For Quick Alerts
  ALLOW NOTIFICATIONS  
  For Daily Alerts

  ವಿಕ್ಕಿ ವರುಣ್ ನಟನೆಯ 'ಕಾಲಾಪತ್ಥರ್' ಸಿನಿಮಾಗೆ ದೊಡ್ಮನೆ ಕುಟುಂಬದ ಹೀರೊಯಿನ್!

  |

  'ಕೆಂಡಸಂಪಿಗೆ', 'ಕಾಲೇಜು ಕುಮಾರ' ಸಿನಿಮಾಗಳ ಮೂಲಕ ನಾಯಕ ನಟನಾಗಿ ಗುರುತಿಸಿಕೊಂಡಿದ್ದ ವಿಕ್ಕಿ ವರುಣ್ ತನ್ನ ನಟನೇ ಮೂಲಕವೇ ಜನಪ್ರಿಯರಾಗಿದ್ದಾರೆ. ನಾಯಕನಾಗಿ ಮಿಂಚಿದ್ದ ವಿಕ್ಕಿ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ನಟನೆ ಜೊತೆಗೆ ನಿರ್ದೇಶಕರಾಗಿದ್ದಾರೆ. 'ಕಾಲಾಪತ್ಥರ್' ಸಿನಿಮಾ ಮೂಲಕ ನಟನಾಗಿಯೂ, ನಿರ್ದೇಶಕನಾಗಿಯೂ ಜವಾಬ್ದಾರಿಯನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ 'ಕಾಲಾಪತ್ಥರ್' ಸಿನಿಮಾದ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದ್ದು, ಇಂದು ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಫಸ್ಟ್‌ಲುಕ್‌ನಲ್ಲಿ ವಿಕ್ಕಿ ವರುಣ್ ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದು, ಎಲ್ಲರ ಮೆಚ್ಚುಗೆಗೆ ಕಾರಣವಾಗುತ್ತಿದೆ.

  ನಿರ್ದೇಶಕ ಸೂರಿ ಹಾಗೂ ಯೋಗರಾಜ್ ಭಟ್ ಕೈ ಕೆಳಗೆ ಪಳಗಿದ ಪ್ರತಿಭೆ ವಿಕ್ಕಿ ವರುಣ್. ನಿರ್ದೇಶಕನಾಗಲು ಬಂದ ವಿಕ್ಕಿಗೆ ಮೊದಲು ಅವಕಾಶ ಸಿಕ್ಕಿದ್ದು ನಟನಾಗಿ. ನಾಯಕ ನಟನಾಗಿ ಎರಡು ಚಿತ್ರ ಮಾಡಿ ಗೆದ್ದ ವಿಕ್ಕಿ ವರುಣ್ ಈಗ ಮೂರನೇ ಚಿತ್ರಕ್ಕೆ ನಟನೆಯ ಜೊತೆಗೆ ನಿರ್ದೇಶನವನ್ನು ಮಾಡಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅರ್ಪಣೆಯಲ್ಲಿ 'ಕಾಲಾಪತ್ಥರ್' ಮೂಡಿಬರಲಿದೆ. ವಿಕ್ಕಿ ವರುಣ್‌ಗೆ ಸಿನಿಮಾದಲ್ಲಿ ನಾಯಕಿಯಾಗಿ ಧನ್ಯ ರಾಮ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಜೂನ್ ನಲ್ಲಿ ಸಿನಿಮಾ ರಿಲೀಸ್ ಮಾಡುವ ತಯಾರಿಯಲ್ಲಿದೆ.

  ಚಿತ್ರದ ನಾಯಕಿಯಾಗಿ ಧನ್ಯ ರಾಮ್ ಕುಮಾರ್ ಹಳ್ಳಿ ಹುಡುಗಿ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧನ್ಯ ಪಾತ್ರದ ಫಸ್ಟ್ ಲುಕ್ ಇಂದು(ಏಪ್ರಿಲ್ 24) ವರನಟ ಡಾ.ರಾಜ್ ಕುಮಾರ್ ಜನ್ಮ ದಿನದ ವಿಶೇಷವಾಗಿ ಬಿಡುಗಡೆ ಮಾಡಲಾಗಿದೆ. 'ಕಾಲಾಪತ್ಥರ್' ಸತ್ಯಪ್ರಕಾಶ್ ಬರೆದಿರುವ ಕಥೆ . ಒಂದು ಗಟ್ಟಿ ಕಥೆಯನ್ನಿಟ್ಟುಕೊಂಡು ಔಟ್ ಅಂಡ್ ಔಟ್ ಕಮರ್ಷಿಯಲ್ ಆಗಿ ವಿಕ್ಕಿ 'ಕಾಲಾಪತ್ಥರ್' ನ ಕಟ್ಟಿಕೊಡೋ ಪ್ರಯತ್ನ ಮಾಡಿದ್ದಾರಂತೆ. ಈ ಚಿತ್ರವನ್ನು ನಿರ್ದೇಶನ ಮಾಡುವುದರ ಜೊತೆಗೆ ಪ್ರಮುಖ ಪಾತ್ರದಲ್ಲೂ ನಟಿಸಿರೋ ವಿಕ್ಕಿ, ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಸಖತ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಿಲೀಸ್ ಆಗಿರೋ ಪೋಸ್ಟರ್, ಟೈಟಲ್ ಮತ್ತು ವಿಕ್ಕಿ ಲುಕ್ ಸಿನಿಮಾ ಮೇಲಿನ ಕುತೂಹಲವನ್ನು ಹೆಚ್ಚಿಸುತ್ತಿದೆ. ಜೊತೆಗೆ ವರ್ಕಿಂಗ್ ಸ್ಟಿಲ್‌ಗಳಲ್ಲಿ ವಿಕ್ಕಿ ಧನ್ಯಾ ಕಾಂಬಿನೇಷನ್ ಆಕರ್ಷಕವಾಗಿದೆ. ಭುವನ್ ಮೂವೀಸ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬಂದಿದೆ.

  ಹಿರಿಯ‌ ನಟ ನಿರ್ದೇಶಕ ನಾಗಭರಣ, ರಾಜೇಶ್ ನಟರಂಗ , ಕೆಜಿಎಫ್ ಸಂಪತ್ ಸೇರಿದಂತೆ ಪ್ರತಿಭಾವಂತ ತಾರಾಬಳಗ ಈ ಚಿತ್ರಕ್ಕಿದೆ. ಸಂದೀಪ್ ಕುಮಾರ್ ಛಾಯಾಗ್ರಹಣವಿರೋ 'ಕಾಲಾಪತ್ಥರ್' ಗೆ ಅನೂಪ್ ಸೀಳಿನ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನವಿದೆ. ಬಿಜಾಪುರದ ಜೈನಾಪುರ , ಜಮ್ಮು ಕಾಶ್ಮೀರ, ರಾಜಸ್ಥಾನದಲ್ಲಿ ಚಿತ್ರೀಕರಣ ಮಾಡಿದ್ದು, ಚಿತ್ರದ ಟಾಕಿ ಪೋರ್ಷನ್ ಮುಕ್ತಾಯಗೊಂಡಿದೆ. ಇನ್ನೊಂದು ಸಾಹಸ ಸನ್ನಿವೇಶವನ್ನು ಚಿತ್ರೀಕರಿಸಿ, 'ಕಾಲಾಪತ್ಥರ್' ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆಯುವ ಪ್ಲಾನ್‌ನಲ್ಲಿರೋ ಚಿತ್ರತಂಡ. ಈ ಸಿನಿಮಾ ಜೂನ್‌ನಲ್ಲಿ‌ ಪ್ರೇಕ್ಷಕರೆದುರಿಗೆ ಬರುವ ತಯಾರಿಯಲ್ಲಿದೆ.

  Vicky Varun Back With a New Film Called Kaala Patthar.

  ಸುರೇಶ್, ನಾಗರಾಜ್ (ಬಿಲ್ಲಿನ ಕೋಟೆ) ಸ್ನೇಹಿತರು ಜೊತೆಗೂಡಿ ನಿರ್ಮಿಸ್ತಿರೋ 'ಕಾಲಾಪ್ಥರ್' ಹಲವಾರು ವಿಶೇಷತೆಗಳನ್ನ ಹೊಂದಿದ್ದು, ಇಲ್ಲಿಂದ ಒಂದೊಂದೇ ವಿಚಾರವನ್ನು ಹೊರ ಬಿಡೋ ಮೂಲಕ ಪ್ರಚಾರ ಮಾಡಲು ಹೊರಟಿದೆ ಚಿತ್ರತಂಡ. ಸದ್ಯ ಮೊದಲ ಹಂತದಲ್ಲಿ ಫಸ್ಟ್ ಲುಕ್ ರಿಲೀಸ್ ಮಾಡಿರುವ ಚಿತ್ರತಂಡಕ್ಕೆ ಉತ್ತಮ ರೆಸ್ಪಾನ್ಸ್ ಕೂಡ ಸಿಗುತ್ತಿದೆ. ವಿಕ್ಕಿ ವರುಣ್ ಲುಕ್ ಮತ್ತು ಧನ್ಯ ರಾಮ್‌ಕುಮಾರ್ ಕಾಂಬಿನೇಷನ್‌ಗೆ ಮೆಚ್ಚುಗೆ ಕೂಡ ವ್ಯಕ್ತವಾಗಿದ್ದು, ಸಿನಿಮಾವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತುರರಾಗಿದ್ದಾರೆ.

  English summary
  Vicky Varun back with a new film called Kaala Patthar. Here is more details about movie
  Monday, April 25, 2022, 10:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X