For Quick Alerts
  ALLOW NOTIFICATIONS  
  For Daily Alerts

  ಇಷ್ಟು ದಿನ ಒಬ್ಬನೇ ಬರ್ತಿದ್ದ, ಈಗ ಜೋಡಿಯಾಗಿ ಬಂದ; ಗೆಳೆಯ ವಸಿಷ್ಠ ಬಗ್ಗೆ ಡಾಲಿ ಪೋಸ್ಟ್

  |

  ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಅತಿಹೆಚ್ಚು ಸುದ್ದಿಯಲ್ಲಿರುವ ನಟ - ನಟಿ ಜೋಡಿ ಎಂದರೆ ಅದು ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ. ಹೌದು, ಕಳೆದ ಕೆಲ ದಿನಗಳ ಹಿಂದಷ್ಟೇ ಏರ್‌ಪೋರ್ಟ್‌ವೊಂದರಲ್ಲಿ ಒಟ್ಟಿಗೆ ಕೈ ಕೈ ಹಿಡಿದುಕೊಂಡು ನಡೆದಾಡುವ ಮೂಲಕ ಕ್ಯಾಮೆರಾ ಕಣ್ಣಿಗೆ ಬಿದ್ದು ಅನುಮಾನ ಹಾಗೂ ಕುತೂಹಲ ಮೂಡಿಸಿದ್ದ ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಕೆಲ ದಿನಗಳ ಬೆನ್ನಲ್ಲೇ ಇಬ್ಬರೂ ಸಹ ಪರಸ್ಪರ ಪ್ರೀತಿಸುತ್ತಿದ್ದೇವೆ ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಬಿಚ್ಚಿಟ್ಟಿದ್ದರು.

  ಹೀಗೆ ಪೋಸ್ಟ್ ಹಂಚಿಕೊಂಡ ಕೆಲ ದಿನಗಳ ನಂತರ ಈ ಜೋಡಿ ಸರಳವಾಗಿ ನಿಶ್ಚಿತಾರ್ಥವನ್ನೂ ಸಹ ಮಾಡಿಕೊಂಡಿತು ಹಾಗೂ ಇತ್ತೀಚೆಗಷ್ಟೆ ಪತ್ರಿಕಾಗೋಷ್ಠಿ ನಡೆಸವ ಮೂಲಕ ತಮ್ಮ ಮದುವೆ ದಿನಾಂಕ ಹಾಗೂ ಸ್ಥಳವನ್ನು ಸಹ ಹಂಚಿಕೊಂಡಿತ್ತು. ಜನವರಿ 26ರಂದು ಮೈಸೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಈ ಜೋಡಿ ಜನವರಿ 28ರಂದು ಬೆಂಗಳೂರಿನಲ್ಲಿ ರಿಸೆಪ್ಷನ್ ಮಾಡಿಕೊಳ್ಳಲಿದೆ.

  ಮೊದಲಿಗೆ ಪತ್ರಿಕಾಗೋಷ್ಠಿ ನಡೆಸಿ ಮದುವೆ ಆಮಂತ್ರಣವನ್ನು ಬಹಿರಂಗಪಡಿಸಿದ ಈ ಜೋಡಿ ಇದೀಗ ಚಂದನವನದ ತಾರೆಯರು ಹಾಗೂ ಕಲಾವಿದರಿಗೆ ಆಮಂತ್ರಣವನ್ನು ನೀಡುತ್ತಿದೆ. ಇನ್ನು ವಸಿಷ್ಠ ಸಿಂಹ ಸಂಗಾತಿ ಜತೆ ತೆರಳಿ ತಮ್ಮ ಆಪ್ತ ಗೆಳೆಯ ಡಾಲಿ ಧನಂಜಯ್ ಅವರಿಗೆ ವಿವಾಹದ ಆಮಂತ್ರಣವನ್ನು ನೀಡಿದ್ದಾರೆ. ಇನ್ನು ಧನಂಜತ್ ಈ ಸಂದರ್ಭದ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಧನಂಜಯ್ ಇಷ್ಟು ದಿನ ಒಬ್ಬನೇ ಬರ್ತಿದ್ದ, ಇವತ್ತು ಜೋಡಿಯಾಗಿ ಬಂದಿದ್ದಾನೆ, ಮುದ್ದಾದ ಜೋಡಿ ಎಂದು ಬರೆದುಕೊಂಡಿದ್ದಾರೆ.

  ಈ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ನೆಟ್ಟಿಗರು ನೀವು ಆದಷ್ಟು ಬೇಗ ಜೋಡಿಯಾಗಿ ಇದೇ ತರಹ ಫೋಟೊವನ್ನು ಹಂಚಿಕೊಳ್ಳಿ ಎಂದು ಪ್ರತಿಕ್ರಿಯಿಸಿದ್ದಾರೆ.

  English summary
  Vasishta Simha and Haripriya invited Daali Dhananjay for their marriage. Read on
  Friday, January 13, 2023, 18:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X