»   » ಪೊಲೀಸ್ ಭದ್ರತೆಯೊಂದಿಗೆ ಊರ್ವಶಿಯಲ್ಲಿ 'ಕಸ್ತೂರಿ ನಿವಾಸ' ಚಿತ್ರ ಪ್ರದರ್ಶನ

ಪೊಲೀಸ್ ಭದ್ರತೆಯೊಂದಿಗೆ ಊರ್ವಶಿಯಲ್ಲಿ 'ಕಸ್ತೂರಿ ನಿವಾಸ' ಚಿತ್ರ ಪ್ರದರ್ಶನ

Posted By:
Subscribe to Filmibeat Kannada
ಬೆಂಗಳೂರಿನ ಊರ್ವಶಿ ಥಿಯೇಟರ್ ನಲ್ಲಿ ಕನ್ನಡ ಸಿನಿಮಾ ಕಸ್ತೂರಿ ನಿವಾಸ | ಬಿಗಿ ಪೊಲೀಸ್ ಭದ್ರತೆ | Filmibeat

ವರ್ಷ ಪೂರ್ತಿ ಪರಭಾಷೆಯ ಸಿನಿಮಾಗಳನ್ನೇ ಹಾಕುವ ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ದಿನ ಕನ್ನಡ ಸಿನಿಮಾವನ್ನು ಪ್ರದರ್ಶನ ಮಾಡುತ್ತಾರೆ. ಅದೇ ರೀತಿ ಈ ವರ್ಷ ಕೂಡ ಅಲ್ಲಿ ರಾಜ್ ಕುಮಾರ್ ಅವರ 'ಕಸ್ತೂರಿ ನಿವಾಸ' ಚಿತ್ರವನ್ನು ಪ್ರದರ್ಶನ ಮಾಡಲಾಗುತ್ತಿದೆ.

ಆದರೆ ''ಈ ಇಡೀ ತಿಂಗಳು ಚಿತ್ರಮಂದಿರದಲ್ಲಿ 'ಕಸ್ತೂರಿ ನಿವಾಸ' ಸಿನಿಮಾ ಪ್ರದರ್ಶನ ಮಾಡಬೇಕು, ಇಲ್ಲವಾದರೆ ಚಿತ್ರಮಂದಿರಕ್ಕೆ ಕಲ್ಲು ತೂರುತ್ತೇವೆ'' ಎಂದು ಕೆಲವರು ಕಳೆದ ಭಾನುವಾರ ರಾತ್ರಿ ಚಿತ್ರಮಂದಿರಕ್ಕೆ ನುಗ್ಗಿ ಬೆದರಿಕೆ ಹಾಕಿದ್ದಾರೆ.

Urvashi theatre gets police security.

ಈ ಹಿನ್ನಲೆಯಲ್ಲಿ ಈಗ ಊರ್ವಶಿ ಚಿತ್ರಮಂದಿರಕ್ಕೆ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಕಲಾಸಿಪಾಳ್ಯ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಂಡಿದ್ದಾರೆ.

English summary
Urvashi theatre gets police security.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada