»   » ನಂಬಿದವರೇ ಉಪೇಂದ್ರಗೆ ಮೋಸ ಮಾಡಿದ್ರಂತೆ.! ಯಾರದು.?

ನಂಬಿದವರೇ ಉಪೇಂದ್ರಗೆ ಮೋಸ ಮಾಡಿದ್ರಂತೆ.! ಯಾರದು.?

Posted By:
Subscribe to Filmibeat Kannada

'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ'ವನ್ನ ತೊರೆದ ಉಪೇಂದ್ರ ಧೃತಿಗೆಟ್ಟಿದ್ದಾರೆ. ಬಹುಶಃ ಈ ಚುನಾವಣೆಯಲ್ಲಿ ಉಪ್ಪಿ ಸ್ಪರ್ಧೆ ಮಾಡುವುದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದ್ರೆ, ಉಪ್ಪಿ ಅದಕ್ಕೆಲ್ಲಾ ತಕ್ಕ ಉತ್ತರ ನೀಡಿದ್ದಾರೆ. ಈ ಮಧ್ಯೆ ಉಪೇಂದ್ರ ಫೇಸ್ಬುಕ್ ಲೈವ್ ನಲ್ಲಿ ತಮ್ಮ ಬೇಸರವನ್ನ ವ್ಯಕ್ತಪಡಿಸಿದ್ದಾರೆ.

ಕೆಪಿಜೆಪಿ ಪಕ್ಷದಲ್ಲಿ ಉಪೇಂದ್ರ ಅವರಿಗೆ ದ್ರೋಹ ಮಾಡಲಾಗಿದೆ. ಪ್ರಜಾಕೀಯ ಪರಿಕಲ್ಪನೆಯನ್ನ ನಂಬಿಕೊಂಡು ಬಂದಿದ್ದ ಕೆಲವರು ಇಂದು ಅಧಿಕಾರದ ಆಮಿಷಕ್ಕೆ ಒಳಗಾಗಿದ್ದಾರೆ. ಇದರ ಪರಿಣಾಮ ಉಪ್ಪಿಯ ಪ್ರಜಾಕೀಯಕ್ಕೆ ಆರಂಭದಲ್ಲೇ ವಿಘ್ನ ಉಂಟು ಮಾಡಿದ್ದಾರೆ.

ಇದೆಲ್ಲವೂ ಉಪೇಂದ್ರ ಅವರ ಮನದಿಂದ ಹೊರಬಂದ ಮಾತುಗಳು. ಕೆಪಿಜೆಪಿ ಪಕ್ಷವನ್ನ ತೊರೆದ ನಂತರ ರಿಯಲ್ ಸ್ಟಾರ್ ಉಪ್ಪಿಯ ಮನಸ್ಥಿತಿ ಹೇಗಿದೆ.? ಹಾಗಿದ್ರೆ, ಉಪ್ಪಿಯ ಮುಂದಿನ ಹಾದಿ ಏನು.? ಅವ್ರ ಆಕ್ರೋಶ ಯಾರ ಮೇಲೆ.? ಉಪ್ಪಿಗೆ ದ್ರೋಹ ಮಾಡಿದವರು ಯಾರು.? ಮುಂದೆ ಓದಿ....

ಇದೊಂದು ಒಳ್ಳೆ ಅನುಭವ

''ಸಂಪೂರ್ಣ ರಾಜಕೀಯದಿಂದ ಸಂಪೂರ್ಣವಾಗಿ ಪ್ರಜಾಕೀಯದ ಕಡೆ ಹೋಗಿ ಕನಸಿನ ಕರ್ನಾಟಕವನ್ನ ಮಾಡ್ಬೇಕು ಅಂತ ನಂಬಿಕೆಯಿಂದ ಹೊರಟಿದ್ವಿ. ಆದ್ರೆ, ಅದಕ್ಕೆ ಆರಂಭದಲ್ಲಿ ಒಂದು ರೀತಿಯ ಕಷ್ಟ ಎದುರಾಯಿತು. ಮಹೇಶ್ ಗೌಡ ಅವರಿಗೆ ನಿಜವಾಗಲೂ ಥ್ಯಾಂಕ್ಸ್ ಹೇಳ್ತಿನಿ. ಅವರು ಮಾಡಿದ ಈ ಕೆಲಸದಿಂದ ನನಗೆ ಒಳ್ಳೆ ಅನುಭವವಾಗಿದೆ'' - ಉಪೇಂದ್ರ, ನಟ-ರಾಜಕಾರಣಿ

ನಂಬಿಸಿ ಮೋಸ ಮಾಡಿದರು

''ಇನ್ನು ಕೆಲವರು ಈ ಪ್ರಜಾಕೀಯಕ್ಕೆ ಆಗಲೂ ಜೊತೆಯಾಗಿದ್ದರು. ಈಗಲೂ ಜೊತೆಯಾಗಿ ನಿಂತು ಪಕ್ಷ ಕಟ್ಟೋಣ ಅಂತ ಬೆಂಬಲಿಸಿದ್ದಾರೆ. ಇನ್ನು ಕೆಲವರು ನನ್ನ ಜೊತೆ ಬಂದು, ಪ್ರಜಾಕೀಯ ಎಂಬ ಈ ಪರಿಕಲ್ಪನೆಗೆ ಜೊತೆಯಾಗಿರಿ ಇರ್ತೀವಿ ಎಂದು ಬಂದವರೇ ಇಂದು ಬೇರೆ ರೀತಿಯಲ್ಲಿ ಮಾತನಾಡ್ತಿದ್ದಾರೆ'' - ಉಪೇಂದ್ರ, ನಟ-ರಾಜಕಾರಣಿ

ನಾನು ಧೃತಿಗೆಟ್ಟಿಲ್ಲ, ಶಕ್ತಿಶಾಲಿ ಆಗಿದ್ದೀನಿ

''ಒಳ್ಳೆ ಕೆಲಸ ಮಾಡಬೇಕಾದರೇ ನೂರೆಂಟು ವಿಘ್ನಗಳು ಎಂಬಂತೆ ನಮಗೂ ಕಷ್ಟಗಳು ಎದುರಾಗ್ತಿದೆ. ಧೃತಿಗೆಡುತ್ತಿಲ್ಲ. ಇನ್ನಷ್ಟು ಶಕ್ತಿಶಾಲಿಗಳಾಗ್ತಿದ್ದೀವಿ. ನನಗೆ ಸಂತೋಷ ಆಗ್ತಿರುವುದು ಯಾಕೆ ಅಂದ್ರೆ, ನಾವು ಆಯ್ಕೆ ಮಾಡಿದಂತ ಶೇಕಡಾ 80 ರಷ್ಟು ಜನ, ಮತ್ತೆ ಮಾಡಿ, ನಾವು ಜೊತೆಯಲ್ಲಿ ಇರ್ತೀವಿ. 10 ವರ್ಷ 20 ವರ್ಷ ಆಗಲಿ ಮಾಡೋಣ ಅಂತಿದ್ದಾರೆ. ರಾಜಕೀಯದಲ್ಲಿ ಪಳಗಿದವರು ಕೂಡ ನಮ್ಮ ಪ್ರಜಾಕೀಯಕ್ಕೆ ಸೇರಿದ್ದಾರೆ'' - ಉಪೇಂದ್ರ, ನಟ-ರಾಜಕಾರಣಿ

ಈಗಲೇ ಆಗಿದ್ದು ಒಳ್ಳೆಯದು

''ನಾವು ಸಂದರ್ಶನ ಮಾಡಿದ್ದ ಕೆಲವರು ಮೊದಲು ಪ್ರಜಾಕೀಯ ಕಾನ್ಸೆಪ್ಟ್ ನೋಡಿ ನಿಮ್ಮ ಜೊತೆ ಬರ್ತಿದ್ದಿವಿ ಅಂದ್ರು. ಈಗ ಇಲ್ಲ ನಾವು ಚುನಾವಣೆಯಲ್ಲಿ ಸ್ಪರ್ಧೆ ಮಾಡಲೇಬೇಕು ಎನ್ನುತ್ತಿದ್ದಾರೆ. ಈಗಲೇ ಆಗಿದ್ದಕ್ಕೆ ತುಂಬಾ ಸಂತೋಷ ಪಡ್ತೀನಿ. ಮುಂದೆ ಎನಾದರೂ ಆಗಿದ್ರೆ ತುಂಬಾ ಕಷ್ಟ ಆಗ್ತಿತ್ತು'' - ಉಪೇಂದ್ರ, ನಟ, ರಾಜಕಾರಣಿ

ಕೆಪಿಜೆಪಿ ವಿವಾದದ ಬಗ್ಗೆ ಉಪೇಂದ್ರ ಏನಂತಾರೆ.? ಸೈನಿಂಗ್ ಅಥಾರಿಟಿ ಯಾಕ್ಬೇಕು.?

ಇನ್ಮುಂದೆ ಹುಷಾರಾಗಿ ಸಾಗೋಣ

''ಗೆಲ್ಲುವ ಸಂದರ್ಭದಲ್ಲಿ ಎಷ್ಟೊಂದು ಜನ ಜೊತೆಗೆ ಬರ್ತಾರೆ. ಆದ್ರೆ, ಇಂತಹ ಸಮಯದಲ್ಲಿ ಜೊತೆಯಲ್ಲಿರುವವರೇ ನಿಜವಾಗಲೂ ದೇವರ ಸ್ವರೂಪ. ನಂಬಿಕೆ ಇರಲಿ. ಸಮಯ ತೆಗೆದುಕೊಳ್ಳುತ್ತೆ. ಇದೊಂದು ದೊಡ್ಡ ಪಾಠ ಆಯ್ತು. ಇನ್ಮುಂದೆ ಹುಷಾರಾಗಿ ಮುಂದೆ ಹೋಗೋಣ. ಇಂದು ಅಥವಾ ನಾಳೆ ಈ ಒಳ್ಳೆ ಕೆಲಸ ಮಾಡ್ತೀವಿ. ನಾನಿಲ್ಲ ಅಂದ್ರೆ ಮತ್ಯಾರಾದರೂ ಬಂದು ಮಾಡ್ತಾರೆ'' ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾಕೀಯ ಸಾರಥಿ ಉಪೇಂದ್ರ ಅವರ ವಿಡಿಯೋ ನೋಡಿ

ಪ್ರಜಾಕೀಯ ಸಾರಥಿ ಉಪೇಂದ್ರ ಅವರ ವಿಡಿಯೋ ನೋಡಿ

English summary
After leaving karnataka pragnyavantha janata paksha, actor Upendra speak about his experience with kpjp party and founder mahesh gowda in facebook live.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada