»   » ನೆಲಸಮವಾಗಲಿದೆ ಕ್ರೇಜಿಸ್ಟಾರ್ ರವಿಚಂದ್ರನ್ ಮನೆ

ನೆಲಸಮವಾಗಲಿದೆ ಕ್ರೇಜಿಸ್ಟಾರ್ ರವಿಚಂದ್ರನ್ ಮನೆ

By: ಉದಯರವಿ
Subscribe to Filmibeat Kannada
ಬೆಂಗಳೂರು ರಾಜಾಜಿನಗರದ ರಾಜ್ ಕುಮಾರ್ ರಸ್ತೆಯಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರಿಗೂ ರವಿಚಂದ್ರನ್ ಮನೆ ಚಿರಪರಿಚಿತ. ಈ ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಲ ರವಿಚಂದ್ರನ್ ಮನೆ ಇಲ್ಲೇ ಇರೋದು ಎಂಬ ಮಾತು ಕಿವಿಗೆ ಬಿದ್ದೇ ಬೀಳುತ್ತದೆ. ಅಷ್ಟರ ಮಟ್ಟಿಗೆ ಅವರ ಮನೆ ನೋಟೆಡ್.

ಈಗ ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ನಿವಾಸವನ್ನು ಬದಲಾಯಿಸಿದ್ದಾರೆ. ವಾಸ್ತುತಜ್ಞರ ಸಲಹೆ ಸೂಚನೆಗಳ ಮೇರೆಗೆ ಈ ಬದಲಾವಣೆ ಎನ್ನಲಾಗಿದೆ. ಈಗವರ ಫ್ಯಾಮಿಲಿ ಯಲಹಂಕ ಸಮೀಪದ ನ್ಯಾಯಾಂಗ ಬಡಾವಣೆಗೆ ಶಿಫ್ಟ್ ಆಗಿದೆ.

'ಏಕಾಂಗಿ' ಚಿತ್ರದಿಂದ ಆರಂಭವಾದ ರವಿಚಂದ್ರನ್ ಅವರ ಸೋಲಿನ ಪರ್ವಕ್ಕೆ ಇನ್ನೂ ಮುಗಿದಿಲ್ಲ. ಈಗವರು ತಮ್ಮ ಮನೆಯನ್ನು ಬದಲಾಯಿಸುವ ಮೂಲಕ ಗೆಲುವಿನ ನಗೆ ಬೀರಲು ಹಾತೊರೆಯುತ್ತಿದ್ದಾರೆ. ಅವರ 'ಮಂಜಿನ ಹನಿ' ಚಿತ್ರವೂ ಹನಿಹನಿಯಾಗಿ ತಯಾರಾಗುತ್ತಿದೆ.

ಇನ್ನು ರಾಜ್ ಕುಮಾರ್ ರಸ್ತೆಯಲ್ಲಿನ ಮನೆಯನ್ನು ಕೆಡವಿ ಅಲ್ಲಿ ಸ್ಟುಡಿಯೋ ನಿರ್ಮಾಣ ಮಾಡುವ ಬಗ್ಗೆಯೂ ಆಲೋಚನೆ ಇದೆಯಂತೆ. ಗಾಂಧಿನಗರ ಈಶ್ವರಿ ಕಚೇರಿಯನ್ನೂ ನೆಲಸಮ ಮಾಡಿ ಹೊಸ ಕಟ್ಟಡ ಕಟ್ಟುವ ಕೆಲಸವೂ ನಡೆಯುತ್ತಿದೆ.

ಇದು ಹೀಗೆ ನಡೆಯುತ್ತಿದ್ದರೆ ಇನ್ನೊಂದು ಗಾಸಿಪ್ ಸಹ ಬಲವಾಗಿ ಬೀಸುತ್ತಿದೆ. ಅದೇನೆಂದರೆ...ಸಾಲದ ಹೊರೆ ಜಾಸ್ತಿಯಾಗಿ ರವಿಚಂದ್ರನ್ ಈ ರೀತಿ ಮಾಡುತ್ತಿದ್ದಾರೆ ಎಂಬುದು. ಆದರೆ ರವಿ ಮಾತ್ರ ಈ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ.

English summary
Crazy Stra Ravichandran moves from his Dr Rajkumar road home into new home at Judicial Layout, near Yelahanka. According to Gandhinagar gossip the sole reason for the crazy star to move from his house to another is the Vaastu defect. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada