For Quick Alerts
  ALLOW NOTIFICATIONS  
  For Daily Alerts

  ರಿಯಲ್ ಸ್ಟಾರ್ ಉಪೇಂದ್ರ ಹೊಸ ಚಿತ್ರದ ಹೆಸರು ಔಟ್

  By Rajendra
  |

  ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ಆಕ್ಷನ್ ಕಟ್ ಗೆ ಮರಳಿದ್ದಾರೆ. ಈ ಬಾರಿ ಅವರು ಸ್ವಂತ ಬ್ಯಾನರ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರದ ಹೆಸರು 'ಉಪ್ಪಿ 2'. ಆದರೆ ಇದು 'ಉಪೇಂದ್ರ' (1999) ಚಿತ್ರದ ಮುಂದಿವರಿದ ಭಾಗವಂತೂ ಖಂಡಿತ ಅಲ್ಲ ಎಂದಿದ್ದಾರೆ ಉಪ್ಪ್ಪಿ.

  ಉಪ್ಪಿ ಈ ಬಾರಿ ಇನ್ನೇನು ಹೊಸ ಕಥೆ ಹೇಳುತ್ತಾರೋ ಏನೋ ಎಂಬ ಕುತೂಹಲ ಇದ್ದೇ ಇದೆ. ಈ ಕುತೂಹಲಕ್ಕೆ ತೆರೆಬೀಳಬೇಕಾದರೆ ಕೊಂಚ ಸಮಯ ಕಾಯಲೇಬೇಕು. ಉಪ್ಪಿ ಅವರ 45ನೇ ಹುಟ್ಟುಹಬ್ಬಕ್ಕೆ (ಸೆಪ್ಟೆಂಬರ್ 18, 2013) ಚಿತ್ರವನ್ನು ತೆರೆಗೆ ತರಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

  ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನೂ ಉಪೇಂದ್ರ ಅವರೇ ಹೆಣೆದಿರುವುದು ಈ ಚಿತ್ರದ ಇನ್ನೊಂದು ವಿಶೇಷ. ಗುರುಕಿರಣ್ ಅವರ ಸಂಗೀತ ಚಿತ್ರಕ್ಕಿರುತ್ತದೆ. ಉಳಿದ ಪಾತ್ರವರ್ಗ, ತಾಂತ್ರಿಕ ಬಳಗದ ವಿವರಗಳು ಇನ್ನಷ್ಟೇ ಹೊರಬೀಳಬೇಕು. ಅಂದಹಾಗೆ 'ಉಪ್ಪಿ 2' ಚಿತ್ರದ ಶೀರ್ಷಿಕೆಯನ್ನು ಜೋರಾಗಿ ಓದಿಕೊಂಡರೆ 'ಉಪ್ಪಿಟ್ಟು' ಎಂದೂ ಕೇಳಿಸುವುದುಂಟು.

  ರವೀನಾ ಟಂಡನ್, ಪ್ರೇಮಾ ಹಾಗೂ ದಾಮಿನಿ ಅವರನ್ನೊಳಗೊಂಡಿದ್ದ 'ಉಪೇಂದ್ರ' ಚಿತ್ರ ಶತದಿನೋತ್ಸವ ಆಚರಿಸಿಕೊಂಡಿತ್ತು. ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡಿದ ಚಿತ್ರಗಳಲ್ಲಿ ಇದೂ ಒಂದು. ಈಗ ಉಪ್ಪಿ 2 ಚಿತ್ರದ ಬಗ್ಗೆಯೂ ಅಂಥಹದ್ದೇ ನಿರೀಕ್ಷೆಗಳಿವೆ.

  ಸೂಪರ್ (2010) ಚಿತ್ರದ ಬಳಿಕ ಉಪೇಂದ್ರ ಯಾವ ಚಿತ್ರವನ್ನೂ ನಿರ್ದೇಶಿಸಲಿಲ್ಲ. ಈಗ 'ಉಪ್ಪಿ 2' ಚಿತ್ರವನ್ನು ಕೈಗೆತ್ತಿಕೊಂಡಿರುವುದು ಅವರ ಅಭಿಮಾನಿಗಳ ಪಾಲಿಗೆ ನಿಜಕ್ಕೂ ಸಂತಸದ ಸಂಗತಿ. ಉಪ್ಪಿ ನಿರ್ದೇಶನದ ಚಿತ್ರಗಳು ಬಾಕ್ಸ್ ಆಫೀಸಲ್ಲಿ ಸೋತ ಉದಾಹರಣೆಗಳು ಇಲ್ಲ. (ಒನ್ಇಂಡಿಯಾ ಕನ್ನಡ)

  English summary
  Real Star Upendra back to action cut again. The actor is all set to launch a home banner film tilted as Uppi 2. But it is not a sequel to the film 'Upendra' (1999). Upendra has done the story, screenplay, dialogues besides direction.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X