»   » 'ದಾದಾ ಸಾಹೇಬ್ ಫಾಲ್ಕೆ' ಪುರಸ್ಕೃತ ನಟ ಶಶಿ ಕಪೂರ್ ನಿಧನ

'ದಾದಾ ಸಾಹೇಬ್ ಫಾಲ್ಕೆ' ಪುರಸ್ಕೃತ ನಟ ಶಶಿ ಕಪೂರ್ ನಿಧನ

Posted By:
Subscribe to Filmibeat Kannada

ಬಾಲಿವುಡ್ ಸೂಪರ್ ಸ್ಟಾರ್ ನಟ ಶಶಿ ಕಪೂರ್ (79) ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳುತ್ತಿದ್ದ ಶಶಿ ಕಪೂರ್ ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಇಂದು (ಡಿಸೆಂಬರ್ 04) ಕೊನೆಯುಸಿರೆಳೆದಿದ್ದಾರೆ.

ಪೃಥ್ವಿರಾಜ್ ಕಪೂರ್ ಅವರ ಪುತ್ರ ಶಶಿ ಕಪೂರ್ ಅವರು ತಂದೆಯಂತೆ ರಂಗಭೂಮಿ ಕಲಾವಿದರಾಗಿ ಬೆಳೆದು ಚಿತ್ರರಂಗದಲ್ಲಿ ಸ್ಟಾರ್ ಆಗಿ ಬೆಳೆದರು. ಹಿಂದಿ ಚಿತ್ರರಂಗದ ಶೋ ಮ್ಯಾನ್ ರಾಜ್ ಕಪೂರ್ ಹಾಗೂ ಶಮ್ಮಿ ಕಪೂರ್ ಅವರ ಕಿರಿಯ ಸೋದರರಾಗಿರುವ ಶಶಿ ಅವರು ಜೆನ್ನಿಫರ್ ಕೆಂಡಲ್ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಕುನಾಲ್, ಕರಣ್ ಹಾಗೂ ಸಂಜನಾ ಕಪೂರ್ ಎಂಬ ಮೂವರು ಮಕ್ಕಳು.

ಶಶಿ ಕಪೂರ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

Veteran Actor Shashi Kapoor passes away in Mumbai

ರಾಜ್ ಕಪೂರ್ ಅವರ 'ಆವಾರ' ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಂಡ ಶಶಿ ಅವರು 1961ರಲ್ಲಿ 'ಧರ್ಮ್ ಪುತ್ರ' ಚಿತ್ರದ ಮೂಲಕ ಮುಖ್ಯ ಪಾತ್ರಧಾರಿಯಾಗಿ ಅಭಿನಯಿಸತೊಡಗಿದರು.

ಸುಮಾರು 116 ಹಿಂದಿ ಚಿತ್ರಗಳಲ್ಲಿ ನಟಿಸಿದ್ದು, ಅವುಗಳ ಪೈಕಿ 61 ಚಿತ್ರಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. 55 ಬಹು ನಾಯಕ ಪ್ರಧಾನ ಚಿತ್ರಗಳಲ್ಲಿ, 21 ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ 7 ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಶಶಿ ಅಭಿನಯಿಸಿದ್ದಾರೆ. 2011ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದ ಶಶಿ ಕಪೂರ್ ಅವರು ಮೂರು ಬಾರಿ ರಾಷ್ಟ್ರಪ್ರಶಸ್ತಿ ಗೆದ್ದಿದ್ದಾರೆ. 62ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಶಶಿ ಕಪೂರ್ ಅವರಿಗೆ ಒಲಿದಿದೆ.

Veteran Actor Shashi Kapoor passes away in Mumbai

ಚಿತ್ರದಲ್ಲಿ ನಟನೆ ಜತೆಗೆ ಸಹಾಯಕ ನಿರ್ದೇಶಕ, ನಿರ್ದೇಶಕನಾಗಿಯೂ ಶಶಿಕಪೂರ್ ತೊಡಗಿಸಿಕೊಂಡಿದ್ದರು. ಸುನೀಲ್ ದತ್ ನಟನೆಯ ಮೊದಲ ಚಿತ್ರ ಪೋಸ್ಟ್ ಬಾಕ್ಸ್ 999' ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು ಶಶಿಕಪೂರ್.

English summary
Veteran Actor Shashi Kapoor passes away in Mumbai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada