»   » 'ಆದದ್ದೆಲ್ಲ ಒಳಿತೇ ಆಯಿತು' ಎಂದ ಉಪ್ಪಿ ಮಾತಿನ ಅರ್ಥ ಏನು?

'ಆದದ್ದೆಲ್ಲ ಒಳಿತೇ ಆಯಿತು' ಎಂದ ಉಪ್ಪಿ ಮಾತಿನ ಅರ್ಥ ಏನು?

Posted By:
Subscribe to Filmibeat Kannada

ಕರ್ನಾಟಕ ಚುನಾವಣೆ ಈಗ ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಿಂತ ಹೆಚ್ಚು ಕುತೂಹಲ ಮೂಡಿಸಿದೆ. ಕ್ಷಣ ಕ್ಷಣ ರೋಚಕತೆಯಿಂದ ಕೂಡಿರುವ ಈ ಸಂದರ್ಭದಲ್ಲಿ ಏನಾಗುತ್ತದೆ, ಕರುನಾಡಿನಲ್ಲಿ ಯಾವ ಸರ್ಕಾರ ಬರುತ್ತದೆ ಎಂದು ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಆದರೆ ಇದೇ ವೇಳೆ ನಟ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ಅಧ್ಯಕ್ಷ ಉಪೇಂದ್ರ ಒಂದು ಟ್ವೀಟ್ ಮಾಡಿದ್ದಾರೆ.

'ಆದದ್ದೆಲ್ಲ ಒಳಿತೇ ಆಯಿತು' ಎಂದು ಉಪೇಂದ್ರ ನಿನ್ನೆ (ಮೇ 15) ರಂದು ಸಂಜೆ 8 ಗಂಟೆ ಸುಮಾರಿಗೆ ಒಂದು ಟ್ವೀಟ್ ಮಾಡಿದ್ದಾರೆ. ಇದೀಗ ಈ ಟ್ವೀಟ್ ಹಿಂದಿನ ಅರ್ಥ ಏನು ಎಂಬ ಕೂತುಹಲ ಹೆಚ್ಚಾಗಿದೆ. ಒಂದು ಕಡೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯವಾಗದೆ ಇರುವುದನ್ನು ಕುರಿತು ಉಪೇಂದ್ರ 'ಆದದ್ದೆಲ್ಲ ಒಳಿತೇ ಆಯಿತು' ಎಂದು ಹೇಳಿದರಾ? ಅಥವಾ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮಿಶ್ರ ಸರ್ಕಾರ ಮಾಡುವುದಕ್ಕೆ 'ಆದದ್ದೆಲ್ಲ ಒಳಿತೇ ಆಯಿತು' ಎಂದು ಉಪ್ಪಿ ಹೇಳಿದರಾ ? ಎಂಬ ಗೊಂದಲ ಸೃಷ್ಟಿಯಾಗಿದೆ.

ಸರಕಾರ ರಚನೆಗೆ ಬಿಜೆಪಿಗೆ ಆಹ್ವಾನ ನೀಡಿದ ರಾಜ್ಯಪಾಲರು!

ನಿನ್ನೆ ಮತ ಎಣಿಕೆ ಶುರು ಆದ ಪ್ರಾರಂಭದಲ್ಲಿ ಬಿಜಿಪಿ ಬಹುಮತ ಪಡೆಯುತ್ತದೆ ಎನ್ನುವ ಆಸೆ ಹುಟ್ಟಿಸಿತ್ತು. ಆದರೆ ಬಿಜಿಪಿ 104 ಸ್ಥಾನಕ್ಕೆ ಬಂದು ನಿಂತ ಬೆನ್ನಲೆ ಕಾಂಗ್ರೆಸ್ ತಮ್ಮ ಸಂಪೂರ್ಣ ಸಮ್ಮತಿಯನ್ನು ಜೆಡಿಎಸ್ ಪಕ್ಷಕ್ಕೆ ನೀಡಿತು. ಇನ್ನು ಇಂತಹ ಅತಂತ್ರ ಸರ್ಕಾರದ ಪರಿಸ್ಥಿತಿಯಲ್ಲಿ ಈಗ ಉಪೇಂದ್ರ ಮಾಡಿರುವ ಟ್ವೀಟ್ ಎಲ್ಲರೂ ತಲೆ ಕೆಡಸಿಕೊಳ್ಳುವಂತೆ ಮಾಡಿದೆ.

Upendras tweet about Karnataka Election Results 2018

ಅಂದಹಾಗೆ, ಉಪೇಂದ್ರ ಈ ಟ್ವೀಟ್ ಮಾಡುವ ಮೊದಲು ಬಿಜೆಪಿ ಪಕ್ಷಕ್ಕೆ ಶುಭ ಕೋರಿದ್ದರು. ಆದರೆ ಸಂಜೆ ಹೊತ್ತಿಗೆ ಬದಲಾದ ರಾಜಕೀಯಕ್ಕೆ ಚಿತ್ರಣವನ್ನು ಗಮನಿಸಿ ಅವರು 'ಆದದ್ದೆಲ್ಲ ಒಳಿತೇ ಆಯಿತು' ಎಂದು ಟ್ವೀಟ್ ಮಾಡಿದ್ದರು.

English summary
Karnataka Election Results 2018: Kannada actor and Uttama Prajakiya Party fonder Upendra's tweet about Karnataka Election Results 2018.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X