For Quick Alerts
  ALLOW NOTIFICATIONS  
  For Daily Alerts

  ಚೆನ್ನೈ ಬೀಚ್ ರೆಸಾರ್ಟ್ ನಲ್ಲಿ 'ಮಳ್ಳಿ' ಜತೆ ಉಪೇಂದ್ರ

  By ಶ್ರೀರಾಮ್ ಭಟ್
  |

  ಸೂಪರ್ ಸ್ಟಾರ್ ಉಪೇಂದ್ರ ನಾಯಕತ್ವದ 'ಟೋಪಿವಾಲಾ' ಚಿತ್ರದ ಚಿತ್ರೀಕರಣವು ಭರದಿಂದ ಸಾಗುತ್ತಿದ್ದು ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಮೂಡಿಬರುತ್ತಿದೆ. ಟೋಪಿವಾಲಾ ಚಿತ್ರದ ಹಾಡೊಂದು ಇದೀಗ ಭಾರಿ ಸದ್ದು ಮಾಡಲು ಹೊರಟಿದೆ. ಯೋಗರಾಜ್ ಭಟ್ ಸಾಹಿತ್ಯ, ವಿ ಹರಿಕೃಷ್ಣ ಸಂಗೀತ ನೀಡಿರುವ 'ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು?..." ಎಂಬ ಪ್ರಾರಂಭದ ಸಾಲುಗಳಿರುವ ಹಾಡನ್ನು ಇತ್ತೀಚಿಗೆ ಚೆನ್ನೈನ 'ಬೀಚ್ ರೆಸಾರ್ಟ್' ನಲ್ಲಿ ಚಿತ್ರೀಕರಿಸಲಾಯಿತು.

  'ರೆಟ್ರೋ ಫೀಲ್' ಹೊಂದಿರುವ ಈ ಹಾಡಿಗೆ ಬಳಸಲಾದ ಉಪೇಂದ್ರ ಕಾಸ್ಟ್ಯೂಮ್ ಬೆಲೆಯೇ ರು. 25,000 ಆಗಿದ್ದು, 70 ವಿದೇಶಿ ಸಹನರ್ತಕಿಯರು ಅಂದು ಉಪೇಂದ್ರರ ಜೊತೆಯಲ್ಲಿದ್ದರು. 'ಚಿನ್ನಿ ಪ್ರಕಾಶ್' ನೃತ್ಯ ನಿರ್ದೇಶನದಲ್ಲಿ ಮೂಡಿಬಂದ ಆ ಹಾಡು, ಶೂಟಿಂಗ್ ತಾಣದಲ್ಲಿ ನೆರೆದಿದ್ದ ಬಹಳಷ್ಟು ಜನರ ಗಮನಸೆಳೆದಿದೆ. ಪ್ರಸಿದ್ಧ ಸಂಗೀತಗಾರ 'ಎಲ್ವಿಸ್ ಪ್ರೆಸ್ಲಿ' ಹೋಲುವ ಲುಕ್ ನಲ್ಲಿ ಉಪೇಂದ್ರ ಆ ಹಾಡಿನಲ್ಲಿ ಮಿಂಚುತ್ತಿದ್ದರು. ಈ ಹಾಡಿನ್ನು 4 ದಿನಗಳ ಕಾಲ ಅಲ್ಲಿ ಶೂಟ್ ಮಾಡಲಾಗಿದ

  ಇತ್ತ, ಉಪೇಂದ್ರ ನಾಯಕತ್ವದ 'ಕಲ್ಪನಾ' ಚಿತ್ರ ಇತ್ತೀಚಿಗಷ್ಟೇ ಚಿತ್ರೀಕರಣ ಮುಗಿಸಿ ಸದ್ಯದಲ್ಲೇ ತೆರೆಗೆ ಬರಲು ಸಜ್ಜಾಗಿದೆ. ತಮಿಳಿನ ಯಶಸ್ವಿ ಚಿತ್ರ 'ಕಾಂಚನಾ' ರೀಮೇಕ್ ಕನ್ನಡದ 'ಕಲ್ಪನಾ'. ಈ ಚಿತ್ರದಲ್ಲಿ ಸಾಯಿಕುಮಾರ್ ಕೂಡ ಉಪೇಂದ್ರ ಜತೆಗೂಡಿರುವುದು ವಿಶೇಷ. 'ಕಲ್ಪನಾ' ಚಿತ್ರದ ನಾಯಕಿ ಲಕ್ಷ್ಮೀ ರೈ. ಉಪೇಂದ್ರ ನಟನೆಯ ಈ ಚಿತ್ರಕ್ಕೂ ಕೂಡ ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.

  'ಟೋಪಿವಾಲಾ' ಚಿತ್ರದ ಚಿತ್ರೀಕರಣದಲ್ಲಿ ಸದ್ಯಕ್ಕೆ ಬಿಜಿಯಾಗಿರುವ ಉಪೇಂದ್ರ, ಬರುವ ತಿಂಗಳು 18 ಕ್ಕೆ (ಸೆಪ್ಟೆಂಬರ್ 18, 2012) ಹೋಮ್ ಬ್ಯಾನರಿನಲ್ಲಿ ತಮ್ಮದೇ ನಟನೆ ಹಾಗೂ ನಿರ್ದೇಶನದ ಹೊಸ ಚಿತ್ರವನ್ನು ಲಾಂಚ್ ಮಾಡಲಿದ್ದಾರೆ. ಸಿಕ್ಕ ಮಾಹಿತಿ ಪ್ರಕಾರ ಅದು 'ಉಪೇಂದ್ರ- 2'. ಅಷ್ಟರಲ್ಲಿ ಈ 'ಟೋಪಿವಾಲಾ' ಚಿತ್ರೀಕರಂ ಮುಗಿಸುವ ಕಮಿಟ್ ಮೆಂಟ್ ಉಪ್ಪಿಯದು. ಒಟ್ಟಿನಲ್ಲಿ, 'ಟೋಪಿವಾಲಾ'ದಲ್ಲಿ ಅದ್ದೂರಿ ಹಾಡೊಂದು ಉಪೇಂದ್ರ ಅಭಿಮಾನಿಗಳಿಗೆ ಕಾದಿದೆ. ಅಂದಹಾಗೆ, ಟೋಪಿವಾಲಾ ನಾಯಕಿ 'ಜಾಕಿ' ಭಾವನಾ.

  English summary
  'Malli malli manchak yastu kalu', a retro feel song, Music by V Harikrishna and Lyrics by Yograj bhat shoot at a 'Beach Resort' in Chennai for the Upcoming Upendra movie 'Tipowala'. Rs. 60 Lakhs spent for the song and taken 4 days for shooting under Chini Prakash choreography. Upendra's look resembles singing sensation Elvis Presly. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X