»   » 'ಸಾಕ್ಷಾತ್ಕಾರ' ಖ್ಯಾತಿ ಜಮುನಾ ಅವರಿಗೆ ಪತಿ ವಿಯೋಗ

'ಸಾಕ್ಷಾತ್ಕಾರ' ಖ್ಯಾತಿ ಜಮುನಾ ಅವರಿಗೆ ಪತಿ ವಿಯೋಗ

Posted By:
Subscribe to Filmibeat Kannada

ಕನ್ನಡ, ತೆಲುಗು, ತಮಿಳು ಚಿತ್ರರಂಗದ ಖ್ಯಾತ ಅಭಿನೇತ್ರಿ ಜಮುನಾ ಅವರ ಪತಿ ಜೂಲೂರಿ ರಮಣಾರಾವ್ ಹೃದಯಾಘಾತದಿಂದ ಸೋಮವಾರ (ನ.10) ರಾತ್ರಿ ವಿಧಿವಶರಾಗಿದ್ದಾರೆ. ಮೃತರಿಗೆ 86 ವರ್ಷ ವಯಸ್ಸಾಗಿತ್ತು.

ಹೈದರಾಬಾದಿನ ಬಂಜಾರಾಹಿಲ್ಸ್ ಪ್ರದೇಶದ ರೋಡ್ ನಂಬರ್ 12ರಲ್ಲಿರುವ ಸ್ವಗೃಹದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ರಮಣಾರಾವ್ ಅವರು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದರು. ರಮಣಾರಾವ್ ಅವರ ತಂದೆ ಬ್ರಿಟೀಷರ ಆಳ್ವಿಕೆಯಲ್ಲಿ ಜಿಲ್ಲಾಧಿಕಾರಿಯಾಗಿದ್ದರು.

ಜಮುನಾ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಮಗ ಅಮೆರಿಕಾದಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದು, ಮಗಳು ಚಿತ್ರ ಕಲಾವಿದೆ. ರಮಣಾರಾವ್ ಅವರ ಅಂತ್ಯಕ್ರಿಯೆಗಳನ್ನು ಮಂಗಳವಾರ (ನ.11) ಪಂಜಾಗುಟ್ಟ ರುದ್ರಭೂಮಿಯಲ್ಲಿ ನೆರೆವೇರಲಿವೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Veteran actress Jamuna husband Ramana Rao no more

ಬಹಳ ಚಿಕ್ಕ ವಯಸ್ಸಿನಲ್ಲೇ ಬೆಳ್ಳಿಪರದೆಗೆ ಅಡಿಯಿಟ್ಟ ಜಮುನಾ ಅವರು 1965ರಲ್ಲಿ ರಮಣಾರಾವ್ ಅವರನ್ನು ವರಿಸಿದರು. ಶ್ರೀವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲೂ ಪ್ರೊಫೆಸರ್ ಆಗಿ ಜಮುನಾ ಅವರ ಪತಿ ಕಾರ್ಯನಿರ್ವಹಿಸಿದ್ದಾರೆ.

ಮದುವೆಯಾದ ಬಳಿಕವೂ ಸಿನಿಮಾಗಳಲ್ಲಿ ಅಭಿನಯಿಸಲು ತಮ್ಮ ಪತಿ ಕೊಟ್ಟಂತಹ ಪ್ರೋತ್ಸಾಹವನ್ನು ತಾವೆಂದಿಗೂ ಮರೆಯಲಾರೆ ಎಂದು ಜಮುನಾ ಅವರು ಸಾಕಷ್ಟು ಸಲ ಹೇಳಿಕೊಂಡಿದ್ದಾರೆ. ಇಳಿವಯಸ್ಸಿನಲ್ಲಿ ಇವರ ಪುತ್ರಿ ಸ್ರವಂತಿ ಅವರು ವರದಕ್ಷಿಣೆ ಕಿರುಕುಳಕ್ಕೆ ಒಳಗಾಗಿದ್ದು ಈ ಹಿರಿಯ ಜೀವಗಳನ್ನು ಬಹಳಷ್ಟು ನೊಂದುಕೊಳ್ಳುವಂತೆ ಮಾಡಿತ್ತು.

ಅದನ್ನು ಹೊರತುಪಡಿಸಿದರೆ ಈ ದಂಪತಿಗಳು ಹಲವರಿಗೆ ಆದರ್ಶಪ್ರಾಯವಾಗಿದ್ದರು. ಕರ್ನಾಟಕ ಹಂಪೆ ಮೂಲದವರಾದ ಜಮುನಾ ಕನ್ನಡ ಸೇರಿದಂತೆ ತೆಲುಗು ಮತ್ತು ತಮಿಳಿನಲ್ಲಿ 198ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ತೆಲುಗು ಕಲಾವಿದರ ಸಂಘ ಸ್ಥಾಪಿಸಿದ ಖ್ಯಾತಿ ಜಮುನಾ ಅವರದು. ಬಿ ಆರ್ ಪಂತುಲು ಅವರ 'ರತ್ನಗಿರಿ ರಹಸ್ಯ', ಆರ್ ನಾಗೇಂದ್ರರಾಯರ 'ಆದರ್ಶ ಸತಿ' ಹಾಗೂ ಪುಟ್ಟಣ್ಣ ಕಣಗಾಲರ 'ಸಾಕ್ಷಾತ್ಕಾರ' ಚಿತ್ರಗಳಲ್ಲಿ ಅಮೋಘ ಅಭಿನಯ ನೀಡಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Juluri Ramana Rao, husband of popular yesteryear Kannanda actress Jamuna passed away on November 10th, 2014 due to cardiac arrest.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada