For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ ಉಪೇಂದ್ರ: ಡೈರೆಕ್ಷನ್ ಚಿತ್ರದ ಬಗ್ಗೆ ಬಾಯ್ಬಿಟ್ಟಿಲ್ಲ

  |

  'ಪ್ರತಿವರ್ಷದಂತೆ ಈ ವರ್ಷ ಹುಟ್ಟುಹಬ್ಬ ಆಚರಣೆ ಬೇಡ, ನೀವು ಇದ್ದಲ್ಲಿಯೇ ಹರಸಿ, ಹಾರೈಸಿ' ಎಂದು ನಟ-ನಿರ್ದೇಶಕ ಉಪೇಂದ್ರ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

  ಸೆಪ್ಟೆಂಬರ್ 18 ರಂದು ರಿಯಲ್ ಸ್ಟಾರ್ ಉಪೇಂದ್ರ ಅವರ ಜನುಮದಿನ. ಎಲ್ಲವೂ ಸರಿಯಾಗಿದ್ದಿದ್ದರೆ ಕತ್ರಿಗುಪ್ಪೆ ನಿವಾಸದಲ್ಲಿರುವ ಉಪ್ಪಿಯ ನಿವಾಸದ ಬಳಿ ಹಬ್ಬವೇ ನಡೆಯುತ್ತಿತ್ತು. ರಾಜ್ಯಾದ್ಯಂತ ಇರುವ ಅಭಿಮಾನಿಗಳು ಸೂಪರ್ ಸ್ಟಾರ್‌ಗೆ ವಿಶ್ ಮಾಡಲು ಮನೆ ಬಳಿ ಬರ್ತಿದ್ದರು. ವಿಭಿನ್ನ ಗೆಟಪ್‌ಗಳನ್ನು ಹಾಕ್ಕೊಂಡು, ವಿಶೇಷವಾದ ಕೇಕ್ ತಯಾರಿಸಿಕೊಂಡು, ಹೊಸ ಹೊಸತಾದ ಉಡುಗೊರೆಗಳನ್ನು ಹೊತ್ತುಕೊಂಡು ಬಂದು ನೆಚ್ಚಿನ ನಟನಿಗೆ ಶುಭಕೋರುತ್ತಿದ್ದರು. ಆದರೆ, ಈ ಸಲ ಆ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ.

  ಉಪೇಂದ್ರ ಡೈರೆಕ್ಷನ್ ಸಿನಿಮಾ ಶೀರ್ಷಿಕೆ ಲೀಕ್: ರಚಿತಾ ರಾಮ್ ಟ್ರೋಲ್ಉಪೇಂದ್ರ ಡೈರೆಕ್ಷನ್ ಸಿನಿಮಾ ಶೀರ್ಷಿಕೆ ಲೀಕ್: ರಚಿತಾ ರಾಮ್ ಟ್ರೋಲ್

  ರಾಜ್ಯದಲ್ಲಿ ಹಾಗೂ ದೇಶದಲ್ಲಿ ಇನ್ನು ಕೋವಿಡ್ ಆತಂಕವಿದ್ದು, ಹೆಚ್ಚು ಜನರು ಸೇರಲು ಅವಕಾಶವೂ ಇರುವುದಿಲ್ಲ. ಹಾಗಾಗಿ, ಜನರ ಹಿತದೃಷ್ಟಿಯಿಂದ ಅಭಿಮಾನಿಗಳ ಜೊತೆ ಬರ್ತಡೇ ಆಚರಿಸದಿರಲು ಸ್ಟಾರ್ ನಟ-ನಿರ್ದೇಶಕ ತೀರ್ಮಾನಿಸಿದ್ದಾರೆ. ಈ ಕುರಿತು ಟ್ವಿಟ್ಟರ್‌ನಲ್ಲಿ ಪ್ರಕಟಣೆ ನೀಡಿ, ವಿನಂತಿಸಿಕೊಂಡಿದ್ದಾರೆ. ಮುಂದೆ ಓದಿ...

  ಅಭಿಮಾನಿಗಳಲ್ಲಿ ವಿನಂತಿ

  ಅಭಿಮಾನಿಗಳಲ್ಲಿ ವಿನಂತಿ

  ''ಅಭಿಮಾನಿಗಳ ದಿನ, 18.09.2021 ಪ್ರತಿವರ್ಷ ಅಭಿಮಾನಿಗಳೊಂದಿಗೆ ಆಚರಿಸುತ್ತಿದ್ದ ಅಭಿಮಾನಿಗಳ ದಿನದ ಸಂಭ್ರಮ ಈ ವರ್ಷವೂ ಆಚರಿಸಲು ಆಗದಿರುವುದಕ್ಕೆ ವಿಷಾದಿಸುತ್ತೇನೆ. ನಾನು ಬೆಂಗಳೂರಿನಲ್ಲಿ ಇಲ್ಲದಿರುವ ಕಾರಣ ಎಲ್ಲಾ ಅಭಿಮಾನಿಗಳು ಅವರವರು ಇರುವ ಕಡೆಯೇ ಸರಳವಾಗಿ ಈ ದಿನವನ್ನು ಆಚರಿಸಿ ಹಾರೈಸಬೇಕಾಗಿ ಬಯಸುತ್ತೇನೆ.'' -ನಿಮ್ಮ ಉಪೇಂದ್ರ

  ಡೈರೆಕ್ಷನ್ ಚಿತ್ರದ ಬಗ್ಗೆ ಸ್ಪಷ್ಟನೆ ಇಲ್ಲ

  ಡೈರೆಕ್ಷನ್ ಚಿತ್ರದ ಬಗ್ಗೆ ಸ್ಪಷ್ಟನೆ ಇಲ್ಲ

  ಹುಟ್ಟುಹಬ್ಬ ಆಚರಣೆ ಬೇಡ ಎಂದಿರುವ ಉಪೇಂದ್ರ ಬಹುನಿರೀಕ್ಷೆಯ ತಮ್ಮ ಡೈರೆಕ್ಷನ್ ಸಿನಿಮಾದ ಬಗ್ಗೆ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ಈಗಾಗಲೇ ಉಪೇಂದ್ರ ಮುಂದಿನ ನಿರ್ದೇಶನದ ಚಿತ್ರದ ಎಂದು ವೈರಲ್ ಆಗಿರುವ ಪೋಸ್ಟರ್ ಬಗ್ಗೆಯೂ ಪ್ರತಿಕ್ರಿಯಿಸಿಲ್ಲ. ಡೈರೆಕ್ಷನ್ ಸಿನಿಮಾ ಪ್ರಕಟಣೆ ಮಾಡ್ತೇನೆ ಎಂದು ಸಹ ಹೇಳಿಲ್ಲ. ಇದು ಸಹಜವಾಗಿ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ.

  ಉಪೇಂದ್ರ ನಿರ್ದೇಶನದ ಹೊಸ ಸಿನಿಮಾಕ್ಕೆ ಹೆಸರೇ ಇಲ್ಲ!ಉಪೇಂದ್ರ ನಿರ್ದೇಶನದ ಹೊಸ ಸಿನಿಮಾಕ್ಕೆ ಹೆಸರೇ ಇಲ್ಲ!

  ವೈರಲ್ ಪೋಸ್ಟರ್ ಯಾವುದು?

  ವೈರಲ್ ಪೋಸ್ಟರ್ ಯಾವುದು?

  ಉಪೇಂದ್ರ ಮುಂದಿನ ಡೈರೆಕ್ಷನ್ ಸಿನಿಮಾದ ಪೋಸ್ಟರ್ ಹಾಗೂ ಟೈಟಲ್ ಎನ್ನಲಾದ ಪೋಸ್ಟರ್‌ವೊಂದು ಬುಧವಾರ ಸಂಜೆ ವೇಳೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಉಪ್ಪಿ ನಿರ್ದೇಶಿಸುತ್ತಿರುವ ಚಿತ್ರಕ್ಕೆ ಮೂರುನಾಮದ ಚಿಹ್ನೆಯನ್ನು ಶೀರ್ಷಿಕೆಯನ್ನಾಗಿಸಿದ್ದಾರೆ. ಅಧಿಕೃತ ಘೋಷಣೆಗೂ ಮುಂಚೆಯೇ ಅದು ಸೋರಿಕೆಯಾಗಿದೆ ಎನ್ನುವ ವಿಚಾರ ಸದ್ದು ಮಾಡ್ತಿದೆ. ಆದರೆ, ಇದು ನಿಜಾನ ಅಥವಾ ಸುಳ್ಳಾ ಎನ್ನುವುದರ ಬಗ್ಗೆ ಯೋಚಿಸದ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ.

  ಪ್ಯಾನ್ ಇಂಡಿಯಾ ಕಬ್ಜ

  ಪ್ಯಾನ್ ಇಂಡಿಯಾ ಕಬ್ಜ

  ಆರ್ ಚಂದ್ರು ನಿರ್ದೇಶನದಲ್ಲಿ ತಯಾರಾಗುತ್ತಿರುವ ಕಬ್ಜ ಸಿನಿಮಾ ಹೆಚ್ಚು ನಿರೀಕ್ಷೆ ಮೂಡಿಸಿದೆ. ಅಂಡರ್‌ವರ್ಲ್ಡ್‌ ಆಧರಿತ ಕಥೆ ಮಾಡಿದ್ದು, ಈ ಚಿತ್ರದಲ್ಲಿ ಉಪೇಂದ್ರ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಉಪ್ಪಿ ಜೊತೆ ಕಿಚ್ಚ ಸುದೀಪ್ 'ಭಾರ್ಗವ್ ಬಕ್ಷಿ' ಎಂಬ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರವಿಬಸ್ರೂರು ಸಂಗೀತ ನಿರ್ದೇಶನ ಮಾಡ್ತಿದ್ದು, ಭಾರತದ ಪ್ರಮುಖ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕಬ್ಜ ಸಿನಿಮಾಗೆ ನಾಯಕಿ ಯಾರು ಎಂದು ಇನ್ನು ಬಹಿರಂಗವಾಗಿಲ್ಲ. ದಕ್ಷಿಣ ಖ್ಯಾತ ನಟಿಯರು ಹೆಸರು ಚರ್ಚೆಯಲ್ಲಿದ್ದರೂ ಅಧಿಕೃತವಾಗಿ ಯಾರ ಹೆಸರು ಪ್ರಕಟಣೆಯಾಗಿಲ್ಲ.

  6 ವರ್ಷದ ನಂತರ ಡೈರೆಕ್ಷನ್

  6 ವರ್ಷದ ನಂತರ ಡೈರೆಕ್ಷನ್

  2015ರಲ್ಲಿ ಉಪ್ಪಿ 2 ಚಿತ್ರಕ್ಕೆ ಉಪೇಂದ್ರ ಆಕ್ಷನ್ ಕಟ್ ಹೇಳಿದ್ದರು. ಅದಾದ ಮೇಲೆ ಮತ್ತೆ ಯಾವಾಗ ಡೈರೆಕ್ಷನ್ ಮಾಡ್ತಾರೆ ಎಂದು ಕುತೂಹಲ ಕಾಡ್ತಿತ್ತು. ಕಳೆದ ಒಂದು ವರ್ಷದಿಂದಲೂ ಡೈರೆಕ್ಷನ್ ಸಿನಿಮಾ ಘೋಷಣೆ ಮಾಡ್ತೇನೆ ಎಂದು ಹೇಳುತ್ತಾ ಬಂದಿರುವ ಉಪ್ಪಿ ಕೋವಿಡ್ ನಿಯಂತ್ರಣಕ್ಕೆ ಬರಲಿ ಎಂದು ಕಾಯುತ್ತಿದ್ದಾರೆ. ಚಿತ್ರರಂಗ ಮೊದಲಿನಂತೆ ಆಗುತ್ತಿದ್ದಂತೆ ಸಿನಿಮಾ ಅಧಿಕೃತವಾಗಿ ಘೋಷಿಸಲು ನಿರ್ಧರಿಸಿದ್ದಾರೆ. ಈ ನಡುವೆ ಪೋಸ್ಟರ್ ಹಾಗೂ ಟೈಟಲ್ ಸೋರಿಕೆಯಾಗಿದೆ.

  English summary
  Kannada actor-director Upendra requests fans to refrain from gathering outside his house on his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X