For Quick Alerts
  ALLOW NOTIFICATIONS  
  For Daily Alerts

  ಡಾ ರಾಜ್ ಗಾಗಿ ಉಪೇಂದ್ರ ಬರೆದಿದ್ದ ಹಾಡು ನಿಂತು ಹೋದ ಕಥೆ

  |
  ಡಾ.ರಾಜ್‌ಗಾಗಿ ಉಪ್ಪಿ ಯಾವ ಹಾಡು ಬರೆದಿದ್ರು..? | FILMIBEAT KANNADA

  ಡಾ ರಾಜ್ ಕುಮಾರ್ ಅನೇಕರಿಗೆ ಸ್ಫೂರ್ತಿ ಮತ್ತು ಆರಾಧ್ಯ ದೈವ. ರಾಜ್ ಅವರ ತತ್ವ ಆದರ್ಶಗಳನ್ನ ರೂಢಿಸಿಕೊಂಡು ಇಂಡಸ್ಟ್ರಿಗೆ ಬರ್ತಿರುವ ಹೆಚ್ಚಿದ್ದಾರೆ. ಅವರ ಹಾದಿಯಲ್ಲೇ ಸಾಗುವ ಪ್ರಯತ್ನವನ್ನ ಪ್ರತಿಯೊಬ್ಬರು ಮಾಡ್ತಿದ್ದಾರೆ.

  ಅದೇ ರೀತಿ ರಿಯಲ್ ಸ್ಟಾರ್ ಉಪೇಂದ್ರ ಅವರು ಕೂಡ ಅಣ್ಣಾವ್ರ ಅಭಿಮಾನಿ. ರಾಜ್ ಜೊತೆ ಉಪೇಂದ್ರ ಅವರು ಸಿನಿಮಾ ಮಾಡಿಲ್ಲವಾದರೂ, 'ಓಂ' ಸಿನಿಮಾ ಮಾಡಿ ಅವರ ಮೆಚ್ಚುಗೆ ಗಳಿಸಿಕೊಂಡಿದ್ದರು.

  ಈ ಮಧ್ಯೆ 'ನಟಸಾರ್ವಭೌಮ' ರಾಜ್ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಅವರು ಹಾಡೊಂದು ಬರೆದಿದ್ದರಂತೆ. ಈ ಹಾಡು ಕೊನೆಗೂ ರಿಲೀಸ್ ಆಗಲೇ ಇಲ್ಲ ಎಂದು ಸಾಧು ಕೋಕಿಲಾ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಆ ಹಾಡು ಯಾವುದು.? ಆ ಸಿನಿಮಾ ಯಾವುದು ಎಂದು ಮುಂದೆ ಓದಿ....

  ಅಣ್ಣಾವ್ರಿಗಾಗಿ ಹಾಡು ಬರೆದಿದ್ದ ಉಪೇಂದ್ರ

  ಅಣ್ಣಾವ್ರಿಗಾಗಿ ಹಾಡು ಬರೆದಿದ್ದ ಉಪೇಂದ್ರ

  ಡಾ ರಾಜ್ ಅವರ ಕುರಿತು ನಟ-ನಿರ್ದೇಶಕ ಉಪೇಂದ್ರ ಅವರು ಒಂದು ಹಾಡು ಬರೆದಿದ್ದರಂತೆ. ಈ ಹಾಡನ್ನ ಅಣ್ಣಾವ್ರಿಗೆ ಕೇಳಿಸಿದ್ದರಂತೆ. ಆಗಲೇ ರೆಕಾರ್ಡ್ ಕೂಡ ಮಾಡಿಸಲಾಗಿತ್ತು ಎಂದು ಸಂಗೀತ ನಿರ್ದೇಶಕ ಸಾಧು ಕೋಕಿಲಾ ಬಹಿರಂಗಪಡಿಸಿದ್ದಾರೆ.

  'ಪ್ರಶ್ನಾರ್ಥಕ ಚಿಹ್ನೆ' (?) ಸಿನಿಮಾ

  'ಪ್ರಶ್ನಾರ್ಥಕ ಚಿಹ್ನೆ' (?) ಸಿನಿಮಾ

  ಅಂದ್ಹಾಗೆ, ಈ ಹಾಡು ಬರೆದಿದ್ದು ಉಪೇಂದ್ರ ಅವರ ಸಿನಿಮಾಗಾಗಿ. ಆದ್ರೆ, ಈ ಸಿನಿಮಾ ಸೆಟ್ಟೇರಲಿಲ್ಲವಂತೆ. ಈ ಚಿತ್ರದ ಹೆಸರು ಪ್ರಶ್ನಾರ್ಥಕ ಚಿಹ್ನೆ (?) ಎಂದು ಸಾಧು ಬಿಚ್ಚಿಟ್ಟಿದ್ದಾರೆ.

  ಹಾಡಿನ ಸಾಹಿತ್ಯ ಹೀಗಿದೆ

  ಹಾಡಿನ ಸಾಹಿತ್ಯ ಹೀಗಿದೆ

  ಮುತ್ತುರಾಜ.....ಮುತ್ತುರಾಜ.....
  ಗಾಜನೂರಿನಿಂದ ಬಂದ ಮುತ್ತುರಾಜ....ಗಾಜನೂರಿನಿಂದ ಬಂದ ಮುತ್ತುರಾಜ
  ಮುತ್ತುರಾಜ.....ಮುತ್ತುರಾಜ.....

  ಬೇಡರ ಕಣ್ಣಪ್ಪನಾಗಿ ಮೊದಲ ಹೆಜ್ಜೆ ಇಟ್ಟನು
  ಕನ್ನಡಿಗರ ಮನವ ಗೆದ್ದು ಮನಯ ಮಗನೇ ಆದನು
  ಎಲ್ಲರಾ ಪಾಲಿನ ರಸಿಕರ ಕಣ್ಮಣಿ
  ಹಾಡಲು ಗಾನವೂ
  ಕೋಗಿಲೆ ಕೂಡ ಮೌನವೂ

  ಮುತ್ತುರಾಜ.....ಮುತ್ತುರಾಜ.....
  ಗಾಜನೂರಿನಿಂದ ಬಂದ ಮುತ್ತುರಾಜ....
  ರಾಜಣ್ಣ....
  ಕನ್ನಡ ನಾಡಿನ ರಸಿಕರ ರಾಜ....

  ಸಿನಿಮಾನೂ ಬಂದಿಲ್ಲ ಹಾಡು ಬಂದಿಲ್ಲ

  ಸಿನಿಮಾನೂ ಬಂದಿಲ್ಲ ಹಾಡು ಬಂದಿಲ್ಲ

  ಉಪ್ಪಿ ಮಾಡಬೇಕೆಂದಿದ್ದ ಆ ಪ್ರಶ್ನಾರ್ಥಕ ಚಿಹ್ನೆಯ (?) ಸಿನಿಮಾದಲ್ಲಿ ಯಾರು ನಟಿಸುತ್ತಿದ್ದರು, ಏನು ಕಥೆ ಎಂಬ ಮಾಹಿತಿ ಸಿಕ್ಕಿಲ್ಲ. ಆದ್ರೆ, ಇಂತಹದೊಂದು ಚಿತ್ರ ಬರಬೇಕಿತ್ತು ಎಂದಷ್ಟೇ ಸಾಧು ಕೋಕಿಲಾ 'ಕನ್ನಡ ಕೋಗಿಲೆ 'ಕಾರ್ಯಕ್ರಮದಲ್ಲಿ ಬಿಟ್ಟುಕೊಟ್ಟರು. ಆದ್ರೀಗ, ಈ ಹಾಡನ್ನ ಸಾಧು ಹಾಡಿ ಎಲ್ಲರ ಗಮನ ಸೆಳೆದಿದ್ದಾರೆ.

  English summary
  Kannada actor upendra was write one song about dr rajkumar but, unfortunately this song was not release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X