Don't Miss!
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Veda Success Meet : ದಾವಣಗೆರೆ: ಸ್ಟಾರ್ ವಾರ್ ಬಗ್ಗೆ ಶಿವಣ್ಣನ ಸಮಯೋಚಿತ ಮಾತು
ಹ್ಯಾಟ್ರಿಕ್ ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ಸಕ್ಸಸ್ ಆದ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್, ನಿರ್ಮಾಪಕಿ ಗೀತಾ, ಚಿತ್ರದಲ್ಲಿ ನಟಿಸಿರುವ ನಟಿಯರು ದಾವಣಗೆರೆ ನಗರದಲ್ಲಿ ವಿಜಯ ಯಾತ್ರೆ ನಡೆಸಿದರು.
ನಿಟುವಳ್ಳಿಯ ಗ್ರಾಮದೇವತೆ ಶ್ರೀದುಗಾಂಬಿಕಾ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ತೆರೆದ ವಾಹನದಲ್ಲಿ ಆಗಮಿಸಿದ ಚಿತ್ರತಂಡ ಪ್ರಮುಖ ರಸ್ತೆಗಳ ಮೂಲಕ ಸಾಗಿ ಅಶೋಕ ಚಿತ್ರಮಂದಿರ ತಲುಪಿತು. ಈ ವೇಳೆ ಶಿವಣ್ಣರನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.
ಶಿವರಾಜ್
ಕೆ
ಆರ್
ಪೇಟೆ
'ಧಮಾಕ':
ಯಂಗ್
ರೆಬೆಲ್
ಸ್ಟಾರ್
ಬೆಂಬಲ!
ಮಾಧ್ಯಮದವರ ಜೊತೆ ಮಾತನಾಡಿದ ಶಿವರಾಜ್ ಕುಮಾರ್, ವೇದ ಚಿತ್ರಕ್ಕೆ ರಾಜ್ಯದೆಲ್ಲೆಡೆ ಉತ್ತಮ ಯಶಸ್ಸು ದೊರೆತಿದೆ. ಮಹಿಳೆಯರಿಗೆ ಉತ್ತಮ ಸಂದೇಶ ನೀಡುವ ಚಿತ್ರ ಇದು. ಮಹಿಳೆಯರು ಮಾತ್ರವಲ್ಲದೇ ಪುರುಷರು ಈ ಚಿತ್ರದಲ್ಲಿನ ಸಂದೇಶವನ್ನು ಸ್ವೀಕರಿಸಿದ್ದಾರೆ.ಇಡೀ ಕುಟುಂಬ ಸಮೇತರಾಗಿ ಕುಳಿತು ನೋಡಬಹುದು ಎಂದು ಹೇಳಿದರು.

ಅಪ್ಪು ಜೊತೆ ನಟಿಸಬೇಕಿತ್ತು: ಶಿವಣ್ಣ
ಹರಿಹರ, ರಾಣೇಬೆನ್ನೂರು, ಹಾವೇರಿ, ಗದಗ ಸೇರಿದಂತೆ ಇತರೆ ಕಡೆಗಳಲ್ಲಿ ಪ್ರವಾಸ ಮಾಡಲಾಗುತ್ತಿದೆ. ಈಗಾಗಲೇ ಬಳ್ಳಾರಿ ಹಾಗೂ ಚಿತ್ರದುರ್ಗ ಸೇರಿಂತೆ ವಿವಿಧೆಡೆ ಪ್ರಚಾರ ನಡೆಸಿದ್ದೇವೆ. ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು. ಮುಂದಿನ ಚಿತ್ರಗಳಾದ ಯೋಗರಾಜ್ ಭಟ್ ನಿರ್ದೇಶನದ 'ಕರಟಕ ದಮನಕ' ಚಿತ್ರವನ್ನು ಪ್ರಭುದೇವ್ ಜೊತೆಗೆ ಮಾಡುತ್ತಿದ್ದೇನೆ. ಇನ್ನೊಂದು ಚಿತ್ರ ಶ್ರೀನು ನಿರ್ದೇಶನ ಮಾಡುತ್ತಿದ್ದು, ಸಂದೇಶ ನಾಗರಾಜ್ ನಿರ್ಮಾಣದ ಗೋಸ್ಟ್ ಚಿತ್ರದ ಚಿತ್ರೀಕರಣ ನಡೆಯುತ್ತಿವೆ. ಪುನೀತ್ ರಾಜಕುಮಾರ್ ಹಾಗೂ ನಾನು ಸಿನಿಮಾ ಮಾಡಬೇಕಿತ್ತು. ಆದರೆ ಆಗಲಿಲ್ಲ ಎಂದರು.

'ಈಸೂರು ಧಂಗೆ' ಶೀಘ್ರದಲ್ಲೇ ಆರಂಭ
ಇನ್ನು ರಾಘಣ್ಣ ಅವರ ಜೊತೆ ಮಾಡಲು ಉತ್ತಮ ಕಥೆ ಹುಡುಕುತ್ತಿದ್ದೇವೆ ಎಂದ ಅವರು, ಅಪ್ಪಾಜಿ ಹೇಳುವಂತೆ ಯಾವುದೇ ಕೆಲಸಗಳಾಗಲೀ ಶ್ರಮ ಮಾತ್ರ ನಮ್ಮದಾಗಬೇಕು. ನಾವೇನೂ ಪ್ರಯತ್ನ ಮಾಡಿದರೂ ಅದು ಆಗುವುದಿಲ್ಲ ಎಂದು ತಿಳಿಸಿದರು. ತಾನಾಗೇ ಬಂದಾಗ ಮಾತ್ರ ಸಾಧ್ಯ ಎನ್ನುವಂತೆ ಯಾವುದೇ ಯಶಸ್ಸು ಆಗಲಿ, ತಾನಾಗಿಯೇ ಹುಡುಕಿಕೊಂಡು ಬರಬೇಕು. ಅದನ್ನು ನಾನು ನಂಬುತ್ತೇನೆ. ಈಸೂರು ಧಂಗೆ ಎನ್ನುವು ಚಿತ್ರ ಕಥೆ ಸಿದ್ದವಿದ್ದು, ಅದೂ ಕೂಡ ಶೀಘ್ರವೇ ಆರಂಭಗೊಳ್ಳಲಿದೆ. ಎಲ್ಲದಕ್ಕೂ ಸಮಯ ಬಂದಾಗ ಆಗಲಿದೆ. ಟೇಕ್ ಆಫ್ ಆಗಲಿದೆ ಎಂದರು.

ಸ್ಟಾರ್ ವಾರ್ ಬಗ್ಗೆ ಏನಂದ್ರು ಶಿವಣ್ಣ
ಅಭಿಮಾನಿಗಳ ಗಲಾಟೆ ಹೆಚ್ಚಾಗುತ್ತಿದೆ. ಇದು ಯಾರಲ್ಲೂ ನಡೆಯಬಾರದು. ನನ್ನ ಮನಸ್ಸು ಯಾವಾಗಲೂ ತೆರದ ಹೃದಯವಾಗಿದೆ. ನಮ್ಮ ಹೃದಯದ ತುಂಬಾ ಪ್ರೀತೀನೇ ತುಂಬಿಕೊಂಡಿದೆ. ಯಾರೂ ಕೂಡು ಅತಿರೇಕದ ಅಭಿಮಾನ ಯಾವ ನಟರಿಗೂ ತೋರಿಸಬಾರದು ಎಂದಷ್ಟೇ ಪ್ರತಿಕ್ರಿಯೆ ನೀಡಿದರು.

ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್ ಮಾತು
ಚಿತ್ರದ ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್ ಮಾತನಾಡಿ, ಸ್ವಂತ ಬ್ಯಾನರ್ ಅಡಿಯಲ್ಲಿ ವೇದ ಚಿತ್ರ ರೂಪಿಸಲಾಗಿದೆ. ಮಹಿಳೆಯರಿಗೆ ಉತ್ತಮ ಸಂದೇಶ ನೀಡಲಾಗಿದೆ. ವೇದ ಚಿತ್ರದ ಯಶಸ್ಸು ತುಂಬಾ ಖುಷಿ ತಂದಿದೆ. ಮುಂದೆ ಇನ್ನು ಹೆಚ್ಚಿನ ಚಿತ್ರಗಳನ್ನು ನಿರ್ಮಾಣ ಮಾಡುವ ಆಸೆ ಇದೆ. ಆದರೆ ಸದ್ಯಕ್ಕೆ ವೇದ ಚಿತ್ರದ ಬಗ್ಗೆ ಮಾತ್ರ ನೋಡಿಕೊಳ್ಳುತ್ತಿದ್ದೇವೆ ಎಂದರು. ನಟಿ ಗಾನವಿ ಲಕ್ಷ್ಮಣ್ ಮಾತನಾಡಿ, ದಾವಣಗೆರೆಯಲ್ಲಿ ದೇವಿ ದರ್ಶನ ಮಾಡಿದ್ದು ತುಂಬಾ ಸಂತೋಷ ಕೊಟ್ಟಿದೆ. ವೇದ ಚಿತ್ರಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ರಾಜಾದ್ಯಂತ ಉತ್ತಮ ಯಶಸ್ಸು ಕಾಣಬೇಕೆಂದು ಮನವಿ ಮಾಡಿಕೊಂಡಿರುವುದಾಗಿ ಹೇಳಿದರು. ಈ ವೇಳೆ ಅದಿತಿ ಸಾಗರ್ ಸೇರಿದಂತೆ ಚಿತ್ರತಂಡ, ದಾವಣಗೆರೆ ಜಿಲ್ಲೆಯ ಶಿವರಾಜ್‌ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಯೋಗೇಶ್ ಮತ್ತಿತರರು ಹಾಜರಿದ್ದರು.