»   » ಕೈತಪ್ಪಿದ ಉಪ್ಪಿ 50ನೇ ಚಿತ್ರ: ನಿರ್ದೇಶಕ ಮಂಜು ಮಾಂಡವ್ಯ ಹೇಳಿದ್ದೇನು.?

ಕೈತಪ್ಪಿದ ಉಪ್ಪಿ 50ನೇ ಚಿತ್ರ: ನಿರ್ದೇಶಕ ಮಂಜು ಮಾಂಡವ್ಯ ಹೇಳಿದ್ದೇನು.?

Posted By:
Subscribe to Filmibeat Kannada
ರಾಕಿಂಗ್ ಸ್ಟಾರ್ ಯಶ್ ಗೆ 'ಮಾಸ್ಟರ್ ಪೀಸ್' ಚಿತ್ರ ನಿರ್ದೇಶನ ಮಾಡಿದ ಬಳಿಕ ಡೈರೆಕ್ಟರ್ ಮಂಜು ಮಾಂಡವ್ಯ ರವರಿಗೆ ಸಿಕ್ಕ ಗೋಲ್ಡನ್ ಚಾನ್ಸ್ ಅಂದ್ರೆ... ರಿಯಲ್ ಸ್ಟಾರ್ ಉಪೇಂದ್ರ ರವರ 50ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದು.!

ಸಿಕ್ಕ ಸುವರ್ಣಾವಕಾಶ ಮತ್ತು ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಮಂಜು ಮಾಂಡವ್ಯ ರೆಡಿ ಇದ್ದರು. ಶಾಸ್ತ್ರೋಕ್ತವಾಗಿ ಸ್ಕ್ರಿಪ್ಟ್ ಪೂಜೆ ಕೂಡ ಸಲ್ಲಿಸಿ, ಸ್ಕ್ರಿಪ್ಟಿಂಗ್ ಕೆಲಸದಲ್ಲಿ ಮಂಜು ಮಾಂಡವ್ಯ ತಲ್ಲೀನರಾಗಿದ್ದರು.[ರಿಯಲ್ ಸ್ಟಾರ್ ಉಪೇಂದ್ರ ಬಗ್ಗೆ ಹೀಗೊಂದು ದಿಢೀರ್ ಸುದ್ದಿ.!]

ಹೀಗಿರುವಾಗಲೇ, ತಮ್ಮ 50ನೇ ಚಿತ್ರಕ್ಕೆ ತಾವೇ ನಿರ್ದೇಶನ ಮಾಡಲು ಉಪೇಂದ್ರ ಮನಸ್ಸು ಮಾಡಿರುವ ಸುದ್ದಿ ದಿಢೀರ್ ಅಂತ ಹೊರಬಿತ್ತು. ಈ ಸುದ್ದಿ ನಿಜವೇ... ಮಂಜು ಮಾಂಡವ್ಯ ನಿರ್ದೇಶಿಸಲಿರುವ ಚಿತ್ರದ ಗತಿ ಏನು? ಅಂತ ತಿಳಿದುಕೊಳ್ಳಲು ನಿಮ್ಮ 'ಫಿಲ್ಮಿಬೀಟ್ ಕನ್ನಡ' ಪ್ರಯತ್ನ ಪಟ್ಟಾಗ....

ನಿರ್ದೇಶಕ ಮಂಜು ಮಾಂಡವ್ಯ ಏನಂದರು.?

''ಉಪೇಂದ್ರ ರವರ 50ನೇ ಚಿತ್ರವನ್ನ ಅವರೇ ಡೈರೆಕ್ಟ್ ಮಾಡುತ್ತಾರೆ ಎಂಬ ಸುದ್ದಿ ನನಗೂ ಈಗಲೇ ಗೊತ್ತಾಗಿದ್ದು. ಉಪ್ಪಿ ಸರ್ ನನಗಿನ್ನೂ ಮಾತಿಗೆ ಸಿಕ್ಕಿಲ್ಲ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ನಿರ್ದೇಶಕ ಮಂಜು ಮಾಂಡವ್ಯ ತಿಳಿಸಿದರು. [ಉಪೇಂದ್ರ ಅವರ 50ನೇ ಚಿತ್ರಕ್ಕೆ 'ಆಕ್ಷನ್-ಕಟ್' ಯಾರದ್ದು?]

ಎರಡು ಸಿನಿಮಾ ಕ್ಯಾನ್ಸಲ್ ಆಗಿದ್ದು ಕಾರಣ!

''ಉಪ್ಪಿ ರವರ ಎರಡು ಚಿತ್ರಗಳು ಕ್ಯಾನ್ಸಲ್ ಆಗಿದೆ ಅಂತ ಕೂಡ ಸುದ್ದಿ ಇದೆ. ಆರ್ಡರ್ ಪ್ರಕಾರ ಬರುವ ಹಾಗಿದ್ದರೆ, ನಾನು ನಿರ್ದೇಶನ ಮಾಡಬೇಕಾಗಿದ್ದು 50ನೇ ಚಿತ್ರ. ಆದ್ರೆ, ಎರಡು ಸಿನಿಮಾ ಕ್ಯಾನ್ಸಲ್ ಆಗಿರುವುದರಿಂದ ಆರ್ಡರ್ ಪ್ರಕಾರ ನನ್ನ ಚಿತ್ರ ಇನ್ನೂ ಬೇಗ ಬರುತ್ತೆ. ಹೀಗಾಗಿ 50ನೇ ಚಿತ್ರವನ್ನ ಅವರೇ ನಿರ್ದೇಶನ ಮಾಡುವ ನಿರ್ಧಾರ ಮಾಡಿರಬಹುದು'' ಎನ್ನುತ್ತಾರೆ ಮಂಜು ಮಾಂಡವ್ಯ.[ಸೈಲೆಂಟ್ ಆಗಿ ನಡೆದಿದೆ ಉಪೇಂದ್ರ ರವರ 50ನೇ ಚಿತ್ರದ ಸ್ಕ್ರಿಪ್ಟ್ ಪೂಜೆ]

ಸ್ಕ್ರಿಪ್ಟ್ ಕೆಲಸದಲ್ಲಿ ಬಿಜಿ

''ಉಪ್ಪಿ ಸರ್ ಜೊತೆ ಮಾತನಾಡಿದ್ರೆ, ಕ್ಲಿಯರ್ ಪಿಕ್ಚರ್ ಸಿಗುತ್ತೆ. ಈಗಾಗಲೇ ಏನೂ ಹೇಳಲು ಆಗಲ್ಲ. ನಾನು ನನ್ನ ಚಿತ್ರದ ಸ್ಕ್ರಿಪ್ಟಿಂಗ್ ಕೆಲಸದಲ್ಲಿ ಬಿಜಿಯಾಗಿದ್ದೀನಿ'' ಎಂದರು ಮಂಜು ಮಾಂಡವ್ಯ.

ಕ್ಯಾನ್ಸಲ್ ಆಗಿರುವ ಎರಡು ಸಿನಿಮಾ ಯಾವುದು.?

ಕೆಲ ಮೂಲಗಳ ಪ್ರಕಾರ, 'ಕಣ್ಣೇಶ್ವರ' ಮತ್ತು 'ಡಾ.ಮೋದಿ' ಕ್ಯಾನ್ಸಲ್ ಆಗಿದೆ. ಆದ್ರೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಉಪೇಂದ್ರ ರವರೇ ಕ್ಲಾರಿಟಿ ಕೊಡಬೇಕು

ಸದ್ಯ ಗುಲ್ಲೆದಿರುವ ಈ ಸುದ್ದಿ ಕುರಿತು ಸ್ವತಃ ಉಪೇಂದ್ರ ರವರೇ ತುಟಿ ಎರಡು ಮಾಡಿದರೆ ಒಳಿತು.

English summary
Director Manju Mandavya was supposed to direct Upendra's 50th Movie. But, According to the latest Grapevine, Real Star Upendra himself will direct his 50th movie. How did Manju Mandavya react on the latest buzz.? Take a look at this report.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X