»   » ಬಡವರ ಆರೋಗ್ಯಕ್ಕೆ 'ಪ್ರಜಾಕೀಯ'ದಲ್ಲಿದೆ ಉತ್ತಮ ಲೆಕ್ಕಾಚಾರ

ಬಡವರ ಆರೋಗ್ಯಕ್ಕೆ 'ಪ್ರಜಾಕೀಯ'ದಲ್ಲಿದೆ ಉತ್ತಮ ಲೆಕ್ಕಾಚಾರ

Posted By:
Subscribe to Filmibeat Kannada

ಉತ್ತಮ ಆರೋಗ್ಯ, ದುಬಾರಿ ‍ಔಷಧಿ, ಶಸ್ತ್ರಚಿಕಿತ್ಸೆ ಬರೀ ಶ್ರೀಮಂತರಿಗಷ್ಟೇ. ಅಪ್ಪಿ-ತಪ್ಪಿ ಬಡವರು ಖಾಯಿಲೆಗೆ ತುತ್ತಾದರೆ, ಇತ್ತ ನೋವು-ಸಂಕಟ, ಅತ್ತ ಆರ್ಥಿಕ ಸಂಕಷ್ಟ. ಚಿಕಿತ್ಸೆ ವೆಚ್ಚ ಭರಿಸಲಾಗದೆ ಅದೆಷ್ಟೋ ಮಂದಿ ಪ್ರಾಣ ಬಿಡುತ್ತಿದ್ದಾರೆ.

ಮಹಾಮಳೆಗೆ ತತ್ತರಿಸಿದ ಬೆಂಗಳೂರು: ಉಪೇಂದ್ರ 'ಪ್ರಜಾ'ಕೀಯದಲ್ಲಿದೆ ಶಾಶ್ವತ ಪರಿಹಾರ.!

ಬಡವರಿಗೂ ಉತ್ತಮ ಆರೋಗ್ಯ ಸೇವೆ ಲಭಿಸಬೇಕು ಅಂದ್ರೆ ಕರ್ನಾಟಕದಲ್ಲಿ ಇರುವ 30 ಜಿಲ್ಲೆಗಳಲ್ಲೂ ಸರ್ಕಾರ ಒಂದೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿಸಬೇಕು. ಹಾಗೊಂದು ಸೂಪರ್ ಸುಪ್ರೀಂ ಐಡಿಯಾ 'ಪ್ರಜಾಕೀಯ'ದಿಂದ ಬಂದಿದೆ. ಮುಂದೆ ಓದಿರಿ...

'ಪ್ರಜೆ' ಗುರು ಕೊಟ್ಟ ಐಡಿಯಾ

ಸರ್ಕಾರದ ವತಿಯಿಂದ ಕರ್ನಾಟಕದಲ್ಲಿ ಇರುವ 30 ಜಿಲ್ಲೆಗಳಲ್ಲೂ ಒಂದೊಂದು 'ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ' ತೆರೆದರೆ ಹೇಗೆ ಎಂಬ ಆಲೋಚನೆ 'ಪ್ರಜೆ' ಗುರು ಎಂಬುವರಿಗೆ ಬಂದಿದೆ.

ಕೆರೆಗಳ ಅಭಿವೃದ್ಧಿಗೆ ಉಪೇಂದ್ರ 'ಪ್ರಜಾಕೀಯ'ದಲ್ಲಿದೆ ಮಾಸ್ಟರ್ ಪ್ಲಾನ್.!

ಆಸ್ಪತ್ರೆಯ ಖರ್ಚು-ವೆಚ್ಚದ ಲೆಕ್ಕಾಚಾರ

ಆಸ್ಪತ್ರೆ ಏನೋ ತೆರೆಯಬಹುದು. ಆದ್ರೆ, ಆಸ್ಪತ್ರೆಯ ಖರ್ಚು-ವೆಚ್ಚ ನಿರ್ವಹಣೆ ಹೇಗೆ.? ಎಂದು ಕೆಲವರು ಯೋಚಿಸಬಹುದು. ಅದಕ್ಕೆ ಗುರು ಎಂಬುವರು ಒಂದಷ್ಟು ಲೆಕ್ಕಾಚಾರ ಮುಂದಿಟ್ಟಿದ್ದಾರೆ.

ಮೊಬೈಲ್ ಬಳಕೆದಾರರಿಂದ ಒಂದು ರೂಪಾಯಿ

ಕರ್ನಾಟಕದ ಜನಸಂಖ್ಯೆ ಸುಮಾರು 6.5 ಕೋಟಿ. ಅದರಲ್ಲಿ 1.5 ಕೋಟಿ ಜನ ಮೊಬೈಲ್ ಬಳಸುತ್ತಿಲ್ಲ ಎಂದರೂ ಉಳಿದ 5 ಕೋಟಿ ಜನ ಮೊಬೈಲ್ ಬಳಸುತ್ತಿದ್ದರೆ, ದಿನಕ್ಕೆ ಒಂದು ರೂಪಾಯಿಯಂತೆ ತಿಂಗಳಿಗೆ 30 ರೂಪಾಯಿ. ಒಬ್ಬೊಬ್ಬರಿಂದ 30 ರೂಪಾಯಿ ತಿಂಗಳಿಗೆ ಕಲೆಕ್ಟ್ ಮಾಡಿದರೂ, 5 ಕೋಟಿ ಜನರಿಂದ 150 ಕೋಟಿ ಲಭಿಸುತ್ತದೆ.

ಪ್ರಜೆಗಳ ದುಡ್ಡಿನಲ್ಲೇ 'ಆರೋಗ್ಯ' ಭಾಗ್ಯ

150 ಕೋಟಿ ರೂಪಾಯಿಗಳಲ್ಲಿ 30 ಆಸ್ಪತ್ರೆಗಳಿಗೆ ತಲಾ 5 ಕೋಟಿಯಂತೆ ತಿಂಗಳ ವೆಚ್ಚ ನೀಡಬಹುದು. ಉತ್ತಮ ಸೌಕರ್ಯ ಹಾಗೂ ಉತ್ತಮ ಆರೋಗ್ಯ ಸೇವೆಯಿಂದ ಬಡವರು ಕೂಡ ಯಾವ ಖಾಯಿಲೆಗೂ ಹೆದರದೆ ಚಿಕಿತ್ಸೆ ಪಡೆಯಬಹುದು ಎಂಬುದು ಗುರು ಅವರ ಐಡಿಯಾ.

ಹೇಗಿದೆ ಈ ಐಡಿಯಾ.?

ಗುರು ಕೊಟ್ಟ ಐಡಿಯಾ 'ಪ್ರಜಾಕಾರಣಿ' ಉಪೇಂದ್ರ ಮನಸ್ಸು ಮುಟ್ಟಿದೆ. ಇದಕ್ಕೆ ನೀವೇನಂತೀರಾ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ

English summary
'Prajaakarani' Upendra has come up with a master plan along with Guru for health care of poor people.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada