಕ್ತ ಬಹುಮಾನವಿರುತ್ತದೆ" ಎಂದು ಉಪೇಂದ್ರ ಬರೆದುಕೊಂಡಿದ್ದಾರೆ.

  ಸೆಪ್ಟೆಂಬರ್ 18ಕ್ಕೆ ಸರ್ಪ್ರೈಸ್!

  ಸೆಪ್ಟೆಂಬರ್ 18ಕ್ಕೆ ಸರ್ಪ್ರೈಸ್!

  ಕಳೆದ ವರ್ಷ 2021ರಲ್ಲಿ ನಟ ಉಪೇಂದ್ರ ಕೊರೋನಾ ಕಾರಣಕ್ಕೆ ಹುಟ್ಟುಹಬ್ಬವನ್ನು ಆಚರಿಸಿ ಕೊಂಡಿರಲಿಲ್ಲ. 2020ರಲ್ಲಿ ಕೂಡ ತಮ್ಮ ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಹಾಕಿದ್ದರು. ಹಾಗಾಗಿ ಈ ಬಾರಿಯ ಉಪೇಂದ್ರ ಬರ್ತ್‌ಡೇ ಅತ್ಯಂತ ವಿಶೇಷವಾಗಿ ಇರಲಿದೆ. ನಟ ಉಪೇಂದ್ರ ತಾವು ನಿರೀಕ್ಷೆ ಮಾಡಿರುವ ಉಡುಗೊರೆಯನ್ನು ಅಭಿಮಾನಿಗಳು ಮರೆಯದೇ ತರುತ್ತಾರೆ ಎನ್ನುವ ಆಕಾಂಕ್ಷೆ ಯಲ್ಲಿ ಇದ್ದಾರೆ. ಅವರುಈ ಬಾರಿಯ ಹುಟ್ಟುಹಬ್ಬದ ಮೂಲಕ ಯಾವ ವಿಚಾರಗಳನ್ನು ಮಂಡಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

  English summary
  Upendra Demand For Special Gift From Fans On His Birthday September 18th, know more,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X